ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಜೆಪಿ ಪರ ಕೆಲಸ ಮಾಡುತ್ತಿದ್ದವರನ್ನೇ ಪ್ರಶ್ನಿಸಿ ಮತಗಟ್ಟೆ ಸಮೀಕ್ಷೆ: ಅಖಿಲೇಶ್

Published 3 ಜೂನ್ 2024, 7:37 IST
Last Updated 3 ಜೂನ್ 2024, 7:37 IST
ಅಕ್ಷರ ಗಾತ್ರ

ಲಖನೌ: ಮತಗಟ್ಟೆ ಸಮೀಕ್ಷೆಯ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿರುವ ಸಮಾಜವಾದಿ ಪಕ್ಷದ ವರಿಷ್ಠ ಅಖಿಲೇಶ್ ಯಾದವ್, ಬಿಜೆಪಿ ಪರವಾದ ವಾತಾವರಣ ತೋರಿಸಲು ಈ ರೀತಿಯ ವರದಿ ನೀಡಲಾಗಿದೆ ಎಂದು ದೂರಿದ್ದಾರೆ.

ಚುನಾವಣಾ ಫಲಿತಾಂಶಕ್ಕೂ ಒಂದು ದಿನ ಮೊದಲು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಇಂಡಿಯಾ ಬಣದ ಗೆಲುವು ದೇಶದ ಗೆಲುವಾಗಿದೆ. ಜನರ ಗೆಲುವಾಗಿದೆ ಎಂದಿದ್ದಾರೆ.

‘ನಾವು ಮತ್ತು ನೀವು(ಮಾಧ್ಯಮದವರು) ಸೇರಿ ಪ್ರಜಾಪ್ರಭುತ್ವ ಬಲಪಡಿಸಬೇಕಿದೆ. ಬಿಜೆಪಿಯ ರ್‍ಯಾಲಿಗಳು ಜನರಿಲ್ಲದೆ ಭಣಗುಡುತ್ತಿದ್ದವು. ಅವರ ಟೆಂಟ್‌ಗಳು ಖಾಲಿ ಇರುತ್ತಿದ್ದವು. ಅವರ ಪರವಾಗಿ ಯಾವುದೇ ವಾತಾವರಣ ಇರಲಿಲ್ಲ’ ಎಂದು ಅಖಿಲೇಶ್ ಹೇಳಿದ್ದಾರೆ.

ಮತಗಟ್ಟೆ ಸಮೀಕ್ಷೆ ವೇಳೆ ಬಿಜೆಪಿ ಪರ ಬೂತ್ ಮಟ್ಟದಲ್ಲಿ ಕೆಲಸ ಮಾಡುತ್ತಿರುವವರ ಬಳಿಯೇ ಪ್ರಶ್ನೆ ಕೇಳಿ, ಉತ್ತರ ಪಡೆದು ವರದಿ ಸಿದ್ಧಪಡಿಸಲಾಗಿದೆ ಎಂದು ಅಖಿಲೇಶ್ ಹೇಳಿದರು.

‘ಚುನಾವಣೆಗಳು ಮುಗಿದಿವೆ. ಮತಗಟ್ಟೆ ಸಮೀಕ್ಷೆಗಳು ಬಹಳಷ್ಟನ್ನು ತೋರಿಸುತ್ತಿವೆ. ಹಲವು ವಿಷಯಗಳಿಗೆ ಬಿಜೆಪಿ ಜವಾಬ್ದಾರಿಯಾಗಿದೆ. ದೇಶದಲ್ಲಿ ಶಾಂತಿ ಮತ್ತು ಭ್ರಾತೃತ್ವವನ್ನು ಕದಡಿದ್ದಾರೆ. ಮೀಸಲಾತಿಯನ್ನು ಸ್ಥಗಿತಗೊಳಿಸಲು ಸಂಚು ನಡೆಸಿದ್ದರು. ಅವರು ಮಹಿಳೆಯರ ವಿರುದ್ಧ ಅಪರಾಧ ಪ್ರಕರಣಗಳನ್ನು ಹೆಚ್ಚಿಸಿದ್ದಾರೆ. ಬಹಳಷ್ಟು ತಪ್ಪು ನಡವಳಿಕೆ ತೋರಿದ್ದಾರೆ. ಹಣದುಬ್ಬರ, ನಿರುದ್ಯೋಗ, ಬಡವರು ಕಡುಬಡವರಾಗಲು ಕಾರಣರಾಗಿದ್ದಾರೆ’ ಎಂದೂ ಅಖಿಲೇಶ್ ದೂರಿದರು.

ಶನಿವಾರ ಹೊರಬಿದ್ದ ಮತಗಟ್ಟೆ ಸಮೀಕ್ಷೆಗಳು ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಅಧಿಕಾರಕ್ಕೆ ಏರಲಿದ್ದಾರೆ ಎಂದು ಭವಿಷ್ಯ ನುಡಿದಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT