ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಗ– 65: ಪೊಲೀಸ್‌ ಕಾನ್‌ಸ್ಟೇಬಲ್ ನೇಮಕಾತಿ ಪರೀಕ್ಷೆಯ ಮಾದರಿ ಪ್ರಶ್ನೆಗಳು

Last Updated 26 ಸೆಪ್ಟೆಂಬರ್ 2021, 19:30 IST
ಅಕ್ಷರ ಗಾತ್ರ

886. ವಿಕ್ರಮಶಿಲ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದ ಅರಸ ಯಾರು?

ಎ) ಗೋಪಾಲ

ಬಿ) ಧರ್ಮಪಾಲ

ಸಿ) ದೇವಸಾಲ

ಡಿ) ಮಹಿಪಾಲ

887. ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ.

1. ಗುಪ್ತರ ಕಾಲಾವಧಿಯಲ್ಲಿ ಪುಷ್ಯಗುಪ್ತನು ಸುದರ್ಶನ ಕೆರೆಯ ಉತ್ಖನನ ಮಾಡಿಸಿದನು.

2. ಸ್ಕಂದಗುಪ್ತನು ಸುದರ್ಶನ ಕೆರೆಯ ದುರಸ್ತಿಯನ್ನು ಮಾಡಿಸಿದನು.

ಸರಿಯಾದ ಹೇಳಿಕೆ ಆಯ್ಕೆಮಾಡಿ

ಎ) 1 ಮಾತ್ರ ಸರಿ

ಬಿ) 2 ಮಾತ್ರ ಸರಿ

ಸಿ) 1 ಮತ್ತು 2 ಸರಿ

ಡಿ) 1 ಮತ್ತು 2 ತಪ್ಪು

888. ಈ ಕೆಳಗಿನ ಯಾವವು ಹರ್ಷವರ್ಧನನಿಗೆ ಸಂಬಂಧಿಸಿದ್ದಾಗಿವೆ?

1. ಶಿಲಾದಿತ್ಯ

2. ರತ್ನಾವಳಿ

3. ಬಾಣಭಟ್ಟ

4. ಹುಯೇನ್‌ ತ್ಸಾಂಗ್‌

ಸರಿಯಾದ ಉತ್ತರ ಆಯ್ಕೆಮಾಡಿ

ಎ) 1, 2 ಮತ್ತು 3

ಬಿ) 2, 3 ಮತ್ತು 4

ಸಿ) 1, 3 ಮತ್ತು 4

ಡಿ) 1, 2, 3 ಮತ್ತು 4

889. ಗಾಂಧಾರ ಕಲೆಗೆ ಪ್ರಮುಖವಾಗಿ ಈ ಕೆಳಗಿನ ಯಾರು ಕಾರಣರು?

ಎ) ಹೀನಾಯಾನ ಪಂಥದವರು

ಬಿ) ಮಹಾಯಾನ ಪಂಥದವರು

ಸಿ) ಜೈನಧರ್ಮದವರು

ಡಿ) ಜೊರಾಷ್ಟ್ರೀಯನ್‌ ಧರ್ಮದವರು

890. ಈ ಕೆಳಗಿನ ಯಾವವು ಗಂಗರ ರಾಜಧಾನಿ/ಉಪರಾಜಧಾನಿಗಳಾಗಿದ್ದವು?

1. ಕೋಲಾರ

2. ತಲಕಾಡು

3. ಮಾಕುಂದ

4. ಮಾನ್ಯಪುರ

ಸರಿಯಾದ ಉತ್ತರ ಆಯ್ಕೆಮಾಡಿ

ಎ) 1 ಮತ್ತು 2

ಬಿ) 2 ಮಾತ್ರ

ಸಿ) 2, 3 ಮತ್ತು 4

ಡಿ) 1, 2 ,3 ಮತ್ತು 4

891. 12ನೇ ಶತಮಾನದಲ್ಲಿ ಭಾಸ್ಕರಚಾರ್ಯನು ಬರೆದ ಕೃತಿ ‘ಲೀಲಾವತಿ’, ಈ ಕೆಳಗಿನ ಯಾವ ವಿಷಯಕ್ಕೆ ಸಂಬಂಧಿಸಿದೆ?

ಎ) ನೃತ್ಯ

ಬಿ) ನಾಟಕ

ಸಿ) ಗಣಿತ

ಡಿ) ವೈದ್ಯಕೀಯ

892. ವಿಜಯನಗರ ಸಾಮ್ರಾಜ್ಯಕ್ಕೆ ಭೇಟಿ ನೀಡಿದ ವಿದೇಶಿ ಪ್ರವಾಸಿಗರು ಹಾಗೂ ಅವರ ದೇಶಕ್ಕೆ ಸಂಬಂಧಿಸಿದಂತೆ ಈ ಕೆಳಗಿನವುಗಳಲ್ಲಿ ಯಾವುದು ತಪ್ಪಾಗಿ ಜೋಡಣೆಯಾಗಿದೆ?

ಎ) ನಿಕೋಲೋ ಕೊಂಟಿ- ಇಟಲಿ

ಬಿ) ನಿಕೇಟಿನ್‌- ರಷ್ಯಾ

ಸಿ) ಬಾರ್ಬೋಸಾ- ಪೋರ್ಚುಗಲ್‌

ಡಿ) ಡೊಮಿಂಗೋ ಪಯಸ್‌- ಫ್ರಾನ್ಸ್‌

893. ರಾಜ್ಯದ ವೆಚ್ಚದಲ್ಲಿ ಹಜ್‌ ಯಾತ್ರೆಯ ವ್ಯವಸ್ಥೆ ಮಾಡಿದ ಮೊದಲ ಭಾರತೀಯ ದೊರೆ

ಎ) ಅಲ್ಲಾ-ಉದ್ದೀನ್‌ ಖಿಲ್ಜಿ

ಬಿ) ಫಿರೋಜ್‌ ತುಘಲಕ್‌

ಸಿ) ಅಕ್ಬರ್‌

ಡಿ) ಔರಂಗಜೇಬ್

894. ಭಾರತದ ಯಾವ ಅರಸನಿಗೆ ‘ಆಲಂಗೀರ್‌’ಎಂಬ ಬಿರುದು ಇತ್ತು?

ಎ) ಅಕ್ಬರ್‌

ಬಿ) ಶೇರ್‌ ಶಾ ಸೂರಿ

ಸಿ) ಔರಂಗಜೇಬ್‌

ಡಿ) ಹುಮಾಯೂನ್‌

895. ಔರಂಗಜೇಬ್‌ನ ನಂತರ ಅಧಿಕಾರಕ್ಕೆ ಬಂದ ಈ ಕೆಳಗಿನ ಮೊಘಲ್‌ ರಾಜರನ್ನು ಕಾಲಾನುಕ್ರಮದಲ್ಲಿ ಜೋಡಿಸಿ.

1. ಬಹದ್ದೂರ ಷಾ

2. ಜಹಂದರ್‌ ಷಾ

3. ಫಾರೂಕ್‌ ಸಿಯಾರ್‌

4. ಮುಹಮ್ಮದ್‌ ಷಾ

ಸರಿಯಾದ ಉತ್ತರ ಆಯ್ಕೆಮಾಡಿ

ಎ) 1-2-3-4

ಬಿ) 4-1-2-3

ಸಿ) 3-2-4-1

ಡಿ) 4-3-1-2

ಭಾಗ 64ರ ಉತ್ತರಗಳು: 871. ಬಿ, 872. ಸಿ, 873. ಸಿ, 874. ಎ, 875. ಎ, 876. ಡಿ, 877. ಎ, 878. ಡಿ, 879. ಎ, 880. ಡಿ, 881. ಬಿ, 882. ಡಿ, 883. ಡಿ, 884. ಡಿ, 885. ಬಿ

(ಪ್ರಶ್ನೋತ್ತರ ಸಂಯೋಜನೆ: ಸ್ಲೇಟ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ, ಧಾರವಾಡ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT