ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ಅಲ್ಲು ಅರ್ಜುನ್‌, ಆಲಿಯಾಗೆ ಪ್ರಶಸ್ತಿ

Published 24 ಆಗಸ್ಟ್ 2023, 15:30 IST
Last Updated 24 ಆಗಸ್ಟ್ 2023, 15:30 IST
ಅಕ್ಷರ ಗಾತ್ರ

ನವದೆಹಲಿ: 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಗುರುವಾರ ಘೋಷಣೆಯಾಗಿದ್ದು, 2022ನೇ ಸಾಲಿನಲ್ಲಿ ಬಿಡುಗಡೆಯಾದ ‘ರಾಕೆಟ್ರಿ: ದಿ ನಂಬಿ ಎಫೆಕ್ಟ್’ ಚಿತ್ರಕ್ಕೆ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ದೊರೆತಿದೆ. ಅತ್ಯುತ್ತಮ ಕನ್ನಡ ಚಿತ್ರ ಪಶಸ್ತಿಯನ್ನು ‘777 ಚಾರ್ಲಿ’ ಪಡೆದಿದೆ.

‘ಗಂಗೂಬಾಯಿ ಕಥಿಯಾವಾಡಿ’ ಮತ್ತು ‘ಮಿಮಿ’ ಚಿತ್ರದ ಅಭಿನಯಕ್ಕಾಗಿ ಬಾಲಿವುಡ್‌ ನಟಿ ಅಲಿಯಾ ಭಟ್‌ ಮತ್ತು ಕೃತಿ ಸನೋನ್‌ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ‍ಪಡೆದುಕೊಂಡಿದ್ದಾರೆ. ‘ಪುಷ್ಪ’ ಚಿತ್ರದ ನಟನೆಗೆ ಅಲ್ಲು ಅರ್ಜುನ್‌ ಅವರು ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದಾರೆ.

ಅತ್ಯುತ್ತಮ ನೃತ್ಯ ನಿರ್ದೇಶನ(ನಾಟು ನಾಟು), ಸಾಹಸ ನಿರ್ದೇಶನ ಮತ್ತು ಸ್ಪೆಷಲ್‌ ಎಫೆಕ್ಟ್ ವಿಭಾಗದಲ್ಲಿ ರಾಜಮೌಳಿ ನಿರ್ದೇಶನದ ‘ಆರ್‌ಆರ್‌ಆರ್‌’ ಚಿತ್ರ ಆಯ್ಕೆಯಾಗಿದೆ.

ಪ್ರಶಸ್ತಿ ಪಟ್ಟಿ:

 • ಅತ್ಯುತ್ತಮ ಚಲನಚಿತ್ರ: ರಾಕೆಟ್ರಿ: ದಿ ನಂಬಿ ಎಫೆಕ್ಟ್

 • ಅತ್ಯುತ್ತಮ ಸಾಕ್ಷ್ಯ ಚಿತ್ರ: ಏಕ್ ಥಾ ಗಾಂವ್ (ಹಿಂದಿ)

 • ಅತ್ಯುತ್ತಮ ಮನರಂಜನಾ ಚಿತ್ರ: ಆರ್‌ಆರ್‌ಆರ್‌ (ತೆಲುಗು)

 • ಅತ್ಯುತ್ತಮ ನಟಿ: ಆಲಿಯಾ ಭಟ್‌ (ಗಂಗೂಬಾಯಿ ಕಥಿಯಾವಾಡಿ) ಮತ್ತು ಕೃತಿ ಸಸೋನ್‌ (ಮಿಮಿ)‌

 • ಅತ್ಯುತ್ತಮ ನಟ: ಅಲ್ಲು ಅರ್ಜುನ್‌ (ಪುಷ್ಪ)

 • ನರ್ಗೀಸ್‌ ದತ್ ಪ್ರಶಸ್ತಿ (ರಾಷ್ಟ್ರೀಯ ಏಕೀಕರಣ): ದಿ ಕಾಶ್ಮೀರ್ ಫೈಲ್ಸ್

 • ಅತ್ಯುತ್ತಮ ಪೋಷಕ ನಟ: ಪಂಕಜ್ ತ್ರಿಪಾಠಿ (ಮಿಮಿ)

 • ಅತ್ಯುತ್ತಮ ಪೋಷಕ ನಟಿ: ಪಲ್ಲವಿ ಜೋಶಿ (ಕಾಶ್ಮೀರ ಫೈಲ್ಸ್)

 • ಅತ್ಯುತ್ತಮ ಸಂಗೀತ ನಿರ್ದೇಶಕ: ದೇವಿ ಶ್ರೀ ಪ್ರಸಾದ್ (ಪುಷ್ಪಾ)

 • ಅತ್ಯುತ್ತಮ ಕನ್ನಡ ಚಿತ್ರ :777 ಚಾರ್ಲಿ

 • ಅತ್ಯುತ್ತಮ ತಮಿಳು ಚಿತ್ರ: ಕಡೈಸಿ ವ್ಯವಸಾಯಿ

 • ಅತ್ಯುತ್ತಮ ತೆಲುಗು ಚಿತ್ರ: ಉಪ್ಪೇನ

 • ಅತ್ಯುತ್ತಮ ಮಲಯಾಳಿ ಚಿತ್ರ: ಹೋಮ್

 • ಅತ್ಯುತ್ತಮ ಹಿಂದಿ ಚಿತ್ರ: ಸರ್ದಾರ್ ಉದಾಮ್‌

 • ಅತ್ಯುತ್ತಮ ಗಾಯಕಿ: ಶ್ರೇಯಾ ಘೋಷಾಲ್​​

 • ಅತ್ಯುತ್ತಮ ಗಾಯಕ: ಕಾಲ ಭೈರವ (ಹಾಡು: ಕೊಮುರಂ ಭೀಮುಡೊ)

 • ಅತ್ಯುತ್ತಮ ಗೀತರಚನೆಕಾರ: ಚಂದ್ರಬೋಸ್‌ (ಚಿತ್ರ: ಕೊಂಡ ಪೊಲಂ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT