ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

Election Results: ಹಾಸನ | ಪಾಳೆಗಾರಿಕೆಗೆ ಮತದಾರರ ಪೆಟ್ಟು

Published 4 ಜೂನ್ 2024, 22:41 IST
Last Updated 4 ಜೂನ್ 2024, 22:41 IST
ಅಕ್ಷರ ಗಾತ್ರ

ಹಾಸನ: ‘ಜೆಡಿಎಸ್‌ನ ಭದ್ರಕೋಟೆ’ಯಲ್ಲಿ ಕಾಂಗ್ರೆಸ್‌ ಎರಡು ದಶಕಗಳ ನಂತರ ಗೆದ್ದಿದೆ. ಹೆಚ್ಚು ಸದ್ದು ಮಾಡಿದ್ದ ಪೆನ್‌ಡ್ರೈವ್‌ಗಿಂತ, ಪಾಳೆಗಾರಿಕೆ, ಮೈತ್ರಿಯ ಆರಂಭದಲ್ಲೇ ಬಿಜೆಪಿ ನಾಯಕರಿಂದ ವ್ಯಕ್ತವಾಗಿದ್ದ ವಿರೋಧವೇ ಪ್ರಜ್ವಲ್‌ ರೇವಣ್ಣ ಸೋಲಿಗೆ ಕಾರಣವಾಗಿದೆ.

ಮತದಾನಕ್ಕಿಂತ ಮೊದಲು ಹರಿದಾಡಿದ್ದ ಪೆನ್‌ಡ್ರೈವ್‌ ಪರಿಣಾಮ ಬೀರಿದ್ದರೆ, ಆರಂಭದಿಂದಲೇ ಪ್ರಜ್ವಲ್‌ ಹಿನ್ನಡೆ ಅನುಭವಿಸಬೇಕಿತ್ತು. ಆದರೆ, ಆರಂಭಿಕ ಸುತ್ತಿನಿಂದಲೇ ಒಮ್ಮೆ ಅವರು, ಮತ್ತೊಮ್ಮೆ ಶ್ರೇಯಸ್‌ ಮುನ್ನಡೆ ಸಾಧಿಸಿದ್ದರು. ಈ ನಡುವೆ, ‘ರೇವಣ್ಣ ಕುಟುಂಬದ ಪಾಳೆಗಾರಿಕೆಗೆ’ ಪೆಟ್ಟು ನೀಡಿರುವುದಂತೂ ಸ್ಪಷ್ಟ. ಬಿಜೆಪಿ ಶಾಸಕರಿರುವ ಕ್ಷೇತ್ರಗಳಲ್ಲಿ ಪ್ರಜ್ವಲ್‌ ಹೆಚ್ಚು ಮತ ಗಳಿಸಿದ್ದರೆ, ಜೆಡಿಎಸ್ ಶಾಸಕರಿರುವೆಡೆ ಕಡಿಮೆ ಮತ ಗಳಿಸಿದ್ದಾರೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪ್ರಜ್ವಲ್‌ ತಂದೆ ಎಚ್‌.ಡಿ. ರೇವಣ್ಣ ಎದುರು ಅನುಭವಿಸಿದ್ದ ಸಣ್ಣ ಅಂತರದ ಸೋಲಿಗೆ ಶ್ರೇಯಸ್‌ ಪಟೇಲ್‌ ಈಗ ಸೇಡು ತೀರಿಸಿಕೊಂಡಿದ್ದಾರೆ. ಹೊಳೆನರಸೀಪುರ ಹಾಗೂ ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡ ಪ್ರಭಾವವುಳ್ಳ ಹಾಸನ ಕ್ಷೇತ್ರದಲ್ಲಿ ಅಧಿಕ ಮತಗಳ ಲೀಡ್‌ ದೊರೆತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT