ವಿಠ್ಠಲ ದಳವಾಯಿ
ನಮ್ಮ ದೇಶವು ಹಲವಾರು ರಾಜ್ಯ, ಪ್ರದೇಶ, ಧರ್ಮ, ಸಂಸ್ಕೃತಿಗಳನ್ನು ಹೊಂದಿರುವ ಭಾಷೆ, ಉಪಭಾಷೆಗಳನ್ನು ಮಾತನಾಡುವ ಜನರ ವೈವಿಧ್ಯತೆಯ ದೇಶವಾಗಿದ್ದು, ಇಲ್ಲಿ ವರ್ಗಕೋಣೆಯೆಂದರೆ ಒಂದು ಪ್ರಾತಿನಿಧಿಕ ಬಹುತ್ವ ಭಾರತವೇ ಆಗಿರುತ್ತದೆ. ಬಹುಭಾಷಿಕತೆಯು ಭಾರತೀಯ ಸಮಾಜ ಹಾಗೂ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಇದು ಕೇವಲ ಒಂದಕ್ಕಿAತ ಹೆಚ್ಚು ಭಾಷೆಗಳನ್ನು ಮಾತನಾಡುವ ಸಾಮರ್ಥ್ಯವಷ್ಟೇ ಅಲ್ಲದೇ ವಿವಿಧ ಸಂಸ್ಕೃತಿ ಹಾಗೂ ಜೀವನವಿಧಾನಗಳನ್ನು ಪ್ರತಿಬಿಂಬಿಸುವುದರಿAದ ಭಾರತದ ಬಹುಭಾಷಿಕತೆಯು ವ್ಯಾಪಕ ಹಾಗೂ ವಿಶಿಷ್ಟವಾಗಿದೆ. ಇಂಗ್ಲೀಷ್ ಅಥವಾ ಯಾವುದೇ ಅಪರಿಚಿತ ಭಾಷೆಯನ್ನು ಮಗುವಿನ ಮನೆಮಾತಿನ ಸಹಾಯದಿಂದ ಕಲಿಸುವುದು ಒಂದು ಹೊಸ ಪರಿಕಲ್ಪನೆಯಾಗಿದೆ.
ಬಹುಭಾಷಿಕ ಬೋಧನೆ ಏಕೆ?
ಬಹಳಷ್ಟು ತಜ್ಞರ ಅಭಿಪ್ರಾಯದಂತೆ ಭಾಷೆ ಎಂದರೆ ಸಂವಹನ ಮಾತ್ರವಲ್ಲ. ಅದು ಒಂದು ಸಮುದಾಯದೊಳಗೆ ಅಂತರ್ಗತವಾದ ಸಂಸ್ಕೃತಿ, ಪರಂಪರೆ ಮತ್ತು ಜ್ಞಾನಸಂಪತ್ತುಗಳ ಆಳ ಕಣಜವೂ ಹೌದು. ಆದರೆ ಭಾರತದ ವರ್ತಮಾನದ ವರ್ಗಕೋಣೆಗಳು ಏಕಭಾಷೆ ಅಂದರೆ ಇಂಗ್ಲೀಷ್ ಕಡೆ ವಾಲುತ್ತಿವೆ. ಜಾಗತೀಕರಣದ ನಂತರ ಈ ಪರಿಸ್ಥಿತಿ ಇನ್ನೂ ಉಲ್ಭಣಗೊಂಡಿದ್ದು ಭಾಷಾ ಏಕಸ್ವಾಮ್ಯತೆಗೆ ಕಾರಣವಾಗಿದೆ. ದುರದೃಷ್ಟವಶಾತ್ ಈ ಪ್ರವೃತ್ತಿಯು ಕ್ರಮೇಣ ಸ್ಥಳೀಯ ಹಾಗೂ ದೇಸಿ ಭಾಷೆಗಳ ನಶಿಸುವಿಕೆಯನ್ನುಂಟು ಮಾಡುವುದಲ್ಲದೇ ಅವುಗಳ ಜೊತೆಗ ಮಿಳಿತವಾದ ಸಂಸ್ಕೃತಿ, ಈ ಸಮುದಾಯಗಳ ವಿಧಿಷ್ಟ ಜ್ಞಾನ ರಚನೆಗಳ ಕಣ್ಮರೆಯಾಗುತ್ತವೆ.
ಉದಾಹರಣೆಗೆ, ಕಾಡಿನಲ್ಲಿ ವಾಸಿಸುವ ಬುಡಕಟ್ಟು ಸಮುದಾಯಗಳನ್ನೇ ನೋಡಿದಾಗ, ಅವುಗಳು ಕಾಡಿನ ಸಂಪನ್ಮೂಲಗಳ ಆಳವಾದ ಜ್ಞಾನ, ಸಸ್ಯ, ಪ್ರಾಣಿಗಳು ಹಾಗೂ ನೈಸರ್ಗಿಕ ವಿಕೋಪಗಳನ್ನು ತಡೆಯುವ ತಂತ್ರಗಾರಿಕೆ ಎಲ್ಲವೂ ಅವುಗಳ ಜನಪದದಲ್ಲೇ ಪ್ರತಿಬಿಂಬಿತವಾಗಿರುತ್ತವೆ. ಆದಾಗ್ಯೂ ಮುಖ್ಯವಾಹಿನಿ ಸಮುದಾಯದೊಂದಿಗೆ ವ್ಯವಹರಿಸುವಾಗ ತಮ್ಮ ಭಾಷೆಗೆ ಯಾವುದೇ ಗೌರವ ಅಥವಾ ಪ್ರಯೋಜನ ಇಲ್ಲವೆಂದು ಅರಿವಾದಾಗ, ಅವು ತಮ್ಮ ರಾಜ್ಯದ ಮುಖ್ಯಭಾಷೆಯನ್ನು ಮಾತಾಡಲು ತೊಡಗಬಹುದು. ಇದರಿಂದಾಗಿ ಅವುಗಳ ಪಾರಂಪರಿಕ ಭಾಷೆ ಮತ್ತು ಅದರಿಂದ ಬಂದ ಜ್ಞಾನವೆಲ್ಲವೂ ಕಾಲಾಂತರದಲ್ಲಿ ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳಬಹುದು.
ತಮ್ಮ ಮನೆಮಾತು ಹಾಗೂ ಶಾಲಾ ಭಾಷೆಯ ನಡುವಿನ ಅಂತರದಿಂದಾಗಿ, ಪ್ರಾಥಮಿಕ ತರಗತಿಗಳಲ್ಲಿ ಕಲಿಯುವ ಶೇ25ರಷ್ಟು ಮಕ್ಕಳು ಕಲಿಕೆಯಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆಂದು ಅಂದಾಜಿಸಲಾಗಿದೆ. ಅಪರಿಚಿತ ಭಾಷೆಗಳನ್ನು ಕಲಿಯುವುದು ಅವರಿಗೆ ಸವಾಲಾಗಿದೆ. ಅಲ್ಲದೇ ಒಂದು ರಾಜ್ಯದಲ್ಲಿ ವಾಸಿಸುವ ಮಕ್ಕಳ ಮಾತೃಭಾಷೆಯು ರಾಜ್ಯಭಾಷೆಗಿಂತ ಭಿನ್ನವಾಗಿರುತ್ತದೆ ಅಥವಾ ಅಂತರರಾಜ್ಯ ಗಡಿಗಳಲ್ಲಿ ಜೀವಿಸುವ ಮಕ್ಕಳು ತಮ್ಮ ಮಾತೃಭಾಷೆಗೆ ಹೊರತಾದ ಇನ್ನೊಂದು ಭಾಷೆಯಲ್ಲಿ ಕಲಿಯುತ್ತಿರುತ್ತಾರೆ. ಇಂಗ್ಲೀಷ್ ಮಾಧ್ಯಮದ ಶಾಲೆಗಳಲ್ಲಿ ಓದುವ ಹೆಚ್ಚಿನ ಮಕ್ಕಳಿಗೆ ಶಾಲಾ ಪರಿಸರದಿಂದ ಹೊರಗೆ ಇಂಗ್ಲೀಷ್ ವಾತಾವರಣವೇ ಸಿಗುವುದಿಲ್ಲವೆಂಬುದು ವಾಸ್ತವ ಸಂಗತಿಯಾಗಿದೆ.
ಪರಿಣಾಮವಾಗಿ, ಒಂದು ತಿಳಿಯಲಾರದ ಅಥವಾ ಮಾತನಾಡಲಾರದ ಭಾಷೆಯಲ್ಲಿ ಅಂತಹ ಮಕ್ಕಳ ಪ್ರಾಥಮಿಕ ಶಿಕ್ಷಣವು ಮುಗಿದು ಹೋಗುತ್ತದೆ. ಇದರಿಂದಾಗಿ ಮಕ್ಕಳು, ಶಾಲೆಯ ಬೋಧನಾ ಹಾಗೂ ಕಲಿಕಾ ಪ್ರಕ್ರಿಯೆಗಳಲ್ಲಿ ಅರ್ಥಪೂರ್ಣವಾಗಿ ತೊಡಗಿಕೊಳ್ಳಲು ಅಡ್ಡಿಯಾಗುತ್ತದೆ. ಮತ್ತು ಅವರ ಆತ್ಮಗೌರವವು ಮುಕ್ಕಾಗಿ ಅಸಹಾಯಕತೆಯ ಭಾವದಿಂದ ಬಳಲುತ್ತಾರೆ. ಅವರ ಆತ್ಮವಿಶ್ವಾಸವು ಕುಸಿದು ಶೈಕ್ಷಣಿಕ ಸಾಧನೆಯ ಮೇಲೆ ನಕಾರಾತ್ಮಕ ಪರಿಣಾಮವುಂಟಾಗುತ್ತದೆ. ಆದ್ದರಿಂದ ಶಿಕ್ಷಕರು ಮಕ್ಕಳ ಮನೆಮಾತು ಮತ್ತು ಶಾಲೆಯ ಭಾಷೆಗಳ ನಡುವಿನ ಭಿನ್ನತೆಯ ಬಗ್ಗೆ ಸದಾ ಜಾಗೃತರಾಗಿರಬೇಕು. ಎಲ್ಲ ಮಕ್ಕಳನ್ನು ಗಮನದಲ್ಲಿಟ್ಟುಕೊಂಡು ಅವರ ಮನೆಮಾತನ್ನೇ ಸೇತುವೆಯಾಗಿ ಬಳಸಿ ಕಲಿಕಾ ಬೋಧನಾ ತಂತ್ರಗಳನ್ನು ರೂಪಿಸಬೇಕು. ಅದಕ್ಕಾಗಿ ಬಹುಭಾಷಾ ಬೋಧನಾ ವಿಧಾನವು, ಮಕ್ಕಳ ಮಾತೃಭಾಷೆಯ ನೆರವಿನಿಂದ ಇಂಗ್ಲೀಷ್ ಕಲಿಕೆಯನ್ನು ಸಾಧಿಸಲು ಉತ್ತೇಜನ ನೀಡುತ್ತದೆ.
ಬಹುಭಾಷೆಯ ಕುರಿತು ಕೆಲವು ತಪ್ಪು ಕಲ್ಪನೆಗಳು
• ಇಂಗ್ಲೀಷ್ ಭಾಷೆಯನ್ನು ಇಂಗ್ಲೀಷಿನಲ್ಲಿಯೇ ಕಲಿಸಬೇಕು.
• ಬೇರೆ ಭಾಷೆಗಳ ಮೂಲಕ ಇಂಗ್ಲೀಷ್ ಕಲಿಸುವುದು ಪರಿಣಾಮಕಾರಿಯಾಗಿರುವುದಿಲ್ಲ.
• ಒಂದು ಭಾಷೆಯಲ್ಲಿ ಮತ್ತೊಂದು ಭಾಷೆಯ ಬಳಕೆ (ಕೋಡ್ ಸ್ವಿಚ್ಚಿಂಗ್)ಯು ಭಾಷಾ ಗ್ರಹಿಕೆಯ ಮೇಲೆ ನಕಾರಾತ್ಮಕ ಪರಿಣಾಮವನ್ನು ಉಂಟು ಮಾಡುತ್ತದೆ.
• ಬಹುಭಾಷಿಕತೆಯು ಭಾಷಾ ಬೆಳವಣಿಗೆಯನ್ನು ತಡ ಮಾಡುತ್ತದೆ.
• ಬಹುಭಾಷಿಕ ಮಕ್ಕಳು ಕಡಿಮೆ ಇಂಗ್ಲೀಷ್ ಶಬ್ದಗಳನ್ನು ಹೊಂದಿರುತ್ತಾರೆ.
• ಬಹುಭಾಷೆಗಳನ್ನು ಮಾತನಾಡುವುದು ಮಕ್ಕಳಿಗೆ ಕಠಿಣವಾಗುತ್ತದೆ.
• ಬಹುಭಾಷಿಕತೆಯು ಮಕ್ಕಳನ್ನು ಗೊಂದಲಕ್ಕೆ ತಳ್ಳುತ್ತದೆ.
• ಬಹುಭಾಷಿಕತೆಯು ಅಪರಿಣಾಮಕಾರಿ ಮತ್ತು ಅವಾಸ್ತವಿಕ
• ಇಂಗ್ಲೀಷಿನಲ್ಲಿ ಉತ್ತಮವಾಗಿ ಕಲಿಯಬಹುದಾದ ಒಂದು ನಿರ್ದಿಷ್ಟ ಪಠ್ಯವಸ್ತು ಬಹುಭಾಷಿಕ ತರಗತಿಯಲ್ಲಿ ಸವಾಲಾಗುತ್ತದೆ.
ಬಹುಭಾಷಾ ಬೋಧನೆಯ ಸವಾಲುಗಳು:
• ಬಹುಭಾಷಾ ಶಿಕ್ಷಕರ ಕೊರತೆ.
• ಶಿಕ್ಷಕರಿಗೆ ಬಹುಭಾಷಾ ಬೋಧನಾ ವಿಧಾನದ ಬಗ್ಗೆ ವೃತ್ತಿ¥ರ ತರಬೇತಿಯ ಕೊರತೆ.
• ಪರಸ್ಪರ ಭಾಷಿಕ ವರ್ಗಾವಣೆಯ ಕಲಿಕೆಯ ಅಗತ್ಯತೆ
• ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪಾಲಕರ ನಡುವಿನ ಸಕಾರಾತ್ಮಕ ಸಂಬAಧವು ಬಹುಭಾಷಾ ಬೋಧನೆಯ ಉತ್ತೇಜನಕ್ಕೆ ಅವಶ್ಯ.
• ಹೆಚ್ಚಿನ ಚರ್ಚೆ ಮತ್ತು ಸಂಶೋಧನೆಯ ಅವಶ್ಯಕತೆ.
ಬಹುಭಾಷೆಯಿಂದ ಭಾವಕೋಶದ ಬೆಳವಣಿಗೆ:
ವಾಸ್ತವವಾಗಿ, ಬಹುಭಾಷಿಕತೆಯು ನಮ್ಮ ಸಮಾಜದ ಪ್ರತಿಬಿಂಬವಾಗಿದ್ದು, ಭಾಷಿಕ ವೈವಿಧ್ಯತೆ ಮತ್ತು ಸಾಂಸ್ಕೃತಿಕ ಭಿನ್ನತೆಗಳು ಒಂದಕ್ಕೊAದು ಪರಸ್ಪರ ಹೆಣೆದುಕೊಂಡಿವೆ. ವಿಚಾರಗಳು, ಪಾಠಗಳು ಮತ್ತು ಪಠ್ಯಗಳನ್ನು ಬಹುಭಾಷಿಕತೆಯ ಮೂಲಕ ಸುಲಭವಾಗಿ ಹಾಗೂ ಪರಿಣಾಮಕಾರಿಯಾಗಿ ವರ್ಗಾಯಿಸಲು ಸಾಧ್ಯವಾಗುತ್ತದೆ. ಜಾಗತಿಕವಾಗಿ ಇಂಗ್ಲೀಷು ಪ್ರಬಲ ಕೊಂಡಿ ಭಾಷೆಯಾಗಿದ್ದು ಇದನ್ನು ಕಲಿಯಲು ಬಹುಭಾಷಿಕ ವಿಧಾನವು ಪೂರಕವಾಗಿದೆ. ಇದು ಜನರು ಮತ್ತು ಜಗತ್ತನ್ನು ಅರಿಯಲು ಸಹಾಯ ಮಾಡುವುದಲ್ಲದೇ ಉದ್ಯೋಗಾವಕಾಶಗಳನ್ನು ಹೆಚ್ಚು ಮಾಡುತ್ತದೆ. ಮತ್ತು ಇದರಿಂದಾಗಿ ಸಂವಹನ ಕೊರತೆಯು ಕಡಿಮೆಯಾಗಿ, ಬಹತ್ವವನ್ನು ಗುರುತಿಸಿ, ಭಾವನಾತ್ಮಕ ಕ್ಷೇಮವನ್ನು ಉತ್ತೇಜಿಸುತ್ತದೆ. ಬಹುಭಾಷಿಕ ತರಗತಿಗಳು ಹೆಚ್ಚು ಕ್ರಿಯಾಶೀಲ, ರಚನಾತ್ಮಕ ಮತ್ತು ಸಂತಸದಾಯಕ ಕಲಿಕೆಯನ್ನು ಉಂಟು ಮಾಡುವ ಮೂಲಕ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆ ಮತ್ತು ಸರ್ವಾಂಗೀಣ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆಯೆಂದು ಸಂಶೋಧನೆಗಳು ಸಾಬೀತು ಪಡಿಸಿವೆ.
‘ಮಕ್ಕಳು ವಿವಿಧ ಭಾಷಿಕ ಹಿನ್ನೆಲೆಯಿಂದ ಬಂದಿರುವುದಿAದ ಶಿಕ್ಷಕರು ತರಗತಿಗಳಲ್ಲಿ ತಮ್ಮ ಭಾಷೆಗಳನ್ನು ಮಾತನಾಡಲು ಅವಕಾಶ ಮಾಡಿಕೊಡಬೇಕು. ಶಿಕ್ಷಕ ಆ ಭಾಷೆಯನ್ನು ತಿಳಿದಿರಲೇಬೇಕೆಂದಿಲ್ಲ. ಮಕ್ಕಳಿಗೆ ೆ ಹಾಗೆ ಅವಕಾಶ ನೀಡುವುದರಿಂದ ಅವರು ತಮ್ಮ ಸಂಸ್ಕೃತಿ ಹಾಗೂ ಜೀವನಾನುಭವಗಳನ್ನು ವರ್ಗಕೋಣೆಗೆ ತರಲು ಸಾಧ್ಯವಾಗುತ್ತದೆ. ಇದು ಎಲ್ಲರನ್ನು ಒಳಗೊಳ್ಳುವ ಜನತಾಂತ್ರಿಕ ಉಪಕ್ರಮವಾಗಿದ್ದು ಮಕ್ಕಳಲ್ಲಿ ಇತರರ ಭಾಷೆ, ಸಂಸ್ಕೃತಿ, ಧರ್ಮ ಮತ್ತು ಹಿನ್ನೆಲೆಗಳನ್ನು ಗೌರವಿಸುವ ಮನೋಧರ್ಮವನ್ನು ಬೆಳೆಸಲು ನೆರವಾಗುತ್ತದೆ’ ಎಂದು ಬೆಂಗಳೂರಿನ ರೀಜಿನಲ್ ಇನ್‌ಸ್ಟೀಟ್ಯೂಟ್ ಆಫ್ ಇಂಗ್ಲೀಷ್ ಸೌತ್ ಇಂಡಿಯಾ (ಆರ್‌ಐಇಎಸ್‌ಇ)ದ ಪ್ರಾಧ್ಯಾಪಕರೂ ಹಾಗೂ ಶೈಕ್ಷಣಿಕ ವಿಭಾಗದ ಮುಖ್ಯಸ್ಥರಾದ ಡಾ.ರವಿನಾರಾಯಣ ಚಕ್ರಕೋಡಿ ಅಭಿಪ್ರಾಯ ಪಡುತ್ತಾರೆ.
ಈ ಹಿನ್ನೆಲೆಯಲ್ಲಿ ಶಾಲೆಗಳಲ್ಲಿ ಇಂಗ್ಲೀಷ್ ಭಾಷಾ ಬೋಧನೆಯನ್ನು ಸುಗಮಗೊಳಿಸಲು ಶಿಕ್ಷಕರಿಗೆ ವಿವಿಧ ತರಬೇತಿಗಳನ್ನು ನೀಡುವ ರೀಜಿನಲ್ ಇನ್‌ಸ್ಟೀಟ್ಯೂಟ್ ಆಫ್ ಇಂಗ್ಲೀಷ್ ಸೌತ್ ಇಂಡಿಯಾ (ಆರ್‌ಐಇಎಸ್‌ಇ) ಸಂಸ್ಥೆಯು ಈಗ ರಾಜ್ಯದ ಕರ್ನಾಟಕ ಪಬ್ಲಿಕ್ ಶಾಲೆ (ಕೆಪಿಎಸ್)ಗಳ 1-5 ನೇ ತರಗತಿಯ ಇಂಗ್ಲೀಷ್ ಮಾಧ್ಯಮದ ಶಿಕ್ಷಕರಿಗೆ ಬಹುಭಾಷಾ ಬೋಧನಾ ವಿಧಾನ(ಮಲ್ಟಿಲಿಂಗ್ವಲ್ ಪೆಡಗಾಜಿ)ದ ಕುರಿತು ತರಬೇತಿಗಳನ್ನು ಆಯೋಜಿಸುತ್ತಿದೆ. ತನ್ಮೂಲಕ ಮಕ್ಕಳು ಇಂಗ್ಲೀಷನ್ನು ತಮ್ಮ ಮನೆಮಾತಿನ ಮೂಲಕ ಅತ್ಯಂತ ಆತ್ಮವಿಶ್ವಾಸದಿಂದ ಸಂತಸದಾಯಕವಾಗಿ ಕಲಿಯುವಂತೆ ಮಾಡಲು ಶಿಕ್ಷಕರಿಗೆ ಪ್ರೇರಣೆ ನೀಡುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.