ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

Assembly Result 2024: ಅರುಣಾಚಲದಲ್ಲಿ BJP, ಸಿಕ್ಕಿಂನಲ್ಲಿ SKM ಭರ್ಜರಿ ಗೆಲುವು

Published 2 ಜೂನ್ 2024, 2:18 IST
Last Updated 2 ಜೂನ್ 2024, 10:35 IST
ಅಕ್ಷರ ಗಾತ್ರ
01:5802 Jun 2024

ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂ ರಾಜ್ಯಗಳ ವಿಧಾನಸಭಾ ಚುನಾವಣೆಯ ಮತ ಎಣಿಕೆ ಬೆಳಿಗ್ಗೆ 6 ಗಂಟೆಯಿಂದ ಆರಂಭವಾಗಿದೆ.

ಈ ಎರಡೂ ರಾಜ್ಯಗಳಲ್ಲಿ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಯ ಮತದಾನ ಏಪ್ರಿಲ್‌ 19 ರಂದು ಏಕಕಾಲದಲ್ಲಿ ನಡೆದಿತ್ತು.

02:1202 Jun 2024

60 ಕ್ಷೇತ್ರಗಳನ್ನು ಒಳಗೊಂಡಿರುವ ಅರುಣಾಚಲ ಪ್ರದೇಶ ವಿಧಾನಸಭೆಯ 50 ಸ್ಥಾನಗಳಿಗೆ ಮತದಾನ ನಡೆದಿತ್ತು. ಆಡಳಿತಾರೂಢ ಬಿಜೆಪಿಯು 10 ಕ್ಷೇತ್ರಗಳನ್ನು ಈಗಾಗಲೇ ಅವಿರೋಧವಾಗಿ ಗೆದ್ದುಕೊಂಡಿದೆ.

2019ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯು 60 ರಲ್ಲಿ 41 ಸ್ಥಾನಗಳನ್ನು ಜಯಿಸಿತ್ತು. ಜೆಡಿಯು 7, ಎನ್‌ಪಿಪಿ 5, ಕಾಂಗ್ರೆಸ್‌ 4 ಮತ್ತು ಪಿಪಿಎ 1 ಸ್ಥಾನ ಗೆದ್ದುಕೊಂಡಿದ್ದರೆ, ಎರಡು ಸ್ಥಾನಗಳಲ್ಲಿ ಪಕ್ಷೇತರರು ಜಯಿಸಿದ್ದರು.

02:2302 Jun 2024

ಸಿಕ್ಕಿಂನ 32 ಕ್ಷೇತ್ರಗಳ ಮತ ಎಣಿಕೆ ನಡೆಯುತ್ತಿದೆ. 2019ರಲ್ಲಿ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ 17 ಹಾಗೂ ಸಿಕ್ಕಿಂ ಡೆಮಾಕ್ರಟಿಕ್‌ ಫ್ರಂಟ್‌ 15 ಸ್ಥಾನಗಳನ್ನು ಗೆದ್ದುಕೊಂಡಿತ್ತು.

02:2402 Jun 2024

ಬಿಜೆಪಿಗೆ, ಎಸ್‌ಕೆಎಂಗೆ ಮುನ್ನಡೆ

ಸಿಕ್ಕಿಂನಲ್ಲಿ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ (ಎಸ್‌ಕೆಎಂ) 4 ಕಡೆ ಹಾಗೂ ಅರುಣಾಚಲ ಪ್ರದೇಶದಲ್ಲಿ ಬಿಜೆಪಿ 8 ಸ್ಥಾನಗಳಲ್ಲಿ ಆರಂಭಿಕ ಮುನ್ನಡೆ ಕಾಯ್ದುಕೊಂಡಿದೆ.

02:2902 Jun 2024

ಬಿಜೆಪಿ ತೆಕ್ಕೆಗೆ ಅರುಣಾಚಲ ಪ್ರದೇಶ: ಸಮೀಕ್ಷೆ

ಅರುಣಾಚಲ ಪ್ರದೇಶದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೇರಲಿದೆ ಎಂದು ಆಕ್ಸಿಸ್ ಮೈ ಇಂಡಿಯಾ ಭವಿಷ್ಯ ನುಡಿದಿದೆ. 44 ರಿಂದ 51 ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ. ಉಳಿದಂತೆ 1 ರಿಂ 4 ಸ್ಥಾನಗಳು ಕಾಂಗ್ರೆಸ್‌ಗೆ, ತಲಾ 2 ರಿಂದ 6 ಕ್ಷೇತ್ರಗಳು ಕ್ರಮವಾಗಿ ಎನ್‌ಪಿಪಿ ಮತ್ತು ಇತರರ ಪಾಲಾಗಲಿವೆ ಎಂದು ಹೇಳಿದೆ.

02:3802 Jun 2024

ಸಿಕ್ಕಿಂನಲ್ಲಿರುವ 32 ಸ್ಥಾನಗಳ ಪೈಕಿ 24 ಕಡೆ ಎಸ್‌ಕೆಎಂ ಆರಂಭಿಕ ಮುನ್ನಡೆ ಸಾಧಿಸಿದೆ.

ಅರುಣಾಚಲ ಪ್ರದೇಶದಲ್ಲಿ ಬಿಜೆಪಿ 24 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ನ್ಯಾಷನಲ್‌ ಪೀಪಲ್ಸ್‌ ಪಾರ್ಟಿ (ಎನ್‌ಪಿಇಪಿ) 4 ಕಡೆ ಹಾಗೂ ಇತರೆ ಅಭ್ಯರ್ಥಿಗಳು 6 ಕಡೆ ಮುನ್ನಡೆಯಲ್ಲಿದ್ದಾರೆ.

02:4602 Jun 2024

ಯಾವುದೇ ಪಕ್ಷ ಬಹುಮತ ಸಾಬೀತು ಮಾಡಲು ಅರುಣಾಚಲ ಪ್ರದೇಶದಲ್ಲಿ 31 ಸ್ಥಾನಗಳನ್ನು ಹಾಗೂ ಸಿಕ್ಕಿಂನಲ್ಲಿ 17 ಕ್ಷೇತ್ರಗಳನ್ನು ಗೆಲ್ಲಬೇಕಿದೆ.

03:2002 Jun 2024

ಸಿಕ್ಕಿಂನಲ್ಲಿ ಎಸ್‌ಕೆಎಂ 29 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಎಸ್‌ಡಿಎಫ್‌ ಒಂದು ಕಡೆಯಷ್ಟೇ ಮುನ್ನಡೆಯಲ್ಲಿದೆ.

03:2102 Jun 2024

ಅರುಣಾಚಲ ಪ್ರದೇಶದಲ್ಲಿ ಬಿಜೆಪಿ 36 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಉಳಿದಂತೆ ಎನ್‌ಪಿಇಪಿ 9ರಲ್ಲಿ ಹಾಗೂ ಇತರೆ ಪಕ್ಷಗಳು 7 ಕಡೆ ಮುನ್ನಡೆಯಲ್ಲಿವೆ.

04:2002 Jun 2024

ಬಿಜೆಪಿ, ಎಸ್‌ಕೆಎಂಗೆ ಭಾರಿ ಮುನ್ನಡೆ

ಅರುಣಾಚಲ ಪ್ರದೇಶದಲ್ಲಿ ಬಿಜೆಪಿ ಭಾರಿ ಮುನ್ನಡೆಯತ್ತ ಸಾಗಿದೆ. ಈಗಾಗಲೇ 10 ಸ್ಥಾನಗಳನ್ನು ಅವಿರೋಧವಾಗಿ ಗೆದ್ದುಕೊಂಡಿರುವ ಬಿಜೆಪಿ, ಉಳಿದ 50 ಕ್ಷೇತ್ರಗಳ ಪೈಕಿ 34ರಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಉಳಿದಂತೆ ಎನ್‌ಪಿಇಪಿ 6ರಲ್ಲಿ ಹಾಗೂ ಇತರೆ ಪಕ್ಷಗಳು 8 ಕಡೆ ಮುನ್ನಡೆಯಲ್ಲಿವೆ.

ಸಿಕ್ಕಿಂನಲ್ಲಿಯೂ ಎಸ್‌ಕೆಎಂ ಭಾರಿ ಬಹುಮತ ಸಾಧಿಸುವ ಲಕ್ಷಣಗಳು ಕಂಡುಬಂದಿವೆ. ಇಲ್ಲಿನ 32 ವಿಧಾನಸಭಾ ಸ್ಥಾನಗಳ ಪೈಕಿ 31ರಲ್ಲಿ ಮುನ್ನಡೆ ಸಾಧಿಸಿದೆ. ಪ್ರಮುಖ ವಿರೋಧ ಪಕ್ಷ ಎಸ್‌ಡಿಎಫ್‌ ಒಂದು ಕಡೆಯಷ್ಟೇ ಮುನ್ನಡೆಯಲ್ಲಿದೆ.