ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಥಾ ಮಾತು

Published 25 ಏಪ್ರಿಲ್ 2024, 17:38 IST
Last Updated 25 ಏಪ್ರಿಲ್ 2024, 17:38 IST
ಅಕ್ಷರ ಗಾತ್ರ

ಪ್ರಧಾನಿ ನರೇಂದ್ರ ಮೋದಿ ಅವರು ಜನರ ನಡುವೆ ಬಿರುಕು ಮೂಡಿಸಲು ಪ್ರಯತ್ನಿಸುತ್ತಿದ್ದು, ‘ಇಂಡಿಯಾ’ ಒಕ್ಕೂಟವು ಅದರ ವಿರುದ್ಧ ಹೋರಾಡುತ್ತಿದೆ. ಅಂಬೇಡ್ಕರ್‌ ಅವರ ಸಂವಿಧಾನದ ರಕ್ಷಣೆಗೆ ಹಾಗೂ ದೇಶದ ಜನರನ್ನು ಒಗ್ಗೂಡಿಸಲು ವಿರೋಧಪಕ್ಷಗಳ ಒಕ್ಕೂಟವು ಪ್ರಯತ್ನಿಸುತ್ತಿದೆ. ಚುನಾವಣಾ ಆಯೋಗವನ್ನು ಸ್ವತಂತ್ರವಾಗಿ ಕಾರ್ಯ ನಿರ್ವಹಿಸಲು ಬಿಡಬೇಕು. ಜನರಿಗೆ ನ್ಯಾಯ ಒದಗಿಸಲು ನ್ಯಾಯಾಂಗವೂ ಸ್ವತಂತ್ರವಾಗಬೇಕು.

–ಫಾರೂಕ್ ಅಬ್ದುಲ್ಲಾ, ನ್ಯಾಷನಲ್‌ ಕಾನ್ಫರೆನ್ಸ್‌ ಅಧ್ಯಕ್ಷ

***

ಕಳೆದ ಹತ್ತು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿರುವ ಕೆಲಸಗಳನ್ನು ಹಿಮಾಲಯದ ಎತ್ತರಕ್ಕೆ ಹೋಲಿಸಬಹುದು. ಕಾಂಗ್ರೆಸ್‌ ಮಾಡಿರುವ ಕೆಲಸಗಳನ್ನು ಗುಡ್ಡಕ್ಕೆ ಹೋಲಿಸಬಹುದು. ಮೋದಿ ಅವರು ಮಾಡಿರುವ ಕೆಲಸವನ್ನು ಗಮನಿಸಿದರೆ, ನಿದ್ದೆಯಲ್ಲಿರುವ ವ್ಯಕ್ತಿಯನ್ನು ಎಬ್ಬಿಸಿ ಕೇಳಿದರೂ ಪ್ರಧಾನಿಯಾಗಲು ರಾಹುಲ್‌ ಗಾಂಧಿಗಿಂತ ನರೇಂದ್ರ ಮೋದಿ ಅವರೇ ಉತ್ತಮ ಎಂದು ಹೇಳುತ್ತಾನೆ.

–ಏಕನಾಥ ಶಿಂದೆ, ಮಹಾರಾಷ್ಟ್ರ ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT