ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ | ಸಾಮಾನ್ಯ ಅಧ್ಯಯನ – ಇತಿಹಾಸ

Last Updated 28 ಏಪ್ರಿಲ್ 2021, 19:30 IST
ಅಕ್ಷರ ಗಾತ್ರ

(ಮುಂದುವರಿದ ಭಾಗ)

16)→ಕೆಳಗಿನ ಯಾವುದು ಭಾರತದಲ್ಲಿ ಇರುವ ಮಧ್ಯಶಿಲಾಯುಗದ ಪ್ರಮುಖ ತಾಣವಾಗಿದೆ?

→ಎ) ಗುಜರಾತಿನ ಸಬರಮತಿ→ಬಿ) ಮಹಾರಾಷ್ಟ್ರದ ಅಹ್ಮದ್‌ನಗರ

→ಸಿ) ಕರ್ನಾಟಕದ ಬಳ್ಳಾರಿ→ಡಿ) ಮೇಲಿನ ಎಲ್ಲವೂ

ಉತ್ತರ: (ಡಿ)

ವಿವರಣೆ: ರಾಜಸ್ಥಾನದ ಅಜ್ಮೀರ, ಗುಜರಾತಿನ ಸಬರಮತಿ, ಮಹಾರಾಷ್ಟ್ರದ ಅಹ್ಮದ್‌ನಗರ, ಕರ್ನಾಟಕದ ಬಳ್ಳಾರಿ ಜಿಲ್ಲೆಯ ಸಂಗನಕಲ್ಲು ಮತ್ತು ಚಿತ್ರದುರ್ಗ ಜಿಲ್ಲೆಯ ಬ್ರಹ್ಮಗಿರಿ ಭಾರತದಲ್ಲಿದ್ದ ಮಧ್ಯಶಿಲಾಯುಗದ ಪ್ರಮುಖ ತಾಣಗಳಾಗಿವೆ.

17) ಸ್ವಾಮಿ ದಯಾನಂದ ಸರಸ್ವತಿಯವರ ಪ್ರಕಾರ ಆರ್ಯರ ಮೂಲ ಯಾವುದು?

ಎ) ಟಿಬೆಟ್→ಬಿ) ಉತ್ತರ ಧ್ರುವ

ಸಿ) ಮಧ್ಯ ಏಷಿಯಾ→ಡಿ) ಆಗ್ನೇಯ ಏಷಿಯಾ

ಉತ್ತರ: (ಎ)

ವಿವರಣೆ: ಸ್ವಾಮಿ ದಯಾನಂದ ಸರಸ್ವತಿಯವರು ಆರ್ಯರ ಮೂಲ ಟಿಬೆಟ್ ಎಂದು ಹೇಳಿದ್ದಾರೆ.

18)→ಇಮ್ಮಡಿ ಪುಲಿಕೇಶಿಯ ಆಸ್ಥಾನ ಕವಿಯಾಗಿದ್ದ ರವಿಕೀರ್ತಿಯು ಈ ಕೆಳಗಿನ ಯಾವ ದೇವಾಲಯವನ್ನು ನಿರ್ಮಿಸಿದನು?

→ಎ) ವಿರೂಪಾಕ್ಷ ದೇವಾಲಯ→ಬಿ) ಮೇಗುತಿ ದೇವಾಲಯ

→ಸಿ) ಭೋಗ ನಂದೀಶ್ವರ ದೇವಾಲಯ→ಡಿ) ಕಲ್ಲೇಶ್ವರ ದೇವಾಲಯ

ಉತ್ತರ: (ಬಿ)

ವಿವರಣೆ: ಜೈನ ಮೆಗುತಿ ದೇವಸ್ಥಾನವು ಗಳಗನಾಥ ಸಮೂಹಕ್ಕೆ ಸೇರಿದ್ದು, ಐಹೊಳೆಯ ಸಣ್ಣ ಬೆಟ್ಟದ ತುದಿಯಲ್ಲಿದೆ. ಶಾಸನಗಳ ಪ್ರಕಾರ, ಈ ದೇವಾಲಯವನ್ನು ಕ್ರಿ.ಶ 634 ರಲ್ಲಿ 2ನೇ ಪುಲಕೇಶಿಯ ದಂಡನಾಯಕ ಮತ್ತು ಮಂತ್ರಿಯಾಗಿದ್ದ ರವಿಕೀರ್ತಿ ನಿರ್ಮಿಸಿದ್ದಾರೆ. ಈ ದೇವಾಲಯ ಪೂರ್ಣಗೊಂಡಿಲ್ಲವಾದರೂ, ಅವುಗಳ ಕೆತ್ತನೆ ಮತ್ತು ಶೈಲಿಯು ಬಾದಾಮಿ ಗುಹೆ ದೇವಾಲಯಗಳು ಮತ್ತು ಆ ಕಾಲದ ಇತರ ದೇವಾಲಯಗಳಿಗಿಂತ ಹೆಚ್ಚು ಪರಿಷ್ಕರಿಸಲ್ಪಟ್ಟಿದೆ.

19)→ಶಾತವಾಹನರ ಕಾಲದಲ್ಲಿ ನಗರಾಡಳಿತವು ಈ ಕೆಳಗಿನ ಯಾರ ಕೈಯಲ್ಲಿತ್ತು.?

→ಎ) ನಿಗಮ ಸಭಾ→ಬಿ) ಆಗಮ ಸಭಾ

→ಸಿ) ಸಮಿತಿ→ಡಿ) ವಿಧಾತಾ

ಉತ್ತರ : (ಎ)

ವಿವರಣೆ: ಶಾತವಾಹನರು ಶಾಸ್ತ್ರಗಳ ಆಡಳಿತ ಮಾರ್ಗಸೂಚಿಗಳನ್ನು ಅನುಸರಿಸಿದರು. ಶಾಸನಗಳು ನಗರ (ನಗರ), ನಿಗಮಾ (ಮಾರುಕಟ್ಟೆ ಪಟ್ಟಣ) ಮತ್ತು ಗಾಮಾ (ಗ್ರಾಮ) ಎಂಬ ಮೂರು ಬಗೆಯ ವಸಾಹತುಗಳನ್ನು ಉಲ್ಲೇಖಿಸುತ್ತವೆ. ಶಾತವಾಹನರ ಕಾಲದಲ್ಲಿ ಪಟ್ಟಣ ಆಡಳಿತವು ನಿಗಮಸಭೆಯ ಕೈಯಲ್ಲಿತ್ತು.

20) ಹಲಾ ರಚಿಸಿದ ಕೃತಿ ‘ಗಾಥಾ ಸಪ್ತಶತಿ’ ಯಾವ ಭಾಷೆಯಲ್ಲಿದೆ?

→ಎ) ಪ್ರಾಕೃತ→ಬಿ) ಸಂಸ್ಕೃತ→ಸಿ) ತಮಿಳು→ಡಿ) ಕನ್ನಡ

ಉತ್ತರ : (ಎ)

ವಿವರಣೆ: ‘ಗಥಾ ಸಪ್ತಶತಿ’ ಮಹಾರಾಷ್ಟ್ರ ಪ್ರಾಕೃತ ಭಾಷೆಯಲ್ಲಿರುವ ಭಾರತೀಯ ಕವನಗಳ ಪ್ರಾಚೀನ ಸಂಗ್ರಹವಾಗಿದೆ. ಕವನಗಳು ಪ್ರೀತಿ ಮತ್ತು ಪ್ರೀತಿಯ ಸಂತೋಷದ ಬಗ್ಗೆ ಇವೆ. ಈ ಸಂಗ್ರಹವು 1ನೇ ಶತಮಾನದಲ್ಲಿದ್ದ ರಾಜ ಹಲಾನ ಗುಣಲಕ್ಷಣ ಬಗ್ಗೆ ಇವೆ.

21) ಕೆಳಗಿನ ಯಾವುದು ಬೌದ್ಧ ಧರ್ಮದ ನೀತಿ ಸಂಹಿತೆಯಲ್ಲಿ ಸೇರಿಲ್ಲ?

→ಎ) ಹಳದಿ ಬಟ್ಟೆ→ಬಿ) ಭಿಕ್ಷಾಪಾತ್ರೆ

→ಸಿ) ಸೂಜಿ ದಾರ→ಡಿ) ದಿನಕ್ಕೆ ಎರಡು ಹೊತ್ತು ಊಟ

ಉತ್ತರ : (ಡಿ)

ವಿವರಣೆ: ಬೌದ್ಧ ಧರ್ಮದ ನೀತಿ ಸಂಹಿತೆ: 1. ಹಳದಿ ಬಟ್ಟೆ, 2. ಭಿಕ್ಷಾಪಾತ್ರೆ, 3. ಸೂಜಿ ದಾರ 4. ದಿನಕ್ಕೆ ಒಂದು ಹೊತ್ತು ಊಟ.

22) ‘ಪಬ್ಬಜ್ಜಾ’ ಎಂಬುದು ಏನು?

→ಎ) ಬೌದ್ಧ ಸಂಘದಲ್ಲಿ ತೆಗೆದುಕೊಳ್ಳುವ ಆರಂಭಿಕ ದೀಕ್ಷೆ

→ಬಿ) ಜೈನ ಧರ್ಮದಲ್ಲಿ ಕೈಗೊಳ್ಳುವ ಸಲ್ಲೇಖನ ವ್ರತ

→ಸಿ) ಬೌದ್ಧ ಮಂದಿರದ ಹೆಸರು

→ಡಿ) ಮೇಲಿನ ಯಾವುದೂ ಅಲ್ಲ

ಉತ್ತರ : (ಎ)

ವಿವರಣೆ: ಬುದ್ಧನು ತನ್ನ ಅನುಯಾಯಿಗಳು ಪಬ್ಬಜ್ಜಾ ಮತ್ತು ಉಪಸಂಪದಾ ಉನ್ನತ ದೀಕ್ಷೆಗಳನ್ನು ಕೈಗೊಳ್ಳಬೇಕೆಂದು ಅಪೇಕ್ಷಿಸಿದ್ದನು, ಪಬ್ಬಜ್ಜಾ ಎಂದರೆ ಗೃಹಸ್ಥರು ಭಿಕ್ಷುಗಳ ಸಂಘ ಜೀವನದೊಳಗೆ ಕಾಲಿರಿಸುವ ಆರಂಭಿಕ ಶಿಷ್ಯತ್ವದ ಮಾರ್ಗವಾಗಿದೆ.

(ಪ್ರಶ್ನೋತ್ತರ ಸಂಯೋಜನೆ: www.iasjnana.com, 9916399276)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT