ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀತಿ ಸಂಹಿತೆ ಉಲ್ಲಂಘನೆ: ಸಿ–ವಿಜಿಲ್‌ ಆ್ಯಪ್‌ ಮೂಲಕ 79,000 ದೂರುಗಳು ದಾಖಲು

Published 29 ಮಾರ್ಚ್ 2024, 13:10 IST
Last Updated 29 ಮಾರ್ಚ್ 2024, 13:10 IST
ಅಕ್ಷರ ಗಾತ್ರ

ನವದೆಹಲಿ: ಲೋಕಸಭೆ ಚುನಾವಣೆ ದಿನಾಂಕ ಘೋಷಣೆಯಾದಾಗಿನಿಂದ ಈವರೆಗೆ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದ 79,000ಕ್ಕೂ ಹೆಚ್ಚು ದೂರುಗಳನ್ನು ಸಿ–ವಿಜಿಲ್‌ ಮೊಬೈಲ್‌ ಆ್ಯಪ್‌ ಮೂಲಕ ಸ್ವೀಕರಿಸಲಾಗಿದೆ ಎಂದು ಚುನಾವಣಾ ಆಯೋಗ ಶುಕ್ರವಾರ ತಿಳಿಸಿದೆ.

‘ಈ ಪೈಕಿ ಶೇ 99ರಷ್ಟು ದೂರುಗಳನ್ನು ಪರಿಹರಿಸಲಾಗಿದೆ ಮತ್ತು ಶೇ 89ರಷ್ಟು ದೂರುಗಳನ್ನು 100 ನಿಮಿಷಗಳ ಒಳಗಾಗಿ ಪರಿಹರಿಸಲಾಗಿದೆ’ ಎಂದು ಹೇಳಿದೆ.

ಅಕ್ರಮ ಬ್ಯಾನರ್‌ ಮತ್ತು ಹೋರ್ಡಿಂಗ್‌ಗಳ ವಿರುದ್ಧ 58,500ಕ್ಕೂ ಹೆಚ್ಚು ದೂರುಗಳನ್ನು ಸ್ವೀಕರಿಸಿದ್ದರೆ, ಹಣ, ಉಡುಗೊರೆ ಮತ್ತು ಮದ್ಯ ವಿತರಣೆಗೆ ಸಂಬಂಧಿಸಿದಂತೆ 1,400 ದೂರುಗಳು ದಾಖಲಾಗಿವೆ. ಇನ್ನು 2,454 ದೂರುಗಳು ಆಸ್ತಿ ಹಾನಿಗೆ ಸಂಬಂಧಿಸಿದವು, 535 ದೂರುಗಳು ಬಂದೂಕು, ಮದ್ದುಗುಂಡುಗಳ ಪ್ರದರ್ಶನಕ್ಕೆ ಸಂಬಂಧಿಸಿದವುಗಳಾಗಿವೆ. ನಿಷೇಧಿತ ಸಂದರ್ಭದಲ್ಲಿ ಪ್ರಚಾರ ಕೈಗೊಂಡಿದ್ದಕ್ಕೆ ಸಂಬಂಧಿಸಿದಂತೆ 1,000 ದೂರುಗಳು ದಾಖಲಾಗಿವೆ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT