ಯಲ್ಲಾಪುರ: 'ಬೇಕಾದಾಗ ಬರುವುದು, ಬೇಡ ಅನಿಸಿದಾಗ ಬಿಟ್ಟುಕೊಂಡು ಹೋಗುವವರನ್ನು ನೋಡಿದರೆ ತುಂಬಾ ಬೇಸರವಾಗುತ್ತದೆ. ಸರಿಯಾಗಿ ಇರುವವರು ಇರಲಿ. ಇಲ್ಲಾ ಅಂದರೆ ಹೊರಡಲಿ' ಎನ್ನುವ ಮೂಲಕ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷೆ ರೂಪಾಲಿ ನಾಯ್ಕ ಪರೋಕ್ಷವಾಗಿ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಅವರಿಗೆ ಕುಟುಕಿದ್ದಾರೆ.
ಪಟ್ಟಣದ ಎಪಿಎಂಸಿ ರೈತ ಸಭಾಭವನದಲ್ಲಿ ಬುಧವಾರ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಚುನಾವಣಾ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿದರು.
'ಪಕ್ಷ ಅವರಿಗೆ ಏನೆಲ್ಲ ಕೊಟ್ಟಿದೆ. ಬೇಸರವಿದ್ದರೆ ಪಕ್ಷದ ವೇದಿಕೆಯಲ್ಲಿ ಮಾತಾಡಲಿ' ಎಂದ ಅವರು, 'ಬಿಜೆಪಿಯ ಒಬ್ಬ ಶಾಸಕರು ಇಲ್ಲಿ ಇಲ್ಲ. ಕಾಂಗ್ರೆಸ್‌ಗೆ ಹೋಗುತ್ತಾರೆ. ಎನ್ನಲಾಗುತ್ತಿದೆ. ಅವರ ಹೆಸರು ಹೇಳುವುದನ್ನು ಬಿಟ್ಟುಬಿಡಿ' ಎಂದರು.