ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಯಂ ಅಧ್ಯಯನಕ್ಕೆ ಯೂಟ್ಯೂಬ್‌ ಚಾನೆಲ್‌

Last Updated 24 ಫೆಬ್ರುವರಿ 2021, 19:30 IST
ಅಕ್ಷರ ಗಾತ್ರ

ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ಆರಂಭಿಸಿದ ಮೇಲೆ ಮೊದಲು ಎದುರಾಗುವ ಪ್ರಶ್ನೆ ಎಂದರೆ ಸ್ವಯಂ ಅಧ್ಯಯನ ಸೂಕ್ತವೋ ಅಥವಾ ತರಬೇತಿಯೊಂದಿಗೆ ಅಧ್ಯಯನ ಸೂಕ್ತವೋ ಎಂಬುದು. ತರಬೇತಿ ಎಂದರೆ ಅದು ಆನ್‌ಲೈನ್ ಅಥವಾ ಆಫ್‌ಲೈನ್‌ನಲ್ಲಿ ಯಾವುದು ಸೂಕ್ತ ಎನ್ನುವ ಪ್ರಶ್ನೆ ಎದುರಾಗುತ್ತದೆ. ಇದನ್ನು ಆಯಾ ಅಭ್ಯರ್ಥಿ ತನ್ನ ಸಾಮರ್ಥ್ಯ, ಅವಶ್ಯಕತೆಗೆ ಅನುಸಾರವಾಗಿ ಆಯ್ಕೆ ಮಾಡಿಕೊಳ್ಳಬೇಕು. ಉದಾಹರಣೆಗೆ ಸ್ವಯಂ ಅಧ್ಯಯನದಿಂದ ಪರೀಕ್ಷೆ ಎದುರಿಸಬಲ್ಲೆ ಎಂಬ ವಿಶ್ವಾಸ ಹೊಂದಿರುವವರು ಪಠ್ಯಕ್ರಮ ನೋಡಿಕೊಂಡು ಕಾನ್ಸೆಪ್ಟ್‌ಗಳ ಅನುಸಾರ ತಯಾರಿ ನಡೆಸಬಹುದು.

ಹಾಗೆಯೇ ಮಾರ್ಗದರ್ಶನದ ಅವಶ್ಯಕತೆ ಇರುವ ಅಭ್ಯರ್ಥಿಗಳು ಯೂಟ್ಯೂಬ್‌ನಲ್ಲಿ ದೊರಕಬಹುದಾದ ಹಲವಾರು ಉಚಿತ ಹಾಗೂ ಜನಪ್ರಿಯ ಕೋರ್ಸ್‌ಗಳನ್ನು ಅವಲೋಕಿಸಬೇಕು. ಆದರೆ ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬುದು ನಿಮ್ಮ ತಯಾರಿ ಮಟ್ಟದ ಮೇಲೆ ನಿರ್ಧಾರವಾಗುವಂತಹದ್ದು.

ಉದಾಹರಣೆಗೆ ಕೇವಲ ಶಾರ್ಟ್ ಟ್ರಿಕ್ ತಿಳಿಸಿ ಕೊಡುವಂತಹ ಕೆಲವು ಚಾನೆಲ್‌ಗಳನ್ನು ಆಯ್ಕೆ ಮಾಡಿಕೊಂಡಿದ್ದೀರಿ ಎಂದಿಟ್ಟುಕೊಳ್ಳಿ. ಈ ಸಣ್ಣಪುಟ್ಟ ತಂತ್ರಗಳು ನಿಮಗೆ ಕೇವಲ ಪ್ರಿಲಿಮ್ಸ್ ಪರೀಕ್ಷೆಯಲ್ಲಿ ಫಲ ನೀಡಬಹುದೇ ಹೊರತು ಕಾನ್ಸೆಪ್ಟ್ ಆಧಾರಿತ ಮೇನ್ಸ್ ಪರೀಕ್ಷೆಯಲ್ಲಿ ಅನ್ವಯಿಸಲಾರವು.

ಯೂಟ್ಯೂಬ್ ಚಾನೆಲ್‌

ಇನ್ನು ಯೂಟ್ಯೂಬ್‌ಲ್ಲಿ ಪರೀಕ್ಷಾ ತಯಾರಿ ನಡೆಸುವಾಗ ಯಾವ ಪರೀಕ್ಷೆಗೆ ತಯಾರಿ ನಡೆಸುವುದು ಎಂಬುದನ್ನು ಮೊದಲು ನಿರ್ಧರಿಸಿ. ಉದಾಹರಣೆಗೆ ಎಸ್‌ಬಿಐ ಕ್ಲರ್ಕ್‌ಗಾಗಿ ತಯಾರಿ ನಡೆಸುತ್ತಿರುವಾಗ ನಡುವೆ ಇನ್ನು ಯಾವುದೋ ಪರೀಕ್ಷೆಯ ಅಧಿಸೂಚನೆ ಹೊರಬಿದ್ದಲ್ಲಿ ಇದರ ಜೊತೆಗೆ ಆ ಪರೀಕ್ಷೆಗೂ ಅಂದರೆ ಎಸ್‌ಎಸ್‌ಸಿ/ ಕೆಪಿಎಸ್‌ಸಿ/ ರೈಲ್ವೆ/ ಎಲ್‌ಐಸಿ ಮುಂತಾದವುಗಳ ಪ್ರಿಲಿಮ್ಸ್ ಪಠ್ಯಕ್ರಮ ಒಂದೇ ಎಂಬ ಕಾರಣಕ್ಕೆ ಆ ಪರೀಕ್ಷೆಗೂ ತಯಾರಿ ನಡೆಸುವ ದುಸ್ಸಾಹಸಕ್ಕೆ ಕೈ ಹಾಕದಿರಿ. ಇದರಿಂದ ಒಂದಕ್ಕಿಂತ ಹೆಚ್ಚು ಪ್ರಿಲಿಮ್ಸ್ ಪರೀಕ್ಷೆ ತೇರ್ಗಡೆಯಾದರೂ ಮೇನ್ಸ್‌ ಪರೀಕ್ಷೆಯಲ್ಲಿ ತೇರ್ಗಡೆ ಕಷ್ಟ ಸಾಧ್ಯ ಎಂಬುದು ನೆನಪಿನಲ್ಲಿಟ್ಟುಕೊಳ್ಳಬೇಕಾದ ಅಂಶ.

ಹಾಗೆಯೇ ಕೆಲವರು ಒಂದಕ್ಕಿಂತ ಹೆಚ್ಚು ಪರೀಕ್ಷೆಗಳಲ್ಲಿ ತೇರ್ಗಡೆಯಾಗಬಹುದು. ಅದು ಅವರ ವೈಯಕ್ತಿಕ ಜ್ಞಾನ ಹಾಗೂ ತಯಾರಿ ಮೇಲೆ ಅವಲಂಬಿತವಾಗಿರುತ್ತದೆ.

ಅಲ್ಲದೆ ಪ್ರಿಲಿಮ್ಸ್ ಪರೀಕ್ಷೆಗಾಗಿ ಸರ್ಕಾರ ಏಕರೂಪ ಸಿಇಟಿಯನ್ನು ಜಾರಿಗೆ ತರುವುದರಲ್ಲಿದೆ.

ಪರೀಕ್ಷಾ ತಯಾರಿಯನ್ನು ಕಾರ್ಯಗತಗೊಳಿಸುವುದು ಹೇಗೆ?

ಪರೀಕ್ಷಾ ತಂತ್ರಗಾರಿಕೆಗಾಗಿ ಯೂಟ್ಯೂಬ್‌ನ ಹಲವಾರು ತಂತ್ರಗಳನ್ನು ಅವಲೋಕಿಸಿ ನಂತರ ಒಂದೊಂದರಲ್ಲಿ ಒಂದೊಂದು ಅಂಶಗಳನ್ನು ಪಟ್ಟಿ ಮಾಡಿಕೊಂಡು ಸ್ವತಃ ನೀವೇ ನಿಮ್ಮ ಪರೀಕ್ಷಾ ತಂತ್ರ ರೂಪಿಸಿಕೊಳ್ಳಿ ಅಥವಾ ನಿಮಗೆ ಅನುಕೂಲವಾದ ಮತ್ತು ಮಾನ್ಯವಾದ ಯಾವುದಾದರೂ ಒಂದನ್ನು ಮಾತ್ರ ಅನುಸರಿಸಿ. ಆದರೆ ನಿರಂತರವಾಗಿ ನಿಮ್ಮ ಪರೀಕ್ಷಾ ತಂತ್ರಗಳನ್ನು ಬದಲಾಯಿಸುತ್ತಾ ಹೋಗಬೇಡಿ. ಏಕೆಂದರೆ ಆನ್‌ಲೈನ್‌ನಲ್ಲಿ ನಿಮಗೆ ಲೆಕ್ಕಕ್ಕೆ ಸಿಗದಷ್ಟು ಚಾನೆಲ್‌ಗಳು ಉಚಿತವಾಗಿ ಅಥವಾ ಪೇಯ್ಡ್‌ ಕೋರ್ಸ್‌ಗಳಿಂದ ನಿತ್ಯ ತರಬೇತಿ ನೀಡಲು ಕಾಯುತ್ತಿರುತ್ತಾರೆ. ಆದರೆ ನೀವು ಅವಲೋಕಿಸಬೇಕಾಗಿರುವುದು ಅವರಿಂದ ನೀವು ಎಷ್ಟು ವಿಷಯ ಅರ್ಥೈಸಿಕೊಂಡಿರಿ ಎಂಬ ವಾಸ್ತವಾಂಶವನ್ನು.

ನವೀಕರಿಸಿದ ವಿಷಯಗಳ ಅಭ್ಯಾಸ

ಇದರಿಂದ ಬಹುತೇಕ ತೊಂದರೆಯಾಗುವುದು ಜನರಲ್ ಅವೇರ್‌ನೆಸ್/ ಪ್ರಚಲಿತ ವಿದ್ಯಮಾನ ವಿಷಯಗಳಿಗೆ. ಉಳಿದ ವಿಷಯಗಳಲ್ಲಿ ಕಾನ್ಸೆಪ್ಟ್ ಕ್ಲಿಯರೆನ್ಸ್‌ಗಳಿಗಾಗಿ ಪ್ರಚಲಿತವಲ್ಲದ ವಿಷಯ ವೀಕ್ಷಿಸಬಹುದು. ಇದನ್ನು ಹೊರತುಪಡಿಸಿದರೆ ಪ್ರಚಲಿತವಿಲ್ಲದ ವಿಷಯಗಳ ಬಗ್ಗೆ ಗಮನ ಹರಿಸದೇ ಇರುವುದೇ ಒಳ್ಳೆಯದು. ಹೀಗಾಗಿ ಯೂಟ್ಯೂಬ್‌ನಲ್ಲಿ ನವೀಕರಿಸಿದ ವಿಷಯಗಳತ್ತ ಗಮನ ಕೊಡಿ. ಏಕೆಂದರೆ ವರ್ಷದಿಂದ ವರ್ಷಕ್ಕೆ ಸ್ಪರ್ಧೆ ಅಥವಾ ಕ್ಲಿಷ್ಟತೆಯನ್ನು ಹೆಚ್ಚಿಸಲು ಹೊಸ ಹೊಸ ಮಾದರಿಯ ಪ್ರಶ್ನೆಗಳನ್ನು ಕೇಳುವುದು ಸಾಮಾನ್ಯ. ಹೀಗಾಗಿ ಹೊಸ ಮಾದರಿಯ ಪ್ರಶ್ನೆಗಳ ಅಭ್ಯಾಸ ಕಡ್ಡಾಯ.⇒

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT