ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೌದ್ಧಿಕ ಸಾಮರ್ಥ್ಯ ಪರೀಕ್ಷೆ: ವೇಗವಾಗಿ ಉತ್ತರಿಸುವುದು ಹೇಗೆ?

Last Updated 10 ಡಿಸೆಂಬರ್ 2019, 19:30 IST
ಅಕ್ಷರ ಗಾತ್ರ

ಸ್ಪರ್ಧಾತ್ಮಕ ಪರೀಕ್ಷೆ, ಅದು ಯಾವುದೇ ಇರಲಿ, ಎನ್‌ಟಿಎಸ್‌ಇಯಿಂದ ಹಿಡಿದು ಸಿಎಟಿವರೆಗೂ ಬೌದ್ಧಿಕ ಸಾಮರ್ಥ್ಯ ಪರೀಕ್ಷೆಯಲ್ಲಿ ಉತ್ತರಿಸುವ ವಿಧಾನ ಒಂದೇ. ಆ ಪ್ರಶ್ನೆಗಳಿಗೆ ವೇಗವಾಗಿ, ನಿಖರವಾಗಿ ಉತ್ತರಿಸುವುದು ಹೇಗೆ?

ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವಾಗ, ಎಷ್ಟೋ ಬಾರಿ ನಮಗೆ ಉತ್ತರಗಳು ಅಥವಾ ಉತ್ತರಿಸುವ ವಿಧಾನಗಳು ತಿಳಿದಿದ್ದರೂ ಸಹ, ಉತ್ತರಿಸುವ ಕಾಲಾವಕಾಶವು ಕಡಿಮೆ ಇರುವುದರಿಂದ ನಾವು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹಿಂದೆ ಉಳಿಯುತ್ತೇವೆ. ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿಯೂ ಕೂಡ ಕೊಟ್ಟಿರುವ ಪ್ರಶ್ನೆಗಳಿಗೆ ಎಷ್ಟು ವೇಗವಾಗಿ ಹಾಗೂ ನಿಖರವಾಗಿ ಉತ್ತರಿಸುತ್ತೇವೆ ಎನ್ನುವುದರಲ್ಲಿ ನಮ್ಮ ಯಶಸ್ಸು ಅಡಗಿರುತ್ತದೆ.

ಮೊದಲು ಬೌದ್ಧಿಕ ಸಾಮರ್ಥ್ಯ ಪರೀಕ್ಷೆಗಳ (GMAT) ಹಲವು ರೀತಿಯ ಪ್ರಶ್ನೆಗಳಿಗೆ ಅತ್ಯಂತ ವೇಗವಾಗಿ ಉತ್ತರಿಸುವ ಕೆಲವು ವಿಧಾನಗಳನ್ನು ತಿಳಿಯೋಣ.

1. ಕ್ಯಾಲೆಂಡರ್ ಆಧಾರಿತ ಸಮಸ್ಯೆಗಳು

ಸ್ವಲ್ಪ ಅಭ್ಯಾಸದ ನಂತರ ಈ ರೀತಿಯ ಎಲ್ಲ ಪ್ರಶ್ನೆಗಳಿಗೆ ಕೇವಲ 30 ಸೆಕೆಂಡ್‌ಗಳಲ್ಲಿ ಉತ್ತರಿಸಬಹುದು! ಒಂದು ಮಾದರಿ ಪ್ರಶ್ನೆ ಕೆಳಕಂಡಂತೆ ಇರಬಹುದು.

ಉದಾಹರಣೆ: 1975 ನೆಯ ಇಸವಿ, ಏಪ್ರಿಲ್ 2 ನೆಯ ತಾರೀಖು ಯಾವ ದಿನವಾಗಿತ್ತು? (What was the day on 02/04/1975?)

ಈ ಪ್ರಶ್ನೆಯನ್ನು ಉತ್ತರಿಸುವ ಮೊದಲು, ಕೆಳಕಂಡ ಕೆಲವು ವಿಷಯಗಳ ಬಗ್ಗೆ ತಿಳಿದಿರಬೇಕು,

ಅ) ಅಧಿಕ ವರ್ಷ: ನಾಲ್ಕು ವರ್ಷಗಳಿಗೊಮ್ಮೆ ಅಧಿಕ ವರ್ಷ ಬರುತ್ತದೆ. ಆ ವರ್ಷ, ಫೆಬ್ರುವರಿ ತಿಂಗಳಲ್ಲಿ 29 ದಿನಗಳಿರುತ್ತವೆ. ಯಾವುದೇ ವರ್ಷವು ಅಧಿಕ ವರ್ಷವಾಗಿದ್ದರೆ, ಆ ವರ್ಷದ ಕೊನೆಯ ಎರಡು ಅಂಕಿಗಳು 4ರಿಂದ ಸಂಪೂರ್ಣವಾಗಿ ಭಾಗವಾಗುತ್ತವೆ.

ಉದಾ: 1973. 73 4ರಿಂದ ಸಂಪೂರ್ಣವಾಗಿ ಭಾಗವಾಗುವುದಿಲ್ಲ. ಆದ್ದರಿಂದ ಇದು ಅಧಿಕ ವರ್ಷವಲ್ಲ.
1982. 82 4ರಿಂದ ಸಂಪೂರ್ಣವಾಗಿ ಭಾಗವಾಗುವುದಿಲ್ಲ. ಆದ್ದರಿಂದ ಇದು ಕೂಡ ಅಧಿಕ ವರ್ಷವಲ್ಲ.

1996. 96, ಇದು 4ರಿಂದ ಸಂಪೂರ್ಣವಾಗಿ ಭಾಗವಾಗುತ್ತದೆ. ಆದ್ದರಿಂದ ಇದು ಅಧಿಕ ವರ್ಷ.

2028. 28, ಇದು 4ರಿಂದ ಸಂಪೂರ್ಣವಾಗಿ ಭಾಗವಾಗುತ್ತದೆ. ಆದ್ದರಿಂದ ಇದು ಅಧಿಕ ವರ್ಷ.

ಆ) ಕೊಟ್ಟಿರುವ ವರ್ಷದವರೆಗೆ ಆ ಶತಮಾನದಲ್ಲಿ ಎಷ್ಟು ಅಧಿಕ ವರ್ಷಗಳು ಕಳೆದು ಹೋಗಿವೆ ಎಂದು ತಿಳಿಯಲು, ಕೊಟ್ಟಿರುವ ವರ್ಷದ ಕೊನೆಯ ಎರಡು ಅಂಕಿಗಳನ್ನು 4ರಿಂದ ಭಾಗಿಸಿ, ಭಾಗಲಬ್ಧವನ್ನು ಪರಿಗಣಿಸಿ.

ಉದಾ: 1971. 71 ನ್ನು 4ರಿಂದ ಭಾಗಿಸಿದರೆ ಬರುವ ಭಾಗಲಬ್ಧವು 17. ಅಂದರೆ 1971 ರ ತನಕ ಆ ಶತಮಾನದಲ್ಲಿ 17 ಅಧಿಕ ವರ್ಷಗಳು ಕಳೆದುಹೋಗಿವೆ.

2018. 18ನ್ನು 4ರಿಂದ ಭಾಗಿಸಿದರೆ ಬರುವ ಭಾಗಲಬ್ಧವು 4. ಅಂದರೆ 2018ರ ತನಕ ಆ ಶತಮಾನದಲ್ಲಿ 4 ಅಧಿಕ ವರ್ಷಗಳು ಕಳೆದುಹೋಗಿವೆ.

ಇ) ಈ ಕೆಳಗಿನ ಸಂಕೇತಗಳನ್ನು ತಿಳಿಯಿರಿ.

ಭಾನುವಾರ– 1, ಸೋಮವಾರ– 2, ಮಂಗಳವಾರ– 3, ಬುಧವಾರ– 4, ಗುರುವಾರ– 5, ಶುಕ್ರವಾರ - 6, ಶನಿವಾರ - 0

ಈ) 1900 ರಿಂದ 1999 ರವರೆಗಿನ ಯಾವುದೇ ದಿನಾಂಕಗಳ ದಿನಗಳನ್ನು ಕಂಡುಹಿಡಿಯಲು ಈ ಕೆಳಗಿನ ಅಂಕಿ- ಸಂಕೇತಗಳನ್ನು ತಿಳಿಯಿರಿ,

ಮೇಲಿನ ಕೋಷ್ಟಕದಲ್ಲಿನ ಒಂದೊಂದು ಅಂಕಿಯೂ ಒಂದೊಂದು ತಿಂಗಳನ್ನು ಪ್ರತಿನಿಧಿಸುತ್ತದೆ. ಈ ಕೋಷ್ಟಕವನ್ನು ಸರಳವಾಗಿ ಹೀಗೆ ನೆನಪಿನಲ್ಲಿಟ್ಟುಕೊಳ್ಳಿ, 12ರ ವರ್ಗ, 5ರ ವರ್ಗ, 6ರ ವರ್ಗ ಮತ್ತು 146. ಸುಲಭವಲ್ಲವೇ!

ಈಗ ಮೇಲಿನ ಉದಾಹರಣೆಯನ್ನೆ ತೆಗೆದುಕೊಳ್ಳೋಣ,

  • ಪ್ರಶ್ನೆ 1) 1975 ನೆಯ ಇಸವಿ, ಏಪ್ರಿಲ್ 2 ನೆಯ ತಾರೀಖು ಯಾವ ದಿನವಾಗಿತ್ತು?

ಈ ಸಮಸ್ಯೆಯನ್ನು ಬಿಡಿಸಲು, ಈ ಕೆಳಕಂಡಂತೆ ದತ್ತಾಂಶಗಳನ್ನು ಪಟ್ಟಿ ಮಾಡಿ

ಮೇಲಿನ ಕೋಷ್ಟಕದಲ್ಲಿರುವಂತೆ ( ಇ) , ಶೇಷ 4- ಬುಧವಾರವನ್ನು ಪ್ರತಿನಿಧಿಸುತ್ತದೆ. ಆದ್ದರಿಂದ, 1975ನೆಯ ಇಸವಿ, ಏಪ್ರಿಲ್ 2ನೆಯ ತಾರೀಖು ಬುಧವಾರವಾಗಿತ್ತು!

ಗಮನಿಸಿ: ಯಾವುದೇ ದಿನಾಂಕವು ಜನವರಿ ಅಥವಾ ಫೆಬ್ರುವರಿಯಲ್ಲಿದ್ದು ಮತ್ತು ಅಧಿಕ ವರ್ಷದಲ್ಲಿದ್ದರೆ, ಆಗ ದೊರೆಯುವ ಶೇಷದಲ್ಲಿ ಒಂದನ್ನು ಕಳೆಯಬೇಕು. ಅಂದರೆ, ಉತ್ತರದಲ್ಲಿ ದೊರೆಯುವ ದಿನದ ಹಿಂದಿನ ದಿನವನ್ನು ಪರಿಗಣಿಸಬೇಕು.

  • ಪ್ರಶ್ನೆ 2. 06/01/1988 ಯಾವ ದಿನವಾಗಿತ್ತು?

ಈ ಸಮಸ್ಯೆಯನ್ನು ಬಿಡಿಸಲು, ಈ ಕೆಳಕಂಡಂತೆ ದತ್ತಾಂಶಗಳನ್ನು ಪಟ್ಟಿ ಮಾಡಿ

ಮೇಲಿನ ಕೋಷ್ಟಕದಲ್ಲಿರುವಂತೆ (ಇ) , ಶೇಷ 5 - ಗುರುವಾರವನ್ನು ಪ್ರತಿನಿಧಿಸುತ್ತದೆ. ಆದರೆ , ಈ ಉದಾಹರಣೆಯಲ್ಲಿ 06ನೆಯ ದಿನಾಂಕವು ಜನವರಿ ತಿಂಗಳಿನಲ್ಲಿದೆ ಮತ್ತು 1988 ಅಧಿಕ ವರ್ಷವಾಗಿದೆ, ಆದ್ದರಿಂದ ಶೇಷದಲ್ಲಿ 1ನ್ನು ಕಳೆಯಬೇಕು, 5 -1 = 4, 4 - ಬುಧವಾರ. ಹಾಗಾಗಿ 06/01/1988 ಬುಧವಾರವಾಗಿತ್ತು.
ಹೀಗೆ, 1900 ರಿಂದ 1999 ರವರೆಗಿನ ಎಲ್ಲ ದಿನಾಂಕಗಳ ದಿನಗಳನ್ನು ಸುಲಭವಾಗಿ ಕಂಡುಹಿಡಿಯಬಹುದು.

ಈಗ, 2000 ದಿಂದ 2099 ರ ವರೆಗಿನ ದಿನಾಂಕಗಳ ದಿನಗಳನ್ನು ಕಂಡುಹಿಡಿಯೋಣ
ಅದಕ್ಕಾಗಿ ಈ ಮೇಲಿನ (ಈ) ಕೋಷ್ಟಕದ ಪ್ರತಿ ತಿಂಗಳ ಅಂಕಿ-ಸಂಕೇತಗಳಲ್ಲಿ 1 ನ್ನು ಕಳೆಯಿರಿ. ಕಳೆದಾಗ ಕೋಷ್ಟಕವು ಹೀಗಿರುತ್ತದೆ.

ಉ) 2000 ರಿಂದ 2099 ರವರೆಗಿನ ಯಾವುದೇ ದಿನಾಂಕಗಳ ದಿನಗಳನ್ನು ಕಂಡುಹಿಡಿಯಲು ಈ ಕೆಳಗಿನ ಅಂಕಿ- ಸಂಕೇತಗಳನ್ನು ತಿಳಿಯಿರಿ,


ಮೇಲಿನ ಕೋಷ್ಟಕದ ಸಹಾಯದಿಂದ ನಾವು 2000 ದಿಂದ 2099 ರ ವರೆಗಿನ ದಿನಾಂಕಗಳ ದಿನಗಳನ್ನು ಸುಲಭವಾಗಿ ಕಂಡುಹಿಡಿಯಬಹುದು.

  • ಪ್ರಶ್ನೆ 3: 11/12/2019 ಯಾವ ದಿನವಾಗಿದೆ?

ಈ ಸಮಸ್ಯೆಯನ್ನು ಬಿಡಿಸಲು, ಈ ಕೆಳಕಂಡಂತೆ ದತ್ತಾಂಶಗಳನ್ನು ಪಟ್ಟಿ ಮಾಡಿ


ಮೇಲಿನ ಕೋಷ್ಟಕದಲ್ಲಿರುವಂತೆ (ಇ) , ಶೇಷ 4 - ಬುಧವಾರವನ್ನು ಪ್ರತಿನಿಧಿಸುತ್ತದೆ. 11/12/2019 ಬುಧವಾರವಾಗಿದೆ.

ಹೀಗೆ ಎಲ್ಲ ಶತಮಾನಗಳಲ್ಲಿನ ದಿನಗಳನ್ನು ಸುಲಭವಾಗಿ ಪತ್ತೆ ಹಚ್ಚಬಹುದು.

(ಲೇಖಕರು ನಿರ್ದೇಶಕರು, ಸ್ಮಾರ್ಟ್ ಸೆರೆಬ್ರಮ್, ಬೆಂಗಳೂರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT