ಜಪಾನಿ ಭಾಷೆ ಕಲಿಕೆಗೆ ಹೆಚ್ಚಿದ ಬೇಡಿಕೆ
ಜಪಾನಿ ಭಾಷೆ ಕಲಿಕೆಗೆ ವಿಶ್ವದಾದ್ಯಂತ ಬೇಡಿಕೆ ಹೆಚ್ಚಿದೆ. ಅದರಲ್ಲಿಯೂ ಆರೋಗ್ಯಕ್ಷೇತ್ರಕ್ಕೆ ಸಂಬಂಧಪಟ್ಟ ವೃತ್ತಿಯಲ್ಲಿರುವವರು ಜಪಾನಿ ಭಾಷೆ ಕಲಿತರೆ ಅವರಿಗೆ ಜಪಾನ್ ದೇಶದಲ್ಲಿ ಉತ್ತಮ ಅವಕಾಶಗಳು ಲಭ್ಯವಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಟಯೊಟೊ ಕಿರ್ಲೋಸ್ಕರ್ ಸಹಯೋಗದೊಂದಿಗೆ ‘ಜ್ಯಾಪನೀಸ್ ಫಾರ್ ಸ್ಕಿಲ್ಡ್ ವರ್ಕ್‌ಫೋರ್ಸ್’ ಎನ್ನುವ ಕೋರ್ಸ್ ಒಂದನ್ನು ರೂಪಿಸಲಾಗಿದ್ದು, ಸದ್ಯದಲ್ಲಿಯೇ ಚಾಲನೆ ಸಿಗಲಿದೆ. ಯಾವುದೇ ವೃತ್ತಿಯಲ್ಲಿರುವವರು ಈ ಕೋರ್ಸ್‌ಗೆ ಸೇರಬಹುದು. ಒಂದು ವರ್ಷ ಅವಧಿಯ ಎರಡು ಸೆಮಿಸ್ಟರ್ ಇರುವ ಕೋರ್ಸ್ ಇದಾಗಿದ್ದು, ತರಬೇತಿಯ ಅವಧಿ 1000 ಗಂಟೆಗಳು. ಆದರೆ, ಇದು ವಾರಾಂತ್ಯದಲ್ಲಿ ಇರುವುದಿಲ್ಲ. ಸೋಮವಾರದಿಂದ ಶುಕ್ರವಾರದವರೆಗೆ ಬೆಳಿಗ್ಗೆ 9ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಜಪಾನಿ ಭಾಷೆಯನ್ನು ಕಲಿಸಲಾಗುತ್ತದೆ.