ಬುಧವಾರ, 7 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಸೆಸ್ಸೆಲ್ಸಿ ಪರೀಕ್ಷೆ ಓದುವ ಸರಳ ವಿಧಾನಗಳು

ಎಸ್ಸೆಸ್ಸೆಲ್ಸಿ ಪರೀಕ್ಷೆ
Last Updated 11 ಜುಲೈ 2021, 19:33 IST
ಅಕ್ಷರ ಗಾತ್ರ

ಈ ವರ್ಷ ಏನು ಓದಬೇಕು? ಹೇಗೆ ಓದಬೇಕು?ಪರೀಕ್ಷೆಇರುತ್ತದೋ ಇಲ್ಲವೋ? ಪರೀಕ್ಷೆಗೆ ತಯಾರಿ ಹೇಗೆ? ಹೀಗೆ ಹಲವಾರು ಗೊಂದಲಗಳ ನಡುವೆಯೇ ಒಂದು ವರ್ಷ ಮುಗಿದೇ ಹೋಯಿತು ಹಾಗೂ ಪರೀಕ್ಷೆಯೂ ಬಂತು! ಯಾರೂ ಕಂಡು ಕೇಳರಿಯದ ರೀತಿಯ ಈ ಸನ್ನಿವೇಶಕ್ಕೆ ಹೊಂದಿಕೊಳ್ಳುವ ಆತಂಕದ ಮಧ್ಯದಲ್ಲಿಯೇ ಪರೀಕ್ಷೆಗೆ ತಯಾರಿ ಮಾಡಿಕೊಳ್ಳುವ ಸಂದರ್ಭ ಬಂದಿದೆ.

ಆದರೆ, ಇಂತಹ ಸನ್ನಿವೇಶದ ಮಧ್ಯೆಯೂ ಓದಿನ ಕಡೆ ಗಮನಕೊಟ್ಟು ನೀವೆಲ್ಲಾ ಚೆನ್ನಾಗಿಯೇ ಓದಿದ್ದೀರಿ. ನಿಮಗೆಲ್ಲಾ ಅಭಿನಂದನೆಗಳು.

ಈ ಬಾರಿಯ ಪರೀಕ್ಷೆಯ ರೀತಿಯೂ ಬದಲಾಗಿದೆ. ಬದಲಾದ ಪರೀಕ್ಷೆಯ ರೀತಿ, ಮಾದರಿ ಪ್ರಶ್ನೆಗಳು, ಹೀಗೆ ಹಲವಾರು ಅತಿಮುಖ್ಯವಾದ ವಿಷಯಗಳ ಬಗ್ಗೆ ಶಿಕ್ಷಕರು, ತಜ್ಞರು ಈಗಾಗಲೇ ತಿಳಿಸಿದ್ದಾರೆ ಹಾಗೂ ಎಲ್ಲರಲ್ಲೂ ಆತ್ಮವಿಶ್ವಾಸ ತುಂಬಿದ್ದಾರೆ.

ಈ ಲೇಖನದಲ್ಲಿ, ಈ ಬಾರಿಯ ಬದಲಾದ ಪರೀಕ್ಷಾ ವಿಧಾನಕ್ಕೆ ಹೇಗೆ ಓದಬೇಕು ಎನ್ನುವ ಬಗ್ಗೆ ಕೆಲವು ವಿಷಯಗಳನ್ನು ತಿಳಿಸುವ ಪ್ರಯತ್ನ ಮಾಡಲಾಗಿದೆ.

1. ಈ ವರ್ಷದ ಪರೀಕ್ಷೆಯಲ್ಲಿ ಎಲ್ಲ ಪ್ರಶ್ನೆಗಳೂ ಬಹು ಆಯ್ಕೆ ಪ್ರಶ್ನೆಗಳಾಗಿರುತ್ತವೆ. ಈ ಪ್ರಶ್ನೆಗಳನ್ನು ಸಮರ್ಥವಾಗಿ ಉತ್ತರಿಸಲು ಹೀಗೆ ಮಾಡಿ.

*ಪ್ರತಿ ಪರೀಕ್ಷಾ ಅವಧಿಯನ್ನು ಮೂರು ಭಾಗಗಳಾಗಿ ವಿಂಗಡಿಸಿಕೊಳ್ಳಿ

*ಮೊದಲ ಕೆಲವು ನಿಮಿಷಗಳನ್ನು ಪ್ರಶ್ನೆಗಳನ್ನು ಓದಲು ಮೀಸಲಿಡಿ. ಎಲ್ಲ ಪ್ರಶ್ನೆಗಳನ್ನೂ ವೇಗವಾಗಿ ಒಮ್ಮೆ ಓದಿ. ಯಾವ ಪ್ರಶ್ನೆಗಳು ಸುಲಭ, ಯಾವುವು ಕಷ್ಟ ಎನ್ನುವುದನ್ನು ಮನನ ಮಾಡಿಕೊಳ್ಳಿ.

*ನಂತರದ ಹೆಚ್ಚು ಸಮಯವನ್ನು ಸುಲಭವಾದ ಹಾಗೂ ನಿಮಗೆ ತಿಳಿದಿರುವ ಪ್ರಶ್ನೆಗಳನ್ನು ಉತ್ತರಿಸಲು ವಿನಿಯೋಗಿಸಿ.

*ಕೊನೆಯ ಕೆಲವು ನಿಮಿಷಗಳನ್ನು ನಿಮಗೆ ಕಷ್ಟವಾದ ಪ್ರಶ್ನೆಗಳನ್ನು ಉತ್ತರಿಸಲು ಬಳಸಿ.

2. ಈ ಪಾಠಗಳನ್ನು ಓದಲು ಈ ವಿಧಾನಗಳೂ ಸಹಕಾರಿಯಾಗಬಲ್ಲವು

*ಎಲ್ಲ ಪಾಠಗಳ ಮುಖ್ಯ ವಿಷಯಗಳ ಮೈಂಡ್ ಮ್ಯಾಪ್ ಮಾಡಿಕೊಳ್ಳಿ (ಇಡೀ ಪಾಠದ್ದಲ್ಲ). ಇದರಿಂದ ಇಡೀ ಪಾಠದ ಪ್ರತಿ ಮುಖ್ಯ ಅಂಶಗಳನ್ನು ಸುಲಭವಾಗಿ ನೆನಪಿನಲ್ಲಿಡಲು, ಪುನರಾವರ್ತಿಸಲು ಹಾಗೂ ಬಹು ಆಯ್ಕೆ ಪ್ರಶ್ನೋತ್ತರಗಳಿಗೆ ತಯಾರಿ ನಡೆಸಲು ಬಹಳ ಸಹಾಯವಾಗುತ್ತದೆ.

ಈ ಕೆಳಗಿನ ಉದಾಹರಣೆಯನ್ನು ಗಮನಿಸಿ. ಇಲ್ಲಿ ವಿದ್ಯುಚ್ಛಕ್ತಿ ಪಾಠದ ಒಂದು ಮುಖ್ಯ ಅಂಶವಾದ ವಿದ್ಯುತ್‌ ಪ್ರವಾಹದ ಬಗ್ಗೆ ಮಾತ್ರ ಮೈಂಡ್ ಮ್ಯಾಪ್ ಮಾಡಲಾಗಿದೆ.

ಎಷ್ಟುಸರಳಹಾಗೂ ಉಪಯುಕ್ತ ಅಲ್ಲವೇ?

ಈ ಮೈಂಡ್ ಮ್ಯಾಪ್‌ಗಳು, ಭಾಷೆಗಳು, ವಿಜ್ಞಾನ ಹಾಗೂ ಸಮಾಜ ವಿಜ್ಞಾನ ವಿಷಯಗಳನ್ನು ಪುನರಾವರ್ತಿಸಲು, ನೆನಪಿನಲ್ಲಿಡಲು ಹೆಚ್ಚು ಉಪಯುಕ್ತ.

*ಗಣಿತ ವಿಷಯದಲ್ಲಿನ ಬಹು ಆಯ್ಕೆ ಪ್ರಶ್ನೆಗಳನ್ನು ಉತ್ತರಿಸಲು ಗಣಿತದ ಸಮಸ್ಯೆಗಳನ್ನು ಅಭ್ಯಾಸ ಮಾಡುವುದರ ಜೊತೆಗೆ ಕೆಲವು ಬಾರಿ ಹಲವುಸರಳ, ತಾಳೆ ನೋಡುವ ವಿಧಾನಗಳೂ ಸಹಾಯಕವಾಗಬಲ್ಲವು.

ಉದಾ: ಎಲ್ಲಸಂಖ್ಯೆಗಳನ್ನೂಒಂದಂಕಿಯನ್ನಾಗಿಪರಿವರ್ತಿಸಿ ತಾಳೆ ನೋಡುವವಿಧಾನ.

ಈ ಉದಾಹರಣೆಯನ್ನು ಗಮನಿಸಿ.

ಈ ವರ್ಗ ಸಮೀಕರಣದ ಅಪವರ್ತನಗಳು ಯಾವುವು? :

6x2 – x – 2 = 0

a) (3x-2) (2x+1)

b) (3x-2) (x+1)

c) (3x-2)(4x+1)

d) (3x-2) (2x-1)

ಇಲ್ಲಿ ಪ್ರಶ್ನೆಯಲ್ಲಿರುವ ಅಂಕಿಗಳನ್ನು ಒಂದಂಕಿಯನ್ನಾಗಿ ಪರಿವರ್ತಿಸಿ. (ಅಂದರೆ ಎಲ್ಲ ಸಹಗುಣಕಗಳ ಮೊತ್ತವನ್ನು ಕಂಡುಹಿಡಿದು ಒಂದಂಕಿಯನ್ನಾಗಿ ಪರಿವರ್ತಿಸಿ)

ಇಲ್ಲಿ ಪ್ರಶ್ನೆಯ ಒಂದಂಕಿ 6 -1 -2 = 3 ಅಲ್ಲವೇ?

ಈಗ ಉತ್ತರಗಳನ್ನು ಒಂದಂಕಿಯನ್ನಾಗಿ ಪರಿವರ್ತಿಸಿ.

a) (3-2) (2+1) = 1 x 3 = 3

b) (3-2) (1+1) = 1 x 2 = 2

c) (3-2) (4+1) = 1 x 5 = 5

d) (3-2) (2-1) = 1 x 1 = 1

ಗಮನಿಸಿ, (a) ಆಯ್ಕೆಯ ಒಂದಂಕಿಯು (3), ಪ್ರಶ್ನೆಯ ಒಂದಂಕಿಗೆ ಸಮನಾಗಿದೆ (3) ಆದ್ದರಿಂದ ಸರಿಯಾದ ಆಯ್ಕೆ (a)

ಎಷ್ಟು ಸುಲಭ ಅಲ್ಲವೇ !!

(ಗಮನಿಸಿ, ಇದು ಕೇವಲ ಒಂದು ರೀತಿಯ ತಾಳೆ ನೋಡುವ ಪದ್ಧತಿ ಮಾತ್ರ. ಒಂದಕ್ಕಿಂತ ಹೆಚ್ಚು ಆಯ್ಕೆಗಳ ಒಂದಂಕಿಗಳು ಒಂದೇ ಆಗಿದ್ದರೆ ಈ ಪದ್ಧತಿಯು ಅನ್ವಯಿಸುವುದಿಲ್ಲ. ನಿಮ್ಮ ಶಿಕ್ಷಕರ ಬಳಿ ಈ ರೀತಿಯ ಹಲವು ವಿಧಾನಗಳ ಬಗ್ಗೆ ಕಲಿಯಿರಿ.)

ಎಸ್ಸೆಸ್ಸೆಲ್ಸಿ ಪರೀಕ್ಷೆ ಓದುವ ಸರಳ ವಿಧಾನಗಳು

3. ಕೊನೆಯದಾಗಿ, ನಿಮಗೆ ಉತ್ತರ ಗೊತ್ತಿಲ್ಲದ ಪ್ರಶ್ನೆಗಳ ಬಗ್ಗೆಯೂ ಯೋಚಿಸಿ ಉತ್ತರಿಸಲು ಪ್ರಯತ್ನಿಸಿ. ಈ ಪ್ರಶ್ನೆಗಳನ್ನು ಕೊನೆಯಲ್ಲಿ ಉತ್ತರಿಸಿ.

ಈ ಬಾರಿಯ ಬಹು ಆಯ್ಕೆ ಪ್ರಶ್ನೆಗಳು ನೇರವಾದ, ಸರಳವಾದ ಪ್ರಶ್ನೆಗಳೇ ಆಗಿರುವುದರಿಂದ ಆತಂಕ ಪಡಬೇಡಿ. ಆದರೆ ಸರಿಯಾಗಿ, ಆಸಕ್ತಿಯಿಂದ, ಗಮನವಿಟ್ಟು ಓದುವುದನ್ನು ಮರೆಯಬೇಡಿ.

ಇಲ್ಲಿ ಕೆಲವೇ ಕೆಲವು ವಿಧಾನಗಳ ಬಗ್ಗೆ ತಿಳಿಸಲಾಗಿದೆ. ನಿಮ್ಮ ಶಿಕ್ಷಕರು ನಿಮಗೆ ಈಗಾಗಲೇ ಬಹಳಷ್ಟುಸರಳವಿಧಾನಗಳನ್ನು ತಿಳಿಸಿರುತ್ತಾರೆ. ಅಲ್ಲವೇ? ಅವೆಲ್ಲವನ್ನೂ ಅಳವಡಿಸಿಕೊಂಡು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆಯಿರಿ.

(ಲೇಖಕರು: ನಿರ್ದೇಶಕರು, ಸ್ಮಾರ್ಟ್ ಸೆರೆಬ್ರಮ್, ಬೆಂಗಳೂರು)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT