ನಮಗೆ ಒಬ್ಬನೇ ಮಗ. ಪದವಿ ಕೊನೆಯ ವರ್ಷದಲ್ಲಿದ್ದಾನೆ. ಓದಿನಲ್ಲಿ ಪರವಾಗಿಲ್ಲ. ಆದರೆ ವಯಸ್ಸಿಗೆ ಮೀರಿದ ನಾಚಿಕೆ ಹಾಗೂ ಹಿಂಜರಿಕೆ. ಗೆಳೆಯರು ಕಡಿಮೆ. ಮಾತಾಡುವಾಗ ಆಗಾಗ ಉಗ್ಗುತ್ತಾನೆ. ಬೈಕು ಕೊಡಿಸಿ ಎಂದು ಹಟ ಮಾಡುತ್ತಾನೆ. ಅವನಿಗೇನಾದರೂ ಅನಾಹುತವಾದರೆ ಎನ್ನುವ ಆತಂಕದಿಂದ ನಾವು ಕೊಡಿಸಿಲ್ಲ. ಯಾವಾಗಲೂ ಮೊಬೈಲ್ ಫೋನಿನಲ್ಲಿ ಮುಳುಗಿರುತ್ತಾನೆ. ಒಬ್ಬನೇ ಎಲ್ಲಿಗೂ ಹೋಗುವುದಿಲ್ಲ. ನನ್ನ ಮೇಲೆ ಸಿಡುಕುತ್ತಾನೆ. ತಂದೆಯ ಜೊತೆಗೆ ಓಡಾಡುತ್ತಾನೆ. ನೌಕರಿ ಮಾಡುವುದಿಲ್ಲ, ಹಾಗಾಗಿ ಮುಂದೆ ಓದುವುದಿಲ್ಲ ಎನ್ನುತ್ತಾನೆ. ಯಾಕೆ ಹೀಗೆ?