ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮತದಾನದ ಪ್ರಮಾಣ ಏರಿಕೆ: EVM ವಿಶ್ವಾಸಾರ್ಹತೆ ಪ್ರಶ್ನಿಸಿದ ಮಮತಾ ಬ್ಯಾನರ್ಜಿ

Published 1 ಮೇ 2024, 11:22 IST
Last Updated 1 ಮೇ 2024, 11:22 IST
ಅಕ್ಷರ ಗಾತ್ರ

ಫರಕ್ಕಾ(ಪಶ್ಚಿಮ ಬಂಗಾಳ): ಮೊದಲ ಎರಡು ಹಂತಗಳ ಲೋಕಸಭೆ ಚುನಾವಣೆಯ ಮತದಾನದ ಪ್ರಮಾಣದ ಮಾಹಿತಿ ಬಿಡುಗಡೆಯಲ್ಲಿ ವಿಳಂಬ ಕುರಿತಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಚುನಾವಣಾ ಆಯೋಗವನ್ನು ಪ್ರಶ್ನಿಸಿದ್ದಾರೆ.

ಈ ಎರಡೂ ಹಂತಗಳಲ್ಲಿ ಮತದಾನ ಪ್ರಮಾಣ ಹೆಚ್ಚಳವಾಗಿರುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಅವರು, ಇವಿಎಂ ಬಗ್ಗೆ ಪ್ರಶ್ನೆ ಎತ್ತಿದ್ದಾರೆ.

ಏಪ್ರಿಲ್ 19 ಮತ್ತು ಏಪ್ರಿಲ್ 26ರಂದು ನಡೆದ ಮತದಾನದ ಪ್ರಮಾಣವನ್ನು ಮಂಗಳವಾರ ಸಂಜೆ ಚುನಾವಣಾ ಆಯೋಗ ಬಿಡುಗಡೆ ಮಾಡಿದೆ. ಮೊದಲ ಹಂತದಲ್ಲಿ ಶೇ 66.14 ಹಾಗೂ ಎರಡನೇ ಹಂತದಲ್ಲಿ ಶೇ 66.71 ರಷ್ಟು ಮತದಾನವಾಗಿದೆ ಎಂದು ಆಯೋಗ ತಿಳಿಸಿದೆ.

‘ಚುನಾವಣಾ ಆಯೋಗ ಈ ಹಿಂದೆ ಬಿಡುಗಡೆ ಮಾಡಿದ್ದ ಮತದಾನದ ಪ್ರಮಾಣಕ್ಕೂ ಈಗ ಬಿಡುಗಡೆ ಮಾಡಿರುವ ಪ್ರಮಾಣಕ್ಕೂ ಶೇ 5.75ರಷ್ಟು ಹೆಚ್ಚಳ ಕಂಡುಬಂದಿದೆ. ಇದು ನಿಜಕ್ಕೂ ಕಳವಳಕಾರಿಯಾಗಿದೆ. ಹಲವು ಇವಿಎಂಗಳು ಬಹಳ ಸಮಯದವರೆಗೆ ಕಾಣೆಯಾಗಿದ್ದವು. ಹಾಗಾಗಿ, ಬಿಜೆಪಿಯಿಂದ ಫಲಿತಾಂಶ ಬದಲಿಸಲು ಅಕ್ರಮ ನಡೆದಿರುವ ಬಗ್ಗೆ ಆತಂಕವಾಗುತ್ತಿದೆ’ಎಂದು ಹೇಳಿದ್ದಾರೆ.

ಮತದಾನದ ಪ್ರಮಾಣ ದಿಢೀರ್ ಹೆಚ್ಚಾಗಿರುವುದು ವಿಚಲಿತಗೊಳಿಸಿರುವುದು ಮಾತ್ರವಲ್ಲದೆ, ಇವಿಎಂಗಳ ವಿಶ್ವಾಸಾರ್ಹತೆ ಬಗ್ಗೆ ಗಂಭೀರ ಅನುಮಾನ ಉಂಟು ಮಾಡಿದೆ ಎಂದಿದ್ದಾರೆ.

‘ಇವಿಎಂ ತಯಾರಕರ ಮಾಹಿತಿಯನ್ನು ಆಯೋಗ ಕೂಡಲೇ ಬಹಿರಂಗಪಡಿಸಬೇಕು. ಗೆಲುವಿಗಾಗಿ ಬಿಜೆಪಿ ಯಾವ ಹಂತಕ್ಕಾದರೂ ಹೋಗಲಿದೆ’ ಎಂದು ಮಮತಾ ಟೀಕಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT