ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

LS Result 2024: ಎನ್‌ಡಿಎನಲ್ಲೇ ಉಳಿಯುತ್ತೇವೆ ಎಂದ ಜೆಡಿಯು ನಾಯಕ ತ್ಯಾಗಿ

Published 4 ಜೂನ್ 2024, 11:55 IST
Last Updated 4 ಜೂನ್ 2024, 11:55 IST
ಅಕ್ಷರ ಗಾತ್ರ

ನವದೆಹಲಿ: ನಾವು ಎನ್‌ಡಿಎಯಲ್ಲೇ ಇದ್ದೇವೆ, ಎನ್‌ಡಿಎನಲ್ಲೇ ಉಳಿಯುತ್ತೇವೆ ಎಂದು ಜೆಡಿಯು ನಾಯಕ ಕೆ. ಸಿ. ತ್ಯಾಗಿ ಹೇಳಿದ್ದಾರೆ.

ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಮುಂದಿನ ನಡೆಯ ಬಗ್ಗೆ ಎದ್ದಿರುವ ಊಹಾಪೋಹಗಳಿಗೆ ತೆರೆ ಎಳೆದ ಕೆ. ಸಿ. ತ್ಯಾಗಿ ನಾವು ನ್‌ಡಿಎಯಲ್ಲೇ ಇದ್ದೇವೆ, ಎನ್‌ಡಿಎನಲ್ಲೇ ಉಳಿಯುತ್ತೇವೆ ಎಂದು ಹೇಳಿದರು. 

ನೀವು ಮತ್ತೆ ಇಂಡಿಯಾ ಬಣಕ್ಕೆ ಹೋಗುತ್ತೀರಾ ಎಂದು ಸುದ್ದಿಗಾರರು ಕೇಳಿದಾಗ ನಾವು ಎನ್‌ಡಿಎನಲ್ಲಿ ಇರುವುದು ನಮ್ಮ ಅಂತಿಮ ನಿರ್ಧಾರ ಎಂದು ಅವರು ಹೇಳಿದರು. 

ಇತ್ತೀಚಿನ ವರದಿಗಳ ಪ್ರಕಾರ ಎನ್‌ಡಿಎ 296, ಇಂಡಿಯಾ 232 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT