ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ, ಶಾಲೆಯ ಹಳೆಯ ವಿದ್ಯಾರ್ಥಿ ಬಿ.ವಜ್ರಪ್ಪ ಅವರಿಂದ ಮಕ್ಕಳಿಗೆ ಕ್ರೀಡಾ ತರಬೇತಿ
ಬಾಗಿಲು ಮುಚ್ಚುವ ಸ್ಥಿತಿಯಲ್ಲಿದ್ದ ಸರ್ಕಾರಿ ಶಾಲೆಯೊಂದು ಸಮುದಾಯದ ಒಳಗೊಳ್ಳುವಿಕೆಯ ನಂತರ ಪ್ರಗತಿ ಪಥದಲ್ಲಿದೆ ಎಂಬುದಕ್ಕೆ ಮೆಳೇಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯೇ ಜೀವಂತ ನಿದರ್ಶನವಾಗಿದೆ.
ಕಂಪ್ಯೂಟರ್ ಕಲಿಕೆಯಲ್ಲಿ ಶಾಲಾ ಮಕ್ಕಳು
ಶಾಲೆಗೆ ಸಮುದಾಯವನ್ನು ಕರೆತಂದಿದ್ದರಿಂದ ಸ್ವರೂಪವೇ ಬದಲಾಗಿದೆ. ನಮ್ಮ ಶಾಲೆ ಎಂಬ ಹೆಮ್ಮೆ ಎಲ್ಲರಲ್ಲೂ ಮನೆ ಮಾಡಿದೆ. ಕಾನ್ವೆಂಟ್‌ಗೆ ಹೋಗುತ್ತಿದ್ದ ಮಕ್ಕಳಷ್ಟೇ ಅಲ್ಲ, ಸುತ್ತಲಿನ ಹಳ್ಳಿ ಮಕ್ಕಳೂ ಇದೀಗ ನಮ್ಮಲ್ಲಿಗೆ ಬರುತ್ತಿದ್ದಾರೆ. ಇಲಾಖೆಯಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.