ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಿರಾಶ್ರಿತ ಕಾಶ್ಮೀರಿ ಪಂಡಿತರ ಮತದಾನಕ್ಕೆ ವಿವಿಧೆಡೆ 34 ಮತಗಟ್ಟೆ ಸ್ಥಾಪನೆ

Published 24 ಮೇ 2024, 14:00 IST
Last Updated 24 ಮೇ 2024, 14:00 IST
ಅಕ್ಷರ ಗಾತ್ರ

ಜಮ್ಮು: ದೇಶದ ವಿವಿಧೆಡೆ ವಲಸೆ ಹೋಗಿರುವ 26 ಸಾವಿರಕ್ಕೂ ಹೆಚ್ಚಿನ ಕಾಶ್ಮೀರಿ ಪಂಡಿತರು ಮತದಾನ ಮಾಡಲು ಅನುಕೂಲವಾಗುವಂತೆ ದೆಹಲಿ, ಜಮ್ಮು ಮತ್ತು ಉಧಮ್‌ಪುರಗಳಲ್ಲಿ ಒಟ್ಟು 34 ಮತಗಟ್ಟೆಗಳನ್ನು ಆಯೋಗವು ಸ್ಥಾಪಿಸಿದೆ. ಶನಿವಾರ ನಡೆಯಲಿರುವ ಆರನೇ ಹಂತದ ಮತದಾನದ ವೇಳೆ ಈ ಜನರು ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಲೋಕಸಭಾ ಕ್ಷೇತ್ರಕ್ಕೆ ಮತದಾನ ಮಾಡಲಿದ್ದಾರೆ.

ಈಗಾಗಲೇ ಜಮ್ಮು ಮತ್ತು ಕಾಶ್ಮೀರದ ನಾಲ್ಕೂ ಲೋಕಸಭಾ ಕ್ಷೇತ್ರಗಳಿಗೆ ಮತದಾನ ಮುಗಿದಿದೆ. ಕಾಶ್ಮೀರಿ ಪಂಡಿತರ ಮತದಾನದ ಬಳಿಕ ಇಲ್ಲಿನ ಮತದಾನ ಪ್ರಕ್ರಿಯೆಯು ಪೂರ್ಣಗೊಳ್ಳಲಿದೆ. ಈ ಎಲ್ಲರೂ ಮತಪತ್ರದ ಮೂಲಕ ಮತದಾನ ಮಾಡಲಿದ್ದಾರೆ.

ಜಮ್ಮುವಿನಲ್ಲಿ 21 ಮತಗಟ್ಟೆ ಹಾಗೂ 8 ಸಹಾಯಕ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಉಧಮ್‌ಪುರದಲ್ಲಿ ಒಂದು ಹಾಗೂ ದೆಹಲಿಯಲ್ಲಿ ನಾಲ್ಕು ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಎಲ್ಲ ಕಾಶ್ಮೀರಿ ಪಂಡಿತರು ಮತಗಟ್ಟೆಗೆ ಬಂದು ಮತದಾನ ಮಾಡಬೇಕು ಎಂದು ಆಯೋಗ ಕೋರಿಕೊಂಡಿದೆ. ಹೆಚ್ಚು ನಿರಾಶ್ರಿತರು ಇರುವ ಪ್ರದೇಶಗಳನ್ನು ಗಮನದಲ್ಲಿ ಇಟ್ಟುಕೊಂಡು ವಾಹನ ವ್ಯವಸ್ಥೆಯನ್ನೂ ಆಯೋಗ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT