ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಕೆಶಿ ಅಪಹರಿಸಿ ಆಸ್ತಿ ಕಿತ್ತದ್ದಕ್ಕೆ ದಾಖಲೆಗಳಿವೆ: ಎಚ್‌ಡಿಕೆ ಮತ್ತೆ ವಾಗ್ದಾಳಿ

Published 16 ಏಪ್ರಿಲ್ 2024, 23:30 IST
Last Updated 16 ಏಪ್ರಿಲ್ 2024, 23:30 IST
ಅಕ್ಷರ ಗಾತ್ರ

ಬೆಂಗಳೂರು: ‘ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಹೆಣ್ಣುಮಕ್ಕಳನ್ನು ಅಪಹರಿಸಿ ಅವರ ಅಪ್ಪ–ಅಮ್ಮನಿಂದ ಜಮೀನು ಲಪಟಾಯಿಸಿರುವುದು ನಿಜ. ಈ ಬಗ್ಗೆ ನನ್ನ ಬಳಿ ದಾಖಲೆಗಳಿವೆ’ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘1996–97ರಲ್ಲಿ ಹೆಣ್ಣುಮಗಳೊಬ್ಬಳನ್ನು ಅಪಹರಿಸಿ ಅವರ ಪೋಷಕರನ್ನು ಬೆದರಿಸಿ ಜಮೀನು ಬರೆಸಿಕೊಂಡಿದ್ದರು. ಒಂದು ಮಗುವನ್ನು ಅಪಹರಿಸಿ ಏನು ಮಾಡಿದರು ಎಂಬುದು ತಿಳಿದಿದೆ’ ಎಂದರು.

‘ಬೆಂಗಳೂರು– ಮೈಸೂರು ಹೆದ್ದಾರಿಯಲ್ಲಿ ಜಮೀನು ಬರೆಸಿಕೊಳ್ಳಲು ನೀವು ಏನೆಲ್ಲಾ ಮಾಡಿದಿರಿ ಎನ್ನುವ ಮಾಹಿತಿಯೂ ಇದೆ. ಜಮೀನು ಖರೀದಿಸುವುದಾಗಿ ಚೆಕ್‌ ಕೊಟ್ಟು, ನಗದು ಆಗದೇ ಇರುವುದೂ ಇದೆ. ಚೆಕ್‌ ನಗದಾಗದೇ ಇರುವ ದಾಖಲೆ ಇದೆ. ಎಲ್ಲವನ್ನೂ ಇಟ್ಟುಕೊಂಡಿದ್ದೇನೆ’ ಎಂದು ಶಿವಕುಮಾರ್‌ ಅವರನ್ನುದ್ದೇಶಿಸಿ ಹೇಳಿದರು.

‘ಶಾಂತಿನಗರ ಗೃಹ ನಿರ್ಮಾಣ ಸಹಕಾರ ಸಂಘದ ಪ್ರಕರಣದಲ್ಲಿ ಏನು ನಡೆದಿದೆ ಎಂಬುದು ಗೊತ್ತಿದೆ. ಅಸಲಿ ಸಹಕಾರ ಸಂಘದ ಬದಲಿಗೆ ನಕಲಿ ಸಹಕಾರ ಸಂಘ ಸೃಷ್ಟಿಸಿದ್ದೂ ಗೊತ್ತು. ಸೋಮವಾರ ಮೊದಲ ಬಾರಿಗೆ ಈ ವಿಚಾರಗಳನ್ನು ಹೇಳಿದ್ದೆ. ಅವರು ನನ್ನನ್ನು ಚರ್ಚೆಗೆ ಕರೆದಿದ್ದಾರೆ. ನಾನು ಸಿದ್ಧನಿದ್ದೇನೆ. ಅವರ ಬಗ್ಗೆ ಕಂತೆಗಟ್ಟಲೆ ದಾಖಲೆ ಇಟ್ಟಿದ್ದೇನೆ. ಚರ್ಚೆಗೆ ಬರಲಿ’ ಎಂದು ಸವಾಲು ಹಾಕಿದರು.

‘ಒಕ್ಕಲಿಗರ ನಾಯಕತ್ವ ವಹಿಸುತ್ತೇನೆ ಎಂದು ನಾನು ಹೇಳಿಲ್ಲ. ರಾಜಕೀಯದಲ್ಲಿ ಜಾತಿಯನ್ನು ಮೀರಿ ಜನರ ಸೇವೆ ಮಾಡುತ್ತಿದ್ದೇನೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ರಾಹುಲ್ ಗಾಂಧಿಗೆ ಸ್ವಾಗತ: ‘ಮಂಡ್ಯ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರಕ್ಕೆ ಬರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರನ್ನು ಸ್ವಾಗತಿಸುತ್ತೇನೆ. ರಾಜಕೀಯದಲ್ಲಿ ಯಾರು ಬೇಕಾದರೂ ಬಂದು ಪ್ರಚಾರ ಮಾಡಬಹುದು. ಅವರು ಬಂದು ಪ್ರಚಾರ ಮಾಡಿದರೆ ನನಗೇನೂ ನಷ್ಟವಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT