ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾದರಿ ಪ್ರಶ್ನೋತ್ತರ: ಸಾಮಾನ್ಯ ಜ್ಞಾನ

ಸಾಮಾನ್ಯ ಜ್ಞಾನ
Last Updated 8 ಜೂನ್ 2022, 19:30 IST
ಅಕ್ಷರ ಗಾತ್ರ

ಕೆಪಿಎಸ್‌ಸಿ ಗ್ರೂಪ್‌ ‘ಸಿ’ಯ ವಿವಿಧ ಹುದ್ದೆಗಳು, ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ವಿಶೇಷ ಮೀಸಲು ಸಬ್ಇನ್‌ಸ್ಪೆಕ್ಟರ್ (ಕೆಎಸ್‌ಆರ್‌ಪಿ ಆ್ಯಂಡ್‌ ಐಆರ್‌ಬಿ) ಹಾಗೂ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಯ ಸಬ್ ಇನ್‌ಸ್ಪೆಕ್ಟರ್ ಹುದ್ದೆಗಳ ನೇರ ನೇಮಕಾತಿಗಾಗಿ ಶೀಘ್ರದಲ್ಲೇ ಸ್ಪರ್ಧಾತ್ಮಕ ಪರೀಕ್ಷೆಗಳು ನಡೆಯಲಿವೆ. ಈ ಮೂರು ಪರೀಕ್ಷೆಗಳಲ್ಲಿರುವ ‘ಸಾಮಾನ್ಯ ಜ್ಞಾನ’ ವಿಷಯಕ್ಕೆ ಸಂಬಂಧಿಸಿದ ಮಾದರಿ ಪ್ರಶ್ನೋತ್ತರಗಳನ್ನು ಇಲ್ಲಿ ನೀಡಲಾಗಿದೆ.

1) ಕೆಳಗಿನ ಹೇಳಿಕೆಗಳನ್ನು ಗಮನಿಸಿ.

1) ವಿದ್ಯುತ್ ಚಾಲಿತ ವಾಹನಗಳಲ್ಲಿ ಬಳಸುವ ಲಿಥಿಯಂ ಬ್ಯಾಟರಿಗಳ ಬದಲಿಗೆ ಹೊಸ ತಲೆಮಾರಿನ ಘನಸ್ಥಿತಿ ( ಸಾಲಿಡ್ ಸ್ಟೇಟ್) ಬ್ಯಾಟರಿ ತಂತ್ರಜ್ಞಾನವನ್ನು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳು ಆವಿಷ್ಕರಿಸಿದ್ದಾರೆ.

2) ಬೆಂಗಳೂರಿನ ಸ್ಟಾರ್ಟ್ಅಪ್ ನಾರ್ಡಿಸ್ಚ್‌ ಟೆಕ್ನಾಲಜೀಸ್(NORDISCHE TECHNOLOGIES) ವಿಶ್ವದಲ್ಲಿಯೇ ಅತಿವೇಗವಾಗಿ ಜಾರ್ಜ್ ಆಗುವ ಹಾಗೂ ಬೆಂಕಿ ಹತ್ತಿಕೊಳ್ಳದ ಅಲ್ಯೂಮಿನಿಯಂ ಐಯಾನ್ ಗ್ರಾಫೇನ್‌ ಪೌಚ್‌ ಸೆಲ್ಸ್‌ (Aluminum Ion Graphene Pouch Cells) ತಂತ್ರಜ್ಞಾನವನ್ನು ಸೆಂಟ್ರಲ್ ಇನ್ಸ್‌ಟಿಟ್ಯೂಟ್ ಆಫ್ ಪೆಟ್ರೋಕೆಮಿಕಲ್ ಎಂಜಿನಿಯರಿಂಗ್‌ ಮತ್ತು ಟೆಕ್ನಾಲಜಿಯ ಜತೆಗೂಡಿ ಸಂಶೋಧನೆ ಮಾಡಿದೆ.

ಉತ್ತರ ಸಂಕೇತಗಳು

ಎ) 1ನೇ ಹೇಳಿಕೆ ಮಾತ್ರ ಸರಿಯಾಗಿದೆ

ಬಿ) 2ನೇ ಹೇಳಿಕೆ ಮಾತ್ರ ಸರಿಯಾಗಿದೆ

ಸಿ) ಯಾವ ಹೇಳಿಕೆಯೂ ಸರಿಯಾಗಿಲ್ಲ

ಡಿ) 1 ಮತ್ತು 2 ಎರಡೂ ಹೇಳಿಕೆಗಳು ಸರಿಯಾಗಿವೆ

ಉತ್ತರ: ಡಿ

2) ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಅನುಗುಣವಾಗಿ ಈ ಕೆಳಗೆ ಸೂಚಿಸಿರುವ ಯಾವ ಶಾಲೆಯನ್ನು ಆರಂಭಿಸಲು ನಿಶ್ಚಯಿಸಲಾಗಿದೆ?

ಎ) ಅಟಲ್ ಇನ್ನೋವೇಟಿವ್‌ ಸ್ಕೂಲ್ ‌‌

ಬಿ) ಪಿಎಂಶ್ರೀ ಸ್ಕೂಲ್

ಸಿ) ಶ್ರೀವಿದ್ಯಾಕೇಂದ್ರ

ಡಿ) ಮೇಲಿನ ಯಾವುದೂ ಅಲ್ಲ

ಉತ್ತರ: ಬಿ

3) ವಿಶ್ವದ ಅತಿ ವೇಗದ ಸೂಪರ್ ಕಂಪ್ಯೂಟರ್ ಮತ್ತು ಕೃತಕ ಬುದ್ದಿಮತ್ತೆ ಎಂದು ಯಾವುದನ್ನು ಗುರುತಿಸಲಾಗಿದೆ?

ಎ) ಫ್ರಾಂಟಿಯರ್(Frontier)

ಬಿ) ಪರಮ್

ಸಿ) ಆಕಾಶ್‌

ಡಿ) ಮೇಲಿನ ಯಾವುದೂ ಅಲ್ಲ

ಉತ್ತರ: ಎ

4) ಕೆಳಗಿನ ಹೇಳಿಕೆಗಳನ್ನು ಗಮನಿಸಿ

1) ಅರಬ್ಬೀ ಸಮುದ್ರದಲ್ಲಿ 3680 ಬಗೆಯ ಮೀನಿನ ಸಂತತಿಗಳಿವೆ. ಇದರಲ್ಲಿ ಶೇ 15ರಷ್ಟು ನಮ್ಮ ರಾಜ್ಯದ ಕರಾವಳಿಯ ಮೂರು ಜಿಲ್ಲೆಗಳಲ್ಲಿವೆ.

2) ನಮ್ಮ ರಾಜ್ಯದ ಮಂಗಳೂರಿನ ತಣ್ಣೀರು ಬಾವಿಯಲ್ಲಿ ಡಾಲ್ಫಿನ್ ಸಂರಕ್ಷಣಾ ಕೇಂದ್ರ ಆರಂಭವಾಗಲಿದೆ.

ಉತ್ತರ ಸಂಕೇತಗಳು

ಎ) 1ನೇ ಹೇಳಿಕೆ ಮಾತ್ರ ಸರಿಯಾಗಿವೆ

ಬಿ) 2ನೇ ಹೇಳಿಕೆ ಮಾತ್ರ ಸರಿಯಾಗಿವೆ

ಸಿ) ಯಾವ ಹೇಳಿಕೆಯೂ ಸರಿಯಾಗಿಲ್ಲ

ಡಿ) 1 ಮತ್ತು 2 ಎರಡೂ ಹೇಳಿಕೆಗಳು ಸರಿಯಾಗಿವೆ.

ಉತ್ತರ: ಡಿ

5) ನವದೆಹಲಿಯ ಇಂಡಿಯಾ ಗೇಟ್ ಬಳಿಯಲ್ಲಿ ನಿರ್ಮಿಸಲಾಗುವ ನೇತಾಜಿ ಸುಭಾಷ್ ಚಂದ್ರ ಬೋಸ್ ಪ್ರತಿಮೆಯನ್ನು ಯಾರು ಕೆತ್ತಲಿದ್ದಾರೆ?

ಎ) ಜಯರಾಜ್ ಕುಮಾರ್‌

ಬಿ) ಅರುಣ್ ಯೋಗಿರಾಜ್

ಸಿ) ರಾಮಚರಣ ಪ್ರಸಾದ್

ಡಿ) ಮೇಲಿನ ಯಾರೂ ಅಲ್ಲ

ಉತ್ತರ: ಬಿ

6) ಇಸ್ರೇಲ್ ದೇಶದೊಂದಿಗೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿಹಾಕಿದ ಮೊದಲ ದೇಶ ಯಾವುದು?

ಎ) ಕತಾರ್

ಬಿ) ಇರಾನ್

ಸಿ) ಇರಾಕ್

ಡಿ) ಯು ಎ ಇ

ಉತ್ತರ: ಡಿ

7) ಭೂಮಿಯ ಮೇಲಿನ ಅತಿದೊಡ್ಡ ಸಮುದ್ರದ ಸಸ್ಯ ಎಲ್ಲಿ ಪತ್ತೆ ಹಚ್ಚಲಾಗಿದೆ?

ಎ) ಆಫ್ರಿಕಾದ ಕರಾವಳಿ

ಬಿ) ಭಾರತದ ಕರಾವಳಿ

ಸಿ) ಜಪಾನ್ ದೇಷದ ಕರಾವಳಿ

ಡಿ) ಆಸ್ಟ್ರೇಲಿಯಾದ ಕರಾವಳಿ

ಉತ್ತರ: ಡಿ

8) ದೇಶದಲ್ಲಿ ಶೇ 44ರಷ್ಟು ಚಿನ್ನದ ನಿಕ್ಷೇಪ ಇರುವುದಾಗಿ ಜಿಯಾಲಜಿಕಲ್ ಸರ್ವೆ ಆಫ್ ಇಂಡಿಯಾ ಸಮೀಕ್ಷೆ ತಿಳಿಸಿದೆ. ಯಾವ ರಾಜ್ಯದಲ್ಲಿ ಈ ನಿಕ್ಷೇಪ ಪತ್ತೆ ಹಚ್ಚಿರುವುದಾಗಿ ಅದು ತಿಳಿಸಿದೆ?

ಎ) ಉತ್ತರಪ್ರದೇಶ

ಬಿ) ಬಿಹಾರ್

ಸಿ) ಮಹಾರಾಷ್ಟ್ರ

ಡಿ) ಅಸ್ಸಾಂ

ಉತ್ತರ: ಬಿ

(ಮಾಹಿತಿ: Spardha Bharati UPSC ಯೂಟ್ಯೂಬ್ ಚಾನೆಲ್‌)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT