ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಶಾಲೆಗಳ ಬಲವರ್ಧನೆಗೆ ‘ಬ್ರಿಕ್‌ವರ್ಕ್‌’

Last Updated 1 ಜುಲೈ 2019, 19:45 IST
ಅಕ್ಷರ ಗಾತ್ರ

ಉತ್ತರಕನ್ನಡ: ಮೂಲಸೌಕರ್ಯಗಳು ಇಲ್ಲದೆ ದುಸ್ಥಿತಿಯಲ್ಲಿರುವ ಸರ್ಕಾರಿ ಶಾಲೆಗಳ ಬಲವರ್ಧನೆಗೆ ಬ್ರಿಕ್‌ವರ್ಕ್ ಫೌಂಡೇಷನ್ ಶ್ರಮಿಸುತ್ತಿದೆ.

ಶಿಕ್ಷಣ ಕ್ಷೇತ್ರದ ಸುಧಾರಣೆಗೆ ಶ್ರಮಿಸುತ್ತಿರುವ ಈ ಪ್ರತಿಷ್ಠಾನ, ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲ್ಲೂಕಿನ ಕೆಲವು ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿಪಡಿಸುತ್ತಿದೆ. ಇಷ್ಟಕ್ಕೆ ಸೀಮಿತವಾಗದೆ, ಶೈಕ್ಷಣಿಕ ಗುಣಮಟ್ಟ ಸುಧಾರಣೆಯತ್ತ ಚಿತ್ತ ಹರಿಸಿದೆ.ಅಧ್ಯಯನಕ್ಕೆ ನೆರವಾಗುವ ಹಲವು ಪಾಠೋಪಕರಣ ಒದಗಿಸುತ್ತಿದೆ. ಈ ಶಾಲೆಗಳನ್ನು ಪ್ರತಿಷ್ಠಾನ ಮೂರು ವರ್ಷಗಳವರೆಗೆ
ಅಭಿವೃದ್ಧಿಪಡಿಸಲಿದೆ.

‘ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಖಾಸಗಿ ಸಂಸ್ಥೆಗಳು ಕೈಜೋಡಿಸಬೇಕಾದ ಅನಿವಾರ್ಯತೆ ಇದೆ. ಖಾಸಗಿ ಶಾಲೆಗಳಮಾದರಿಯಲ್ಲಿಯೇ ಅಭಿವೃದ್ಧಿಪಡಿಸಿ ಪೋಷಕರಲ್ಲಿ ಸರ್ಕಾರಿ ಶಾಲೆಯ ಬಗ್ಗೆ ಒಳ್ಳೆಯ ಅಭಿಪ್ರಾಯ ಮೂಡಿಸಬೇಕು’ ಎಂಬುದು ಬ್ರಿಕ್ ವರ್ಕ್ ಫೌಂಢೇಷನ್‌ನ ಅಧ್ಯಕ್ಷೆ ಸಂಗೀತ ಕುಲಕರ್ಣಿ ಅವರ ಯೋಚನೆ.

ಶಿರಾಲಿಯ ಸಾಲೆಮನಿ ಶಾಲೆಯಲ್ಲಿ ನಲಿಯುತ್ತಿರುವ ಚಿಣ್ಣರು
ಶಿರಾಲಿಯ ಸಾಲೆಮನಿ ಶಾಲೆಯಲ್ಲಿ ನಲಿಯುತ್ತಿರುವ ಚಿಣ್ಣರು

ಈ ಪ್ರತಿಷ್ಠಾನವು ‘ಸ್ವಚ್ಛ ಶಾಲೆ’ ಅಭಿಯಾನ ಆರಂಭಿಸಿ ಈ ಮೂಲಕ, ಮುರಿದ ಪೀಠೋಪಕರಣ, ಬಿರುಕುಬಿಟ್ಟ ಗೋಡೆಗಳು, ತಾರಸಿಯನ್ನು ದುರಸ್ತಿಗೊಳಿಸಿ ಸುಂದರ ರೂಪ ನೀಡುತ್ತಿದೆ.

ಶೌಚಾಲಯ ನಿರ್ಮಾಣ ಅಥವಾ ನವೀಕರಣ, ಆವರಣವನ್ನು ಸುಂದರಗೊಳಿಸುವುದು, ಸುಸಜ್ಜಿತ ಕಾಂಪೌಂಡ್ನಿರ್ಮಿಸುವುದು ಕೂಡ ಈ ಅಭಿಯಾನದ ಭಾಗವಾಗಿವೆ.

ದತ್ತು ಪಡೆದ ಶಾಲೆಗಳಲ್ಲಿ ವಿಜ್ಞಾನ ಮತ್ತು ಗಣಿತ ಪ್ರಯೋಗಾಲಯಗಳನ್ನು ಸುಸಜ್ಜಿತವಾಗಿ ನಿರ್ಮಿಸಲಾಗುತ್ತಿದೆ. ಮಕ್ಕಳ ಓದಿಗೆ ಅನುಕೂಲವಾಗಲೆಂದು ಕನ್ನಡ ಮತ್ತು ಇಂಗ್ಲಿಷ್‌ ಪುಸ್ತಕಗಳನ್ನೊಳಗೊಂಡ ಗ್ರಂಥಾಲಯವು ರೂಪುಗೊಳ್ಳುತ್ತಿದೆ. ಈ ಶಾಲೆಗಳನ್ನಷ್ಟೆ ಅಲ್ಲದೇ,ಭಟ್ಕಳ ತಾಲ್ಲೂಕಿನ ಸರ್ಕಾರಿಅನುದಾನಿತ ಜನತಾ ವಿದ್ಯಾಲಯದ ಪ್ರೌಢಶಾಲೆಯನ್ನೂದತ್ತು ಪಡೆಯಲಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಶಾಲೆಗಳನ್ನು ದತ್ತು ಪಡೆಯುವ ಇರಾದೆ ಇದೆ.

*ಯೋಗ, ವ್ಯಕ್ತಿತ್ವ ಅಭಿವೃದ್ಧಿ, ಕ್ರೀಡಾ ಚಟುವಟಿಕೆಗಳಿಗೂ ಒತ್ತು ನೀಡುತ್ತಿರುವುದರಿಂದ ಈ ಶಾಲೆಗಳಲ್ಲಿ ದಾಖಲಾತಿಗೆ ಪೈಪೋಟಿ ಹೆಚ್ಚಾಗುತ್ತಿದೆ.

ಅಜಯನ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT