ನಿಪ್ಪಾಣಿ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ಅಕ್ಕೋಳ ಗ್ರಾಮದ ಬೂತ್ ಸಂಖ್ಯೆ 153ರಲ್ಲಿ 51 ಮತಗಳು ಹೆಚ್ಚಿಗೆ ಚಲಾವಣೆಯಾಗಿವೆ. ಇಲ್ಲಿ ಅಕ್ರಮ ನಡೆದಿದ್ದು, ಮರು ಮತದಾನ ನಡೆಸಬೇಕು ಎಂದು ವಿವಿಧ ಪಕ್ಷಗಳ ಏಜೆಂಟರು ಆಗ್ರಹಿಸಿದ್ದಾರೆ.

ಈ ಮತಗಟ್ಟೆಯಲ್ಲಿ 898 ಮತದಾರರಲ್ಲಿ 667 ಜನ ಮತದಾನ ಮಾಡಿದ್ದಾರೆ. ಆದರೆ, ಮತಯಂತ್ರದಲ್ಲಿ 718 ಮತಗಳು ಚಲಾವಣೆಯಾದ ದಾಖಲೆ ತೋರಿಸಿದೆ. 51 ಹೆಚ್ಚುವರಿ ಮತಗಳು ಹೇಗೆ ಬಂದವು ಎಂಬುದು ತೀವ್ರ ಗೊಂದಲಕ್ಕೆ ಕಾರಣವಾಯಿತು.

ಈ ಸಂದರ್ಭದಲ್ಲಿ ಅಭ್ಯರ್ಥಿಗಳ ಏಜೆಂಟರು ಹಾಗೂ ಮತಗಟ್ಟೆ ಅಧಿಕಾರಿಗಳ ಮಧ್ಯೆ ವಾಗ್ವಾದ ನಡೆಯಿತು. 153 ಸಂಖ್ಯೆಯ ಬೂತ್ನಲ್ಲಿ ಮತ್ತೊಮ್ಮೆ ಮತದಾನ ನಡೆಸಬೇಕೆಂದು ಬಿಜೆಪಿ, ಕಾಂಗ್ರೆಸ್ ಹಾಗೂ ಎನ್ಸಿಪಿ ಅಭ್ಯರ್ಥಿಗಳು ಪಟ್ಟು ಹಿಡಿದರು. ಎಲ್ಲರನ್ನೂ ಸಮಾಧಾನ ಮಾಡಿದ ಮತಗಟ್ಟೆ ಅಧಿಕಾರಿಗಳು, ಈ ಬಗ್ಗೆ ಜಿಲ್ಲಾಧಿಕಾರಿ ಗಮನಕ್ಕೆ ತರಲಾಗುವುದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.