ನಟ ಚಿಕ್ಕಣ್ಣ ಅಭಿನಯದ ‘ಉಪಾಧ್ಯಕ್ಷ’ ಚಿತ್ರ ಜ.26ರಂದು ತೆರೆ ಕಾಣುತ್ತಿದೆ. ಮೊದಲ ಸಲ ಅವರು ನಾಯಕನಾಗಿ ಕಾಣಿಸಿಕೊಂಡಿರುವ ಚಿತ್ರವಿದು. ತಮ್ಮ ಇನ್ನಷ್ಟು ಕನಸುಗಳನ್ನು ಅವರು ಹಂಚಿಕೊಳ್ಳುತ್ತಾ ಹೋದರು...

ಸಿನಿಮಾ ಮತ್ತು ನಿಮ್ಮ ಪಾತ್ರದ ಕುರಿತು ಹೇಳಬಹುದೇ?

ಸೂಪರ್ ಹಿಟ್ ‘ಅಧ್ಯಕ್ಷ’ ಸಿನಿಮಾದ ಮುಂದುವರಿದ ಭಾಗವಿದು. ಆ ಸಿನಿಮಾದ ಉಪಾಧ್ಯಕ್ಷನ ಪಾತ್ರವೇ ಇಲ್ಲಿದೆ. ‘ಅಧ್ಯಕ್ಷ’ದ ನಾಯಕ ಶರಣ್ ಹೊರತಾಗಿ ಮಿಕ್ಕೆಲ್ಲ ಪಾತ್ರಗಳು ಈ ಸಿನಿಮಾದಲ್ಲಿ ಮುಂದುವರಿಯುತ್ತವೆ. ಗೆಜ್ಜೆಪುರದಲ್ಲಿ ನಡೆಯುವ ಹಾಸ್ಯಭರಿತ ರಾಜಕೀಯ ಕಥೆಯನ್ನು ಒಳಗೊಂಡಿದೆ. ‘ಅಧ್ಯಕ್ಷ’ದಲ್ಲಿ ನಾಯಕ ಊರಿನ ಶಿವರುದ್ರೇಗೌಡರ ಮಗಳನ್ನು ಮದುವೆಯಾಗಿರುತ್ತಾನೆ. ಹೀಗಾಗಿ ಅಧ್ಯಕ್ಷರನ್ನು ಇಲ್ಲಿ ಗೌರವಾಧ್ಯಕ್ಷರನ್ನಾಗಿ ಮಾಡಲಾಗಿದೆ. ‘ಉಪಾಧ್ಯಕ್ಷ’ ಗೌಡರ ವಿರುದ್ಧ ನಿಲ್ಲುತ್ತಾನೆ. ಹಾಸ್ಯವನ್ನು ಬಿಟ್ಟು ಬೇರೇನೂ ಯೋಚಿಸಿಲ್ಲ. ಸಂಪೂರ್ಣ ಹಾಸ್ಯಮಯ ಸಿನಿಮಾ. ‘ಅಧ್ಯಕ್ಷ’ದಲ್ಲಿ ಇರದೇ ಇದ್ದ ಒಂದಷ್ಟು ಪಾತ್ರಗಳನ್ನು ಇಲ್ಲಿ ಅಳವಡಿಸಿಕೊಂಡಿದ್ದೇವೆ. ಸಾಧು ಕೋಕಿಲ, ಧರ್ಮಣ್ಣ ಕಡೂರು, ಶಿವರಾಜ್ ಕೆ.ಆರ್. ಪೇಟೆ ಮೊದಲಾದವರು ಚಿತ್ರದಲ್ಲಿದ್ದಾರೆ.

ಹಿಂದೊಮ್ಮೆ ಅಸಮಾಧಾನದ ಮಾತುಗಳನ್ನಾಡಿದ್ದಿರಿ. ಈ ಸಿನಿಮಾದಿಂದಲೇ ಬೇಸರದ ಘಟನೆಗಳು ನಡೆದವಾ?

ಕೋವಿಡ್ಗಿಂತ ಮೊದಲು ಈ ಸಿನಿಮಾ ಪ್ರಾರಂಭವಾಗಿದ್ದು. ಈಗಾಗಲೇ ‘ಉಪಾಧ್ಯಕ್ಷ’ ಜನರಿಗೆ ಚಿರಪರಿಚಿತ ಪಾತ್ರ. ಕಥೆಯೂ ಇಷ್ಟವಾಗಿತ್ತು. ಗೆದ್ದೇ ಗೆಲ್ಲುತ್ತೇವೆ ಎಂಬ ವಿಶ್ವಾಸದಿಂದ ಪ್ರಾರಂಭಿಸಿದ ಸಿನಿಮಾ ಇದು. ಇದಕ್ಕಾಗಿ ಹಲವು ಸಿನಿಮಾಗಳನ್ನು ಬಿಟ್ಟೆ. ಇದರಲ್ಲಿಯೇ ಮುಳುಗಿದ್ದರಿಂದ ಮತ್ತೊಂದಷ್ಟು ಸಿನಿಮಾಗಳನ್ನು ಮಾಡಲು ಸಾಧ್ಯವಾಗಲಿಲ್ಲ. ಈ ಸಿನಿಮಾ ವಿಳಂಬವಾಯಿತು ಎಂಬ ಕಾರಣಕ್ಕೆ ಬೇರೆ ರೀತಿಯ ಮಾತುಗಳು ಬಂದವು. ಉದ್ಯಮದಲ್ಲಿ ನಕಾರಾತ್ಮಕ ಮಾತುಗಳನ್ನು ಹಬ್ಬಿಸುವವರು ಇರುತ್ತಾರೆ. ಅಂಥವರ ವಿರುದ್ಧ ಅಸಮಾಧಾನ ಹೊರಹಾಕಿದ್ದಷ್ಟೆ. ಸಿನಿಮಾದಿಂದಾಗಲೀ, ತಂಡದಿಂದಾಗಲೀ ಯಾವುದೇ ಬೇಸರವಾಗಿರಲಿಲ್ಲ. ಇದು ನಮ್ಮ ಸಿನಿಮಾ.

ಇಲ್ಲಿಯವರೆಗೆ ಎಷ್ಟು ಸಿನಿಮಾಗಳು ಆಗಿವೆ? ಈ ಪಯಣ ಹೇಗಿದೆ?

200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದೇನೆ. ಚಿತ್ರೋದ್ಯಮ ನಾನು ಕಾಣದೇ ಇದ್ದ ಕನಸು. ಹೀಗೆ ಆಗ್ತೀನಿ ಅಂತ ಗೊತ್ತಿರಲಿಲ್ಲ. ಬಯಸದೇ ಬಂದ ಭಾಗ್ಯವಿದು. ಅಚಾನಕ್ಕಾಗಿ ‘ಕಿರಾತಕ’ ಚಿತ್ರದಲ್ಲಿ ಅವಕಾಶ ಸಿಕ್ಕಿತು. ‘ರಾಜಾಹುಲಿ’ ಚಿತ್ರದಲ್ಲಿ ಜನ ಗುರುತಿಸಿದರು. ‘ಅಧ್ಯಕ್ಷ’ ವೃತ್ತಿ ಜೀವನದ ಟರ್ನಿಂಗ್ ಪಾಯಿಂಟ್. ನಾಯಕ
ಆಗಬೇಕು ಅಂತ ಕನಸು ಕಂಡಿಲ್ಲ. ಸಿಗದಿರುವ ಅವಕಾಶಕ್ಕೆ ಕೊರಗುವುದಕ್ಕಿಂತ ಸಿಕ್ಕಿದ್ದಕ್ಕೆ ಸಂತೋಷಪಡುವವನು ನಾನು. ಒಂದೊಮ್ಮೆ ಚಿತ್ರರಂಗಕ್ಕೆ ಬಂದಿಲ್ಲದೇ ಇದ್ದಿದ್ದರೆ ಎಲ್ಲೋ, ಏನೋ ಮಾಡಿಕೊಂಡು ಒಂದಷ್ಟು ದುಡ್ಡು ಮಾಡಿಕೊಂಡು ಜೀವನದಲ್ಲಿ ಸೆಟೆಲ್ ಆಗಿರುತ್ತಿದ್ದೆ. ಆದರೆ ಈ ಹೆಸರು, ಗೌರವ, ಪ್ರೀತಿ ಗಳಿಸಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಪಯಣವನ್ನು ಬಹಳ ಸಂತೋಷದಿಂದ ಆಸ್ವಾದಿಸುತ್ತಿರುವೆ.

ಈ ಸಿನಿಮಾ ಯಶಸ್ವಿಯಾದರೆ ನಾಯಕನಾಗಿಯೇ ಮುಂದುವರಿಯುತ್ತೀರಾ?

ಯಶಸ್ವಿಯಾದರೆ ಎಂಬ ಮಾತಿಲ್ಲ, ಖಂಡಿತ ಯಶಸ್ವಿಯಾಗುತ್ತದೆ. ಹಾಗಂತ ನಾಯಕನಾಗಿಯೇ ಇರುತ್ತೇನೆ ಎಂದಲ್ಲ. ಕಾಮಿಡಿ ಇರುವ ಒಂದೊಳ್ಳೆ ಕಥೆ ಬಂತು, ಒಪ್ಪಿಕೊಂಡೆ. ಒಳ್ಳೆಯ ಪಾತ್ರಗಳಲ್ಲಿ ನಗಿಸುವುದನ್ನು ಮುಂದುವರಿಸುತ್ತೇನೆ. ಚೆನ್ನಾಗಿರುವ ಕಥೆ ಬಂದರೆ ನಾಯಕನಾಗಿ ಮಾಡುತ್ತೇನೆ. ಎರಡಲ್ಲಿಯೂ ಮುಂದುವರಿಯುವೆ.

ನಿಮ್ಮ ಮುಂದಿನ ಯೋಜನೆಗಳ ಬಗ್ಗೆ ಮಾಹಿತಿ ನೀಡಬಹುದಾ?

ಕಳೆದ ಮೂರು ವರ್ಷಗಳಿಂದ ಹೊಸ ಸಿನಿಮಾಗಳನ್ನು ಒಪ್ಪಿಕೊಂಡಿಲ್ಲ. ಆದರೆ ಮೊದಲೇ ಒಪ್ಪಿಕೊಂಡಿದ್ದ ಹಲವು ಸಿನಿಮಾಗಳು ಪೂರ್ಣಗೊಂಡು ಬಿಡುಗಡೆಗೆ ಸಿದ್ಧ ಇವೆ. ಧ್ರುವ ಸರ್ಜಾ ಅಭಿನಯದ ‘ಮಾರ್ಟಿನ್’ ಸಿನಿಮಾದಲ್ಲಿ ಒಳ್ಳೆ ಪಾತ್ರ ಮಾಡಿರುವೆ. ನಟ ಗುರುನಂದನ್ ಜೊತೆ ಒಂದು ಸಿನಿಮಾ ಪೂರ್ಣಗೊಂಡಿದೆ. ಅನೀಶ್ ತೇಜೇಶ್ವರ್ ಸಿನಿಮಾದಲ್ಲಿ ನಟಿಸಿದ್ದೇನೆ. ಹೀಗೆ ಕೆಲವಷ್ಟು ಸಿನಿಮಾಗಳು ಸಿದ್ಧವಾಗಿವೆ. ‘ಉಪಾಧ್ಯಕ್ಷ’ ಬಿಡುಗಡೆ ನಂತರ ಮುಂದಿನ ಯೋಜನೆಗಳತ್ತ ಆಲೋಚಿಸುವೆ. v

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.