ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

LS polls | ₹ 8,889 ಕೋಟಿ ಚುನಾವಣಾ ಆಯೋಗದ ವಶ

Published 18 ಮೇ 2024, 14:23 IST
Last Updated 18 ಮೇ 2024, 14:23 IST
ಅಕ್ಷರ ಗಾತ್ರ

ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಮತದಾರರ ಮೇಲೆ ಪ್ರಭಾವ ಬೀರುವ ಉದ್ದೇಶದಿಂದ ಸಾಗಿಸುತ್ತಿದ್ದ ನಗದು, ಮಾದಕದ್ರವ್ಯ, ಬೆಲೆಬಾಳುವ ಲೋಹ ಮತ್ತು ಉಡುಗೊರೆಗಳು ಸೇರಿದಂತೆ ಇದುವರೆಗೆ ಒಟ್ಟು ₹ 8,889 ಕೋಟಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗ ಶನಿವಾರ ತಿಳಿಸಿದೆ.

ವಶಪಡಿಸಿಕೊಂಡ ವಸ್ತುಗಳ ಮೊತ್ತದಲ್ಲಿ ಮಾದಕ ದ್ರವ್ಯದ ಪಾಲು ಶೇ 45 ರಷ್ಟು (₹3,959) ಇದೆ ಎಂದು ಅಯೋಗವು ಮಾಹಿತಿ ನೀಡಿದೆ. ಗುಜರಾತ್‌ ಎಟಿಎಸ್‌ ಮತ್ತು ಕರಾವಳಿ ಕಾವಲು ಪಡೆ ಈಚೆಗೆ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಮೂರು ದಿನಗಳ ಅವಧಿಯಲ್ಲಿ ₹ 892 ಕೋಟಿ ಮೊತ್ತದ ಮಾದಕ ದ್ರವ್ಯ ವಶಪಡಿಸಿಕೊಳ್ಳಲಾಗಿತ್ತು. 

ಜಪ್ತಿ ವಿವರ

₹ 849 ಕೋಟಿ –ನಗದು

₹ 814 ಕೋಟಿ –ವಶಕ್ಕೆ ಪಡೆದ ಮದ್ಯದ ಮೌಲ್ಯ

₹ 3,958 ಕೋಟಿ – ಮಾದವ ದ್ರವ್ಯದ ಮೌಲ್ಯ

₹ 1,260 ಕೋಟಿ – ಬೆಲೆಬಾಳುವ ಲೋಹದ ಮೊತ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT