ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೌಶಲ ಆಧಾರಿತ ಕೋರ್ಸ್‌ಗಳು

Last Updated 10 ಆಗಸ್ಟ್ 2020, 21:37 IST
ಅಕ್ಷರ ಗಾತ್ರ

ಪಿಯುಸಿ ವಿಜ್ಞಾನ ವಿಭಾಗ:

* ಪಿಯುಸಿಯಲ್ಲಿ ವಿಜ್ಞಾನ ವಿಭಾಗವು ಅತಿ ಪ್ರಸಿದ್ಧ ಹಾಗೂ ನೆಚ್ಚಿನ ವಿಭಾಗವಾಗಿದ್ದು, ಬಹುತೇಕರ ಆಯ್ಕೆಯಾಗಿದೆ

* ಎಂಜಿನಿಯರಿಂಗ್, ವೈದ್ಯಕೀಯ, ಐಟಿ ಹಾಗೂ ವೈಜ್ಞಾನಿಕ ಸಂಶೋಧನಾ ಕೋರ್ಸ್‌ಗಳಿಗೆ ಇದು ನೆಲೆಗಟ್ಟು

ಯಾರಿಗೆ ಸೂಕ್ತ?:ತಂತ್ರಜ್ಞಾನ ನಿಮ್ಮನ್ನು ಆಕರ್ಷಿಸಿದ್ದರೆ, ಸಂಖ್ಯೆಗಳ ಜೊತೆ ನಿಮಗೆ ಒಡನಾಟವಿದ್ದರೆ ನೀವು ನಿಸ್ಸಂಶಯವಾಗಿ ವಿಜ್ಞಾನ ವಿಭಾಗ ಆರಿಸಿಕೊಳ್ಳಬಹುದು. ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತಶಾಸ್ತ್ರಗಳನ್ನು ಓದಬಹುದು. ವೈದ್ಯಕೀಯ ವೃತ್ತಿಗೆ ಜೀವಶಾಸ್ತ್ರ ಆಯ್ಕೆ ಮಾಡಿಕೊಳ್ಳಬೇಕು.

ಪಿಯುಸಿ ವಾಣಿಜ್ಯ ವಿಭಾಗ:
* ವಿಜ್ಞಾನದ ಬಳಿಕ ಅತಿಹೆಚ್ಚು ಜನಪ್ರಿಯ ಎನಿಸಿರುವ ಕೋರ್ಸ್ ವಾಣಿಜ್ಯ (ಕಾಮರ್ಸ್). ಸಂಖ್ಯೆಗಳು, ಹಣಕಾಸು, ಅರ್ಥಶಾಸ್ತ್ರದ ಬಗ್ಗೆ ಆಸಕ್ತಿಯಿರುವವರು ಇದನ್ನು ಆಯ್ಕೆ ಮಾಡಿಕೊಳ್ಳಬಹುದು

* ಚಾರ್ಟರ್ಡ್ ಅಕೌಂಟೆಂಟ್, ಎಂಬಿಎ, ಬ್ಯಾಂಕಿಂಗ್ – ಹೀಗೆ ವಿಶಾಲವಾದ ವೃತ್ತಿ ಆಯ್ಕೆಗಳನ್ನು ಇದು ಒದಗಿಸುತ್ತದೆ

* ವ್ಯವಹಾರ ಮಾಡಲು ಬೇಕಾದ ಮಹತ್ವದ ಜ್ಞಾನವನ್ನು ಈ ಕೋರ್ಸ್ ಒದಗಿಸುತ್ತದೆ

ಯಾರಿಗೆ ಸೂಕ್ತ?: ವ್ಯವಹಾರದ ಬಗ್ಗೆ ಆಸಕ್ತಿ ಇರುವವರಿಗೆ ವಾಣಿಜ್ಯ ವಿಭಾಗ ಸೂಕ್ತ. ಸ್ವಂತ ಉದ್ಯಮದ ಕನಸು ಕಾಣುವವರು ಆಯ್ಕೆ ಮಾಡಿಕೊಳ್ಳಬಹುದು

**
ಪಿಯುಸಿ ಕಲಾ ವಿಭಾಗ‌

* ಪತ್ರಿಕೋದ್ಯಮ, ಭಾಷೆ, ಇತಿಹಾಸ, ಮನೋವಿಜ್ಞಾನ ಮೊದಲಾದ ವೃತ್ತಿ ಆಯ್ಕೆಗಳನ್ನು ನೀಡುತ್ತದೆ

* ವಿನ್ಯಾಸ, ಭಾಷೆ, ಪ್ರದರ್ಶನ ಕಲೆಗಳು, ಮಾನವಿಕ ಶಾಸ್ತ್ರಗಳು ಹೆಚ್ಚಿನ ವೇತನ ನೀಡುವ ಕೆಲಸಗಳಾಗಿವೆ

* ಕಲೆ ವಿಷಯವು ಸೃಜನಶೀಲತೆ ಮತ್ತು ಸ್ವಯಂ ಅಭಿವ್ಯಕ್ತಿಗೆ ಉತ್ತೇಜನ ನೀಡುತ್ತದೆ. ನಾಯಕತ್ವ ಗುಣ ಬೆಳೆಸಿಕೊಳ್ಳಲು ನೆರವಾಗುತ್ತದೆ

ಯಾರಿಗೆ ಸೂಕ್ತ?

ಸೃಜನಶೀಲ ಮತ್ತು ಮಾನವೀಯ ವಿಷಯಗಳಿಗೆ ತುಡಿಯುವ ಮನಸ್ಸು ಇರುವವರಿಗೆ ಈ ವಿಭಾಗವು ಸೂಕ್ತ

***

ಕೈಗಾರಿಕಾ ತರಬೇತಿ (ಐಟಿಐ)

ಐಟಿಐ ತಾಂತ್ರಿಕ ಕೋರ್ಸ್‌ಗಳು: ಇದು ಹತ್ತನೇ ತರಗತಿ ಬಳಿಕದ ಅತ್ಯುತ್ತಮ ಆಯ್ಕೆಗಳಲ್ಲಿ ಒಂದಾಗಿದೆ.

*ಕಂಪ್ಯೂಟರ್ ಹಾರ್ಡ್‌ವೇರ್ ಅಂಡ್ ನೆಟ್‌ವರ್ಕಿಂಗ್*ಸಿವಿಲ್*ಎಲೆಕ್ಟ್ರೀಷಿಯನ್‌ *ಎಲೆಕ್ಟ್ರಾನಿಕ್ ಮೆಕ್ಯಾನಿಕ್ *ಮೆಕ್ಯಾನಿಕ್ *ಸರ್ವೇಯರ್ *ರೇಡಿಯಾಲಜಿ ಟೆಕ್ನೀಷಿಯನ್‌ಯನ್ ಇತ್ಯಾದಿ.

ಐಟಿಐ ತಾಂತ್ರಿಕೇತರ ಕೋರ್ಸ್‌ಗಳು: ಐಟಿಐನ ತಾಂತ್ರಿಕೇತರ ಕೋರ್ಸ್‌ಗಳಿಗೂ ಸೇರಬಹುದು

*ಬೇಕರಿ*ಕಂಪ್ಯೂಟರ್ ಆಪರೇಟರ್ ಮತ್ತು ಪ್ರೋಗ್ರಾಮಿಂಗ್ ಅಸಿಸ್ಟೆಂಟ್*ಫುಡ್ ಅಂಡ್ ಬಿವರೇಜ್ ಸರ್ವೀಸ್*ಫುಡ್ ಪ್ರೊಡಕ್ಷನ್*ಹೇರ್ ಅಂಡ್ ಸ್ಕಿನ್ ಕೇರ್*ಹೌಸ್‌ಕೀಪರ್*ಮಲ್ಟಿಮೀಡಿಯಾ, ಆ್ಯನಿಮೇಷನ್, ಸ್ಪೆಷಲ್ ಎಫೆಕ್ಟ್*ಪ್ಲಂಬರ್*ವೆಲ್ಡರ್*ಸ್ಪಾ ಥೆರಪಿ

**
ಡಿಪ್ಲೊಮಾ ಇನ್ ವೊಕೇಶನ್

ಪಾಲಿಟೆಕ್ನಿಕ್ ಡಿಪ್ಲೊಮಾ ಅಥವಾ ಐಟಿಐ ಪ್ರಮಾಣಪತ್ರ ಕೋರ್ಸ್ ಬದಲು, 3 ವರ್ಷದ ಡಿ.ವೋಕ್ (ಡಿಪ್ಲೊಮಾ ಇನ್ ವೊಕೇಶನ್) ಅನ್ನು ಸಹ ಆರಿಸಿಕೊಳ್ಳಬಹುದು.

*ಸಾಫ್ಟ್‌ವೇರ್‌ ಡೆವಲಪ್‌ಮೆಂಟ್*ಗ್ರಾಫಿಕ್ ಮತ್ತು ಮಲ್ಟಿಮೀಡಿಯಾ*ರೆಫ್ರಿಜರೇಟರ್ ಮತ್ತು ಏರ್ ಕಂಡೀಷನಿಂಗ್*ಬ್ಯಾಂಕಿಂಗ್ ಹಣಕಾಸು ಸೇವೆಗಳು ಹಾಗೂ ವಿಮೆ (ಬಿಎಫ್‌ಎಸ್‌ಐ)*ಮೆಡಿಕಲ್ ಇಮೇಜಿಂಗ್ ಇತ್ಯಾದಿ.

**
ಕೌಶಲ ಆಧರಿತ ಕೋರ್ಸ್

*ಅನಿಮೇಟರ್*ಬ್ಯೂಟಿ ಥೆರಪಿಸ್ಟ್*ಆಹಾರ ಸಂಸ್ಕರಣೆ*ಹರಳು ಮತ್ತು ಚಿನ್ನಾಭರಣ*ಆರೋಗ್ಯಸೇವೆ*ಮೊಬೈಲ್ ಫೋನ್ ತಂತ್ರಜ್ಞಾನ*ಸಾವಯವ ಕೃಷಿ*ಮಾರಾಟ ಪ್ರತಿನಿಧಿ*ಸಾಫ್ಟ್‌ವೇರ್ ಡೆವಲಪ್‌ಮೆಂಟ್*ಸೌರವಿದ್ಯುತ್ ವ್ಯವಸ್ಥೆ ಸ್ಥಾಪಕ ಇತ್ಯಾದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT