ಎಸ್ಬಿಐ ಆಶಾ ಸ್ಕಾಲರ್ಶಿಪ್ ಪ್ರೋಗ್ರಾಂ 2022

ವಿವರ: 6 ರಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗೆ ತಮ್ಮ ಶಿಕ್ಷಣವನ್ನು ಮುಂದುವರಿಸಲು ಆರ್ಥಿಕ ನೆರವು ನೀಡುವುದಕ್ಕಾಗಿ ಎಸ್ಬಿಐ ಫೌಂಡೇಶನ್ ಆಶಾ ಸ್ಕಾಲರ್ಶಿಪ್ ಪ್ರೋಗ್ರಾಂ ಆರಂಭಿಸಿದೆ.

ಅರ್ಹತೆ : 6 ರಿಂದ 12 ನೇ ತರಗತಿಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿದಾರರು ಹಿಂದಿನ ಶೈಕ್ಷಣಿಕ ವರ್ಷದ ಪರೀಕ್ಷೆಯಲ್ಲಿ ಕನಿಷ್ಠ ಶೇ 75 ಅಂಕಗಳನ್ನು ಗಳಿಸಿರಬೇಕು. ಅವರ ಕುಟುಂಬದ ವಾರ್ಷಿಕ ಆದಾಯ ₹3 ಲಕ್ಷ ಮೀರಬಾರದು.

ಆರ್ಥಿಕ ನೆರವು : ₹ 15000

ಅರ್ಜಿ ಸಲ್ಲಿಸಲು ಕೊನೆ ದಿನ: ಅಕ್ಟೋಬರ್ 15, 2022

ಅರ್ಜಿ ಸಲ್ಲಿಸುವ ವಿಧಾನ: ಆನ್ಲೈನ್ ಮೂಲಕ

ಹೆಚ್ಚಿನ ಮಾಹಿತಿಗೆ : www.b4s.in/praja/SBIFS1

ಎಲ್ಐಸಿ ಎಚ್ಎಫ್ಎಲ್ ವಿದ್ಯಾದಾನ್ ಸ್ಕಾಲರ್ಶಿಪ್

ವಿವರ: 11ನೇ ತರಗತಿ, ಪದವಿ ಮತ್ತು ಸ್ನಾತಕೋತ್ತರ ಪದವಿ ಓದುತ್ತಿರುವ ವಿದ್ಯಾರ್ಥಿಗಳನ್ನು ಬೆಂಬಲಿಸುವ ಸಲುವಾಗಿ ಎಲ್ಐಸಿ ಎಚ್ಎಫ್ಎಲ್ ಈ ಕಾರ್ಯಕ್ರಮವನ್ನು ರೂಪಿಸಿದೆ.

ಕಡಿಮೆ ಆದಾಯ ಹಾಗೂ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕುಟುಂಬದ ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿ ವೇತನವನ್ನು ಮೀಸಲಿಡಲಾಗಿದೆ.

ಅರ್ಹತೆ : ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು 11ನೇ ತರಗತಿ ಮತ್ತು ಮೊದಲ ವರ್ಷದ ಪದವಿ ಮತ್ತು ಸ್ನಾತಕೋತ್ತರ ಪದವಿ ಓದುತ್ತಿರಬೇಕು. ಅರ್ಜಿದಾರರು ತಮ್ಮ ಹಿಂದಿನ ಕೋರ್ಸ್ / ತರಗತಿಯಲ್ಲಿ ಶೇ 60ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಿರಬೇಕು. ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನ ಎಲ್ಲಾ ಮೂಲಗಳಿಂದ ₹ 3.60 ಲಕ್ಷ ಮೀರಿರಬಾರದು.

ಆರ್ಥಿಕ ನೆರವು : ₹ 20 ಸಾವಿರದವರೆಗೆ

ಅರ್ಜಿ ಸಲ್ಲಿಸಲು ಕೊನೆ ದಿನ: ಸೆಪ್ಟೆಂಬರ್ 30, 2022

ಅರ್ಜಿ ಸಲ್ಲಿಸುವ ವಿಧಾನ: ಆನ್ಲೈನ್ ಮೂಲಕ

ಹೆಚ್ಚಿನ ಮಾಹಿತಿಗೆ : www.b4s.in/praja/LHVT3

ಎರಿಕ್ಸನ್ ಎಂಪವರಿಂಗ್ ಗರ್ಲ್ ಸ್ಕಾಲರ್ಶಿಪ್ ಪ್ರೋಗ್ರಾಂ 2022

ವಿವರ : ದೇಶದಾದ್ಯಂತ ದ್ವಿತೀಯ ವರ್ಷದ ಎಂಜಿನಿಯರಿಂಗ್ (ಐಟಿ/ಸಿಎಸ್) ಅಥವಾ ಎಂಬಿಎ ಓದುತ್ತಿರುವ ಹಿಂದುಳಿದ ವರ್ಗಗಳಿಗೆ ಸೇರಿದ ಪ್ರತಿಭಾನ್ವಿತ ವಿದ್ಯಾರ್ಥಿನಿಯರನ್ನು ಬೆಂಬಲಿಸುವುದಕ್ಕಾಗಿ ಎರಿಕ್ಸ್ನ್ ಕಂಪನಿ ಈ ಸ್ಕಾಲರ್ಶಿಪ್ ಕಾರ್ಯಕ್ರಮವನ್ನು ರೂಪಿಸಿದೆ.

ಅರ್ಹತೆ : ಅರ್ಜಿದಾರರು ಪ್ರಸ್ತುತ ದೇಶದ ಯಾವುದಾದರೂ ಕಾಲೇಜಿನಲ್ಲಿ 2ನೇ ವರ್ಷದ ಎಂಜಿನಿಯರಿಂಗ್ (ಐಟಿ/ಸಿಎಸ್) ಅಥವಾ ಎಂಬಿಎ ಪದವಿಯನ್ನು ಓದುತ್ತಿರಬೇಕು. ಅರ್ಜಿದಾರರು ಹಿಂದಿನ ಅಂತಿಮ ಪರೀಕ್ಷೆಯಲ್ಲಿ ಕನಿಷ್ಠ 6.5 ಜಿಪಿಎ ಅಥವಾ ತತ್ಸಮಾನ ಅಂಕಗಳನ್ನು ಗಳಿಸಿರಬೇಕು. ಎಲ್ಲಾ ಮೂಲಗಳಿಂದ ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು ₹ 6 ಲಕ್ಷ ಮೀರಬಾರದು.

ಆರ್ಥಿಕ ನೆರವು : ವಾರ್ಷಿಕ ₹75 ಸಾವಿರ

ಅರ್ಜಿ ಸಲ್ಲಿಸಲು ಕೊನೆ ದಿನ: ನವೆಂಬರ್ 7, 2022

ಅರ್ಜಿ ಸಲ್ಲಿಸುವ ವಿಧಾನ: ಆನ್ಲೈನ್ ಮೂಲಕ

ಹೆಚ್ಚಿನ ಮಾಹಿತಿಗೆ : www.b4s.in/praja/EEGS13

ಮಾಹಿತಿ ಕೃಪೆ: ebuddy.com

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.