ಶನಿವಾರ, ಜುಲೈ 31, 2021
21 °C

ಕೋವಿಡ್–19 ಹರಡದಂತೆ ಕ್ರಮ: ದ್ವಿತೀಯ ಪಿಯು ಇಂಗ್ಲಿಷ್‌ ಪರೀಕ್ಷೆಗೆ ಸಕಲ ಸಿದ್ಧತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಲಾಕ್‌ಡೌನ್ ಘೋಷಣೆಯಾಗಿದ್ದರಿಂದಾಗಿ ಮುಂದೂಡಲಾಗಿದ್ದ ದ್ವಿತೀಯ ಪಿಯು ಇಂಗ್ಲಿಷ್‌ ಪರೀಕ್ಷೆ 1,016 ಕೇಂದ್ರಗಳಲ್ಲಿ ಗುರುವಾರ ಬೆಳಿಗ್ಗೆ 10.15ರಿಂದ 1.30ರ ವರೆಗೆ ನಡೆಯಲಿದೆ.

‘ಪ್ರತಿಯೊಬ್ಬರ ವಿದ್ಯಾರ್ಥಿಯೂ ಮುಖಗವಸು ಹಾಕಿಕೊಂಡೇ ಪರೀಕ್ಷಾ ಕೇಂದ್ರಕ್ಕೆ ಬರಬೇಕು. ಜ್ವರ ಲಕ್ಷಣ ಇಲ್ಲದವರನ್ನು ಮಾತ್ರ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದು. ಜ್ವರ ಲಕ್ಷಣ ಕಂಡುಬಂದವರನ್ನು ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಯುವುದಕ್ಕೆ ಅವಕಾಶ ನೀಡಲಾಗುವುದು‌’ ಎಂದು ಇಲಾಖೆ ತಿಳಿಸಿದೆ.

ಪರೀಕ್ಷಾ ಕೇಂದ್ರ ಬದಲಾವಣೆ ಬಯಸಿದ್ದ ವಿದ್ಯಾರ್ಥಿಗಳು ತಾಂತ್ರಿಕ ಕಾರಣಕ್ಕೆ ಕೇಂದ್ರ ಬದಲಾವಣೆ ಆಗದಿದ್ದಲ್ಲಿ ಅಥವಾ ಅಲ್ಲಿಗೆ ಹೋಗಲು ಅಸಾಧ್ಯವಾಗಿದ್ದಲ್ಲಿ, ತಮ್ಮ ಹಿಂದಿನ ಪರೀಕ್ಷಾ ಕೇಂದ್ರದಲ್ಲಿಯೇ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ. ಜ್ವರದಿಂದ ಪರೀಕ್ಷೆ ಬರೆಯಲು ಅಸಾಧ್ಯವಾದವರಿಗೆ ಪೂರಕ ಪರೀಕ್ಷೆ ವೇಳೆ ಹೊಸದಾಗಿ ಬರೆಯುವ ಅಭ್ಯರ್ಥಿಗಳು ಎಂದೇ ಅವಕಾಶ ನೀಡಲಾಗುತ್ತದೆ.

ಒಂದು ಕೊಠಡಿಯಲ್ಲಿ ಗರಿಷ್ಠ 24 ಮಕ್ಕಳಿಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದ್ದು, ಸಾಕಷ್ಟು ಸ್ಥಳಾವಕಾಶ ಇರುವ ಕೇಂದ್ರಗಳಲ್ಲಿ ಆ ಸಂಖ್ಯೆಯನ್ನು 18ರಿಂದ 12ರವರೆಗೆ ಇಳಿಸಲಾಗಿದೆ. ಮಾರ್ಚ್‌ನಲ್ಲಿ ಇದ್ದ ಪರೀಕ್ಷಾ ಕೊಠಡಿಗಳಿಗೆ ಹೋಲಿಸಿದರೆ ಈ ಬಾರಿ 13,528 ಕೊಠಡಿಗಳನ್ನು ಹೆಚ್ಚುವರಿಯಾಗಿ ವ್ಯವಸ್ಥೆ ಮಾಡಲಾಗಿದೆ.

ಉಚಿತ ಸಾರಿಗೆ ವ್ಯವಸ್ಥೆ: ಪರೀಕ್ಷೆ ಪ್ರವೇಶಪತ್ರ ತೋರಿಸಿದರೆ ಸಾರಿಗೆ ಸಂಸ್ಥೆ ಬಸ್‌ಗಳಲ್ಲಿ ಉಚಿತ ಪ್ರಯಾಣ ಮಾಡಬಹುದು. ಗಡಿ ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಆಯಾ ಜಿಲ್ಲಾಧಿಕಾರಿಗಳಿಂದ ವಿಶೇಷ ಪಾಸ್‌ ನೀಡಲಾಗಿದೆ.

ಅಂಕಿ ಅಂಶ
ಪರೀಕ್ಷಾ ಕೊಠಡಿಗಳು- 36,592
ಮಾರ್ಚ್‌ನಲ್ಲಿ ಇದ್ದ ಕೊಠಡಿಗಳು- 23,064
ಹೊಸ ವಿದ್ಯಾರ್ಥಿಗಳು- 5,40,484
ಖಾಸಗಿ ವಿದ್ಯಾರ್ಥಿಗಳು- 27,120
ಪುನರಾವರ್ತಿತ ವಿದ್ಯಾರ್ಥಿಗಳು- 28,393
ಪರೀಕ್ಷೆ ಬರೆಯಲಿರುವ ಒಟ್ಟು ವಿದ್ಯಾರ್ಥಿಗಳು- 5,95,997

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು