ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಅವರಂತೆ ನಂಬಿಸಿ ದ್ರೋಹ ಬಗೆಯಲ್ಲ, ನುಡಿದಂತೆ ನಡೆದಿದ್ದೇವೆ: ಸಿದ್ದರಾಮಯ್ಯ

Published 19 ಏಪ್ರಿಲ್ 2024, 12:06 IST
Last Updated 19 ಏಪ್ರಿಲ್ 2024, 12:06 IST
ಅಕ್ಷರ ಗಾತ್ರ

ಬೆಂಗಳೂರು: 'ನಾವು ಪ್ರಧಾನಿ ನರೇಂದ್ರ ಮೋದಿ ಅವರಂತೆ ಭಾರತೀಯರನ್ನು ನಂಬಿಸಿ ದ್ರೋಹ ಬಗೆಯಲ್ಲ. ನುಡಿದಂತೆ ನಡೆದು ತೋರಿಸಿದ್ದೇವೆ. ನಾವು ನಿಮ್ಮನ್ನು ಭಾವನಾತ್ಮಕವಾಗಿ ಕೆರಳಿಸಿ ವಂಚಿಸಲ್ಲ. ನಿಮ್ಮ ಬದುಕಿನ ಸಂಕಷ್ಟಗಳ ಜೊತೆಗೆ ನಿಲ್ಲುತ್ತೇವೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಹೇಳಿದ್ದಾರೆ.

ಲೋಕಸಭಾ ಚುನಾವಣೆ ಅಂಗವಾಗಿ ಹಾಸನ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಶ್ರೇಯಸ್ ಎಂ. ಪಟೇಲ್ ಪರವಾಗಿ ಬೇಲೂರಿನಲ್ಲಿ ನಡೆದ ಪ್ರಜಾಧ್ವನಿ-2 ಬೃಹತ್ ಯಾತ್ರೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಸಿದ್ದರಾಮಯ್ಯ, 'ರಾಜ್ಯಕ್ಕೆ ಬಿಜೆಪಿ ಮಾಡುತ್ತಿರುವ ಅನ್ಯಾಯದ ಬಗ್ಗೆ ಪ್ರಜ್ವಲ್ ರೇವಣ್ಣ, ದೇವೇಗೌಡರು ನೆಪಕ್ಕೂ ಪಾರ್ಲಿಮೆಂಟಿನಲ್ಲಿ ಧ್ವನಿ ಎತ್ತಿಲ್ಲ ಏಕೆ?' ಎಂದು ಪ್ರಶ್ನಿಸಿದರು.

'ನಿರ್ಮಲಾ ಸೀತಾರಾಮನ್ ಅವರು ರಾಜ್ಯದ ಭದ್ರಾ ಮೇಲ್ದಂಡೆ ಯೋಜನೆಗೆ ₹5,300 ಕೋಟಿ ಕೊಡುವುದಾಗಿ ಬಜೆಟ್‌ನಲ್ಲಿ ಘೋಷಿಸಿದರು. ಆದರೆ ಇದುವರೆಗೂ ಒಂದೇ ಒಂದು ರೂಪಾಯಿಯನ್ನೂ ಬಿಡುಗಡೆ ಮಾಡದೆ ವಂಚಿಸಿದ್ದಾರೆ. ಈ ವಂಚನೆಯನ್ನು ಪ್ರಶ್ನಿಸುವುದನ್ನು ಬಿಟ್ಟು ಜೆಡಿಎಸ್‌ನವರು ಹೋಗಿ ಬಿಜೆಪಿಯ ಜೊತೆಗೆ ಸೇರಿಕೊಂಡಿದ್ದಾರೆ. ಇದು ಪ್ರಜ್ವಲ್ ರೇವಣ್ಣ ಅವರು ತಮಗೆ ಮತ ಹಾಕಿದವರಿಗೆ ಮಾಡಿದ ದ್ರೋಹ ಅಲ್ಲವೇ?' ಎಂದು ಪ್ರಶ್ನಿಸಿದರು.

'ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡ್ತೀನಿ ಅಂದಿದ್ದ ಮೋದಿಯವರನ್ನು ನೀವೂ ನಂಬಿದ್ರಿ. ಭಾರತೀಯರೆಲ್ಲರೂ ನಂಬಿದ್ರು. ಆದರೆ, ಉದ್ಯೋಗ ಕೊಡಿ ಅಂದಾಗ, ಹೋಗಿ ಪಕೋಡ ಮಾರಾಟ ಮಾಡಿ ಅಂದ್ರು. ಇದು ವಿದ್ಯಾವಂತ ಯುವಕ/ಯುವತಿಯರಿಗೆ ಮೋದಿ ಮಾಡಿದ ನಂಬಿಕೆ ದ್ರೋಹ ಅಲ್ಲವೇ? ಭಾರತೀಯರಿಗೆ ಮಾಡಿದ ವಂಚನೆ ಅಲ್ಲವೇ?' ಎಂದು ಆರೋಪಿಸಿದರು.

'ರೈತರ ಆದಾಯ ದುಪ್ಪಟ್ಟು ಮಾಡ್ತೀವಿ ಎಂದ ಪ್ರಧಾನಿ ಮೋದಿ ಸರ್ಕಾರ ಪ್ರತಿಭಟನಾನಿರತ ರೈತರ ಮೇಲೆ ದೌರ್ಜನ್ಯ ನಡೆಸಿದ್ದು ಮಹಾದ್ರೋಹ ಅಲ್ಲವೇ? ತಮ್ಮ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಆಗ್ರಹಿಸಿದ ರೈತರ ಮೇಲೆ ಬಿಜೆಪಿ ನಡೆಸಿದ ದೌರ್ಜನ್ಯ ಒಂದಾ ಎರಡಾ? ಈಗ ಆ ದೌರ್ಜನ್ಯಗಳಿಗೆ ತಕ್ಕ ಪಾಠ ಕಲಿಸುವ ಸಂದರ್ಭ ಬಂದಿದೆ' ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT