ಮುಂಬೈ: ಕೋವಿಡ್ ಸೃಷ್ಟಿಸಿರುವ ಅನಿಶ್ಚಿತತೆಯ ಕಾರಣಕ್ಕೆ ಯುವ ಜನತೆ ಸರ್ಕಾರಿ ನೌಕರಿಗೆ ಸೇರುವ ಬಗ್ಗೆ ಹೆಚ್ಚಿನ ಒಲವು ತೋರಿಸುತ್ತಿರುವುದು ಸಮೀಕ್ಷೆಯಿಂದ ತಿಳಿದು ಬಂದಿದೆ.

ಸರ್ಕಾರದ ವಿವಿಧ ಹುದ್ದೆಗಳಿಗೆ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ಮತ್ತು ಸರ್ಕಾರಿ ನೌಕರಿಗಳಿಗೆ ಅರ್ಜಿ ಹಾಕುವವರನ್ನು ಗುರಿಯಾಗಿರಿಸಿಕೊಂಡು ‘ಅಡ್ಡಾ247’ (Adda247) ಸಂಸ್ಥೆಯು 6,500 ಜನರ ಅಭಿಪ್ರಾಯ ಸಂಗ್ರಹಿಸಿದೆ.

ದೇಶದ 10 ನಗರಗಳಲ್ಲಿ ಈ ಸಮೀಕ್ಷೆ ನಡೆಸಲಾಗಿತ್ತು. 18 ರಿಂದ 30 ವರ್ಷದ ಒಳಗಿನವರು, ವಿದ್ಯಾರ್ಥಿಗಳು ಮತ್ತು ವೃತ್ತಿ ನಿರತರು ಸಮೀಕ್ಷೆಯಲ್ಲಿ ಭಾಗವಹಿಸಿದ್ದರು.

ಕೋವಿಡ್ ಪಿಡುಗು ದೇಶದ ಉದ್ಯೋಗ ಜಗತ್ತಿನ ಚಿತ್ರಣವನ್ನೇ ಬದಲಿಸಿದೆ. ಕಾರ್ಖಾನೆಗೆ ಬೀಗ, ಕಡ್ಡಾಯ ರಜೆ, ವೇತನ ಕಡಿತ, ಕೆಲಸದಿಂದ ವಜಾಗೊಳಿಸುವಂತಹ ಅನಿಶ್ಚಿತತೆಗಳು ಎಲ್ಲ ವಲಯಗಳಲ್ಲಿ ಸಾಮಾನ್ಯವಾಗಿವೆ. ಹೀಗಾಗಿ ಸರ್ಕಾರಿ ಉದ್ಯೋಗಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಸಮೀಕ್ಷೆಯಲ್ಲಿ ಭಾಗವಹಿಸಿದ್ದವರಲ್ಲಿ ಶೇ 82ರಷ್ಟು ಜನರು ಸರ್ಕಾರಿ ಉದ್ಯೋಗಕ್ಕೆ ಅರ್ಜಿ ಹಾಕಲು ಮುಂದಾಗಿದ್ದಾರೆ.

ಸರ್ಕಾರಿ ನೌಕರಿಯಲ್ಲಿನ ಉದ್ಯೋಗ ಸುರಕ್ಷತೆ, ಆಕರ್ಷಕ ಸಂಬಳ ಮತ್ತಿತರ ಭತ್ಯೆಗಳು ಉದ್ಯೋಗ ಆಕಾಂಕ್ಷಿಗಳನ್ನು ಹೆಚ್ಚಾಗಿ ಸೆಳೆಯುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.