ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆನ್ನಿಗೆ ಚೂರಿ ಹಾಕಿದ ಸಂಜಯ್ ರಾವುತ್: ಪ್ರಕಾಶ್ ಅಂಬೇಡ್ಕರ್ ನೇತೃತ್ವದ VBA ಆರೋಪ

Published 28 ಮಾರ್ಚ್ 2024, 11:20 IST
Last Updated 28 ಮಾರ್ಚ್ 2024, 11:23 IST
ಅಕ್ಷರ ಗಾತ್ರ

ಮುಂಬೈ: ಮಹಾರಾಷ್ಟ್ರದ ಮಹಾ ವಿಕಾಸ ಅಘಾಡಿಯಲ್ಲಿ ಲೋಕಸಭಾ ಸೀಟು ಹಂಚಿಕೆ ವಿಷಯದಲ್ಲಿ ಶಿವಸೇನೆ (ಉದ್ಧವ್ ಠಾಕ್ರೆ) ಬಣದ ಸಂಜಯ್ ರಾವುತ್ ಅವರು ಬೆನ್ನಿಗೆ ಚೂರಿ ಹಾಕುವಂತ ನಂಬಿಕೆ ದ್ರೋಹದ ಕೆಲಸ ಮಾಡಿದ್ದಾರೆ ಎಂದು ಪ್ರಕಾಶ್ ಅಂಬೇಡ್ಕರ್ ನೇತೃತ್ವದ ವಂಚಿತ್ ಬಹುಜನ ಅಘಾಡಿ (VBA) ಗುರುವಾರ ಆರೋಪಿಸಿದೆ.

ಕಾಂಗ್ರೆಸ್‌, ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಶರದ್ ಚಂದ್ರ ಪವಾರ್) ಹಾಗೂ ಶಿವಸೇನಾ (ಉದ್ಧವ್ ಠಾಕ್ರೆ ಬಣ) ಒಳಗೊಂಡ ಮಹಾ ವಿಕಾಸ ಅಘಾಡಿಯೊಂದಿಗೆ ಅಂಬೇಡ್ಕರ್ ನೇತೃತ್ವದ ಎಂವಿಎ ಮಾತುಕತೆ ನಡೆಸಿತ್ತು. ಈ ಪಕ್ಷಗಳು ಈಗಾಗಲೇ ಕೆಲವು ಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿವೆ.

‘ಸಂಜಯ್ ಅವರು ಇನ್ನೂ ಎಷ್ಟು ಸುಳ್ಳುಗಳನ್ನು ಹೇಳುತ್ತಾರೆ? ಒಂದೊಮ್ಮೆ ನಮ್ಮೆಲ್ಲರ ಆಲೋಚನೆಗಳು ಒಂದೇ ಆದರೆ, ಮಹಾ ವಿಕಾಸ ಅಘಾಡಿ ಮಾತುಕತೆಗೆ ನಮಗೆ ಏಕೆ ಆಹ್ವಾನ ನೀಡಿಲ್ಲ? ವಂಚಿತ್ ಬಹುಜನ ಅಘಾಡಿಯ ಯಾರೊಬ್ಬರನ್ನೂ ಸೇರಿಸಿಕೊಳ್ಳದೆ ಸಭೆ ನಡೆಸಿದ್ದು ಏಕೆ? ರಾಜಕೀಯವಾಗಿ ಮಿತ್ರರಾದರೂ, ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದ್ದೀರಿ. ಸಿಲ್ವರ್ ಓಕ್‌ (ಶರದ್ ಪವಾರ್ ಅವರ ನಿವಾಸ)ನಲ್ಲಿ ಯಾವ ಬಗೆಯ ಚರ್ಚೆಗಳು ನಡೆದವು ಎಂಬುದು ನಮಗೆ ಗೊತ್ತಿದೆ. ಅಕೋಲಾ ಲೋಕಸಭಾ ಕ್ಷೇತ್ರದಲ್ಲಿ ಪ್ರಕಾಶ್ ಅಂಬೇಡ್ಕರ್ ವಿರುದ್ಧ ಎಂಥ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು ಎಂಬುದರ ಕುರಿತು ಚರ್ಚೆ ನಡೆದಿದೆ’ ಎಂದು VBA ಎಕ್ಸ್ ಖಾತೆಯಲ್ಲಿ ಹೇಳಿಕೊಂಡಿದೆ.

ಅಕೋಲಾ ಕ್ಷೇತ್ರದಿಂದ ಅಂಬೇಡ್ಕರ್ ಸ್ಪರ್ಧಿಸುತ್ತಿದ್ದಾರೆ. ವಿಬಿಎಗೆ ಎಂವಿಎ ನೆರವಾಗುವ ಭರವಸೆ ನೀಡಿದೆ. ಮತ್ತೊಂದೆಡೆ ನಾಗ್ಪುರದಿಂದ ಸ್ಪರ್ಧಿಸಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿ ವಿರುದ್ಧ ಕಾಂಗ್ರೆಸ್‌ನ ವಿಕಾಸ್ ಠಾಕ್ರೆ ಸ್ಪರ್ಧಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT