ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ: ಎದೆಯ ಮೇಲೆ ಖರ್ಗೆ, ಪ್ರಿಯಾಂಕ್ ಟ್ಯಾಟೂ

Published 12 ಏಪ್ರಿಲ್ 2024, 5:28 IST
Last Updated 12 ಏಪ್ರಿಲ್ 2024, 5:28 IST
ಅಕ್ಷರ ಗಾತ್ರ

ಕಲಬುರಗಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಪಂಚಾಯತ್ ರಾಜ್‌ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಅಭಿಮಾನಯೊಬ್ಬರು ತಮ್ಮ ಎದೆಯ ಮೇಲೆ ಈ ಇಬ್ಬರು ನಾಯಕರ ಭಾವಚಿತ್ರಗಳ ಟ್ಯಾಟೂ ಹಾಕಿಸಿಕೊಂಡಿದ್ದಾರೆ.

ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಜಿಲಕೇರಿ ಗ್ರಾಮದ ಹಣಮಂತ ಹೊಸಮನಿ ಟ್ಯಾಟೂ ಹಾಕಿಸಿಕೊಂಡವರು. ತಲೆಯ ಮೇಲೆ ಕಾಂಗ್ರೆಸ್‌ನ ಹಸ್ತದ ಚಿಹ್ನೆ ಹಾಗೂ ಖರ್ಗೆ ಹೆಸರಿನ ಹೇರ್ ಕಟ್ ಮಾಡಿಸಿದ್ದಾರೆ.

ಹಣಮಂತ ಬೆನ್ನಿನ ತುಂಬ ಮಲ್ಲಿಕಾರ್ಜುನ ಖರ್ಗೆ ಅವರು ಸಾರ್ವಜನಿಕ ಜೀವನದಲ್ಲಿ ನಡೆದುಬಂದ ಹಾದಿಯ ಪ್ರಮುಖ ಘಟಗಳ ಟ್ಯಾಟೂ ಅಚ್ಚಾಗಿದೆ. ಲೋಕಸಭಾ ಚುನಾವಣೆಯಲ್ಲಿ ತಾನು ಖರ್ಗೆ ಅಭಿಮಾನಿ ಎಂದು ಪ್ರಚಾರ ಮಾಡುತ್ತಿದ್ದಾರೆ.

ಗುರುವಾರ ನಗರದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಭೇಟಿಯಾದ ಹಣಮಂತ, ತನ್ನ ಅಭಿಮಾನವನ್ನು ವ್ಯಕ್ತಪಡಿಸಿದರು. ‘ಇಂತಹವರ ಋಣವನ್ನು ಹೇಗೆ ತಿರಿಸಬೇಕು’ ಎಂದು ಪ್ರಿಯಾಂಕ್ ಹೇಳಿದರು.

ಕಲಬುರಗಿಯಲ್ಲಿ ಗುರುವಾರ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಭೇಟಿಯಾದ ಹಣಮಂತ ಹೊಸಮನಿ

ಕಲಬುರಗಿಯಲ್ಲಿ ಗುರುವಾರ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಭೇಟಿಯಾದ ಹಣಮಂತ ಹೊಸಮನಿ

ಹಣಮಂತ ಹೊಸಮನಿ ಬೆನ್ನಿನ ಮೇಲಿನ ಟ್ಯಾಟೂ

ಹಣಮಂತ ಹೊಸಮನಿ ಬೆನ್ನಿನ ಮೇಲಿನ ಟ್ಯಾಟೂ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT