ಸೇಜ್ ಐಟಿ ಬರವಣಿಗೆ ಸ್ಪರ್ಧೆ

ಸೇಜ್ ಐಟಿ ಸ್ಕಾಲರ್ಷಿಪ್ ಇಂಡಿಯಾ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುತ್ತದೆ. 17ರಿಂದ 30 ವರ್ಷ ವಯಸ್ಸಿನ ವಿದ್ಯಾರ್ಥಿಗಳು ಲೇಖನ ಬರೆಯುವ ಸ್ಪರ್ಧೆಯಲ್ಲಿ ಭಾಗವಹಿಸಿ ₹50,000 ಒಂದು ಬಾರಿಯ ಬಹುಮಾನವನ್ನು ಗೆಲ್ಲಬಹುದು.

ಅರ್ಹತೆ: ಇದು 17ರಿಂದ 30 ವರ್ಷ ವಯಸ್ಸಿನ ಭಾರತದ ನಾಗರಿಕರಿಗೆ ಮುಕ್ತವಾಗಿದೆ. ಭಾಗವಹಿಸುವವರು ಭಾರತದ ಮಾನ್ಯತೆ ಪಡೆದ ಸಂಸ್ಥೆಯಲ್ಲಿ ನಿಯಮಿತ/ಅರೆಕಾಲಿಕ ಕಾಲೇಜು ವಿದ್ಯಾರ್ಥಿಗಳಾಗಿರಬೇಕು.

ಆರ್ಥಿಕ ಸಹಾಯ: ₹50,000 (ಒಂದು ಬಾರಿ).

ಅರ್ಜಿ ಸಲ್ಲಿಸಲು ಕೊನೆ ದಿನ: 25-05-2025

ಅರ್ಜಿ ಸಲ್ಲಿಸುವ ವಿಧಾನ: ಆನ್ಲೈನಲ್ಲಿ ಅರ್ಜಿ ಹಾಕಿ.

ಹೆಚ್ಚಿನ ಮಾಹಿತಿಗೆ: www.b4s.in/praja/SGIT2

ಐಇಟಿ ಇಂಡಿಯಾ ಸ್ಕಾಲರ್ಷಿಪ್

ದಿ ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ (ಐಇಟಿ) ಸೃಜನಶೀಲತೆ, ನಾವೀನ್ಯ ಮತ್ತು ನಾಯಕತ್ವವನ್ನು ಪ್ರದರ್ಶಿಸಲು ಎಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ಆಹ್ವಾನಿಸುತ್ತಿದೆ.

ಅರ್ಹತೆ: ಎಲ್ಲಾ ಶಾಖೆಗಳ ಎಐಸಿಟಿಇ/ಯುಜಿಸಿ- ಅನುಮೋದಿತ ಸಂಸ್ಥೆಗಳ ಪೂರ್ಣಾವಧಿಯ 1ನೇ, 2ನೇ, 3ನೇ ಮತ್ತು 4ನೇ ವರ್ಷದ ಯುಜಿ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಲಭ್ಯವಿರುತ್ತದೆ. ಅಭ್ಯರ್ಥಿಗಳು ಎಲ್ಲಾ ಕ್ರೆಡಿಟ್ ಕೋರ್ಸ್ಗಳನ್ನು ಒಟ್ಟು ಕನಿಷ್ಠ ಶೇ 60 ಅಂಕಗಳೊಂದಿಗೆ (ಅಥವಾ 10-ಪಾಯಿಂಟ್ ಸ್ಕೇಲ್ನಲ್ಲಿ 6.0 ಸಿಜಿಪಿಎ) ಒಂದೇ ಪ್ರಯತ್ನದಲ್ಲಿ ಪೂರ್ಣಗೊಳಿಸಿರಬೇಕು. ಯಾವುದೇ ವಯಸ್ಸಿನ ಮಿತಿ ಇಲ್ಲ.

ಆರ್ಥಿಕ ಸಹಾಯ:₹ 10,00,000

ಅರ್ಜಿ ಸಲ್ಲಿಸಲು ಕೊನೆ ದಿನ: 31-05-2025

ಹೆಚ್ಚಿನ ಮಾಹಿತಿಗೆ: www.b4s.in/praja/IET5

ಆಕ್ಸ್ಫರ್ಡ್ ವಿದ್ಯಾರ್ಥಿವೇತನ

ಆಕ್ಸ್ಫರ್ಡ್ ಆ್ಯಂಡ್ ಕೇಂಬ್ರಿಡ್ಜ್ ಸೊಸೈಟಿ ಆಫ್ ಇಂಡಿಯಾ ಸ್ಕಾಲರ್ಷಿಪ್ (ಒಸಿಎಸ್ಐ) ಆಕ್ಸ್ಫರ್ಡ್ ಮತ್ತು ಕೇಂಬ್ರಿಡ್ಜ್ ವಿಶ್ವವಿದ್ಯಾಲಯಗಳಲ್ಲಿ ಪದವಿ, ಸ್ನಾತಕೋತ್ತರ ಪದವಿ ಮತ್ತು ಸಂಶೋಧನೆ ಮಾಡುವ ಭಾರತೀಯ ವಿದ್ಯಾರ್ಥಿಗಳಿಗಾಗಿ ನೀಡುವ ಅವಕಾಶವಾಗಿದೆ.

ಅರ್ಹತೆ: 2025ರ ಸೆಪ್ಟೆಂಬರ್ 1ಕ್ಕೆ 30 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರುವ ಭಾರತೀಯ ವಿದ್ಯಾರ್ಥಿಗಳಿಗೆ ಲಭ್ಯವಿರುತ್ತದೆ. ಅಭ್ಯರ್ಥಿಗಳು ಕೇಂಬ್ರಿಡ್ಜ್ ಅಥವಾ ಆಕ್ಸ್ಫರ್ಡ್ ವಿಶ್ವವಿದ್ಯಾಲಯದಲ್ಲಿ ನಿರ್ದಿಷ್ಟ ಪೂರ್ಣಾವಧಿಯ ಕೋರ್ಸ್ಗಳಲ್ಲಿ ಒಂದಕ್ಕೆ ದಾಖಲಾಗಿರಬೇಕು. ಅವರು ಸಾಮಾನ್ಯ ಪ್ರಕ್ರಿಯೆಗಳ ಮೂಲಕವೇ ವಿಶ್ವವಿದ್ಯಾಲಯದಲ್ಲಿ ದಾಖಲಾತಿಯನ್ನು ಪಡೆದುಕೊಂಡಿರಬೇಕು.

ಆರ್ಥಿಕ ಸಹಾಯ:₹4,00,000ವರೆಗೆ (ಒಂದು ಬಾರಿ).

ಹೆಚ್ಚಿನ ಮಾಹಿತಿಗೆ: www.b4s.in/praja/OCSO1

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.