ನ್ಯೂಯಾರ್ಕ್: ನಟ ಹಾಗೂ ಅಮೆರಿಕ ಟೆಲಿವಿಷನ್ ಲೋಕದ ತಾರೆ ಮಿಚೆಲ್ ಕೆ ವಿಲಿಯಮ್ಸ್ (54) ಸೋಮವಾರ ನಿಧನರಾಗಿದ್ದಾರೆ.
‘ನ್ಯೂಯಾರ್ಕ್‌ನ ಬ್ರೂಕ್‌ಲಿನ್ ಪೆಂಟಾಹೌಸ್‌ನ ಅಪಾರ್ಟಮೆಂಟ್‌ನಲ್ಲಿ ಅವರ ಶವ ಪತ್ತೆಯಾಗಿದ್ದು, ಅತಿಯಾದ ಮಾದಕವಸ್ತು ಸೇವನೆ ಸಾವಿಗೆ ಕಾರಣವಾಗಿರಬಹುದು. ಈ ನಿಟ್ಟಿನಲ್ಲಿ ತನಿಖೆ ನಡೆಯುತ್ತಿದೆ’ಎಂದು ನ್ಯೂಯಾರ್ಕ್ ಪೊಲೀಸ್ ತಿಳಿಸಿದ್ದಾರೆ.
ಎಚ್‌ಬಿಓದಲ್ಲಿ ಪ್ರಸಾರವಾಗುತ್ತಿದ್ದ ಅಮೆರಿಕದ ಕರಾಳ ಮಾದಕ ಜಾಲದ ಬಗೆಗಿನ ‘ದಿ ವೈರ್‘ ಧಾರಾವಾಹಿಯಲ್ಲಿ ‘ಓಮರ್ ಲಿಟಲ್‘ ಪಾತ್ರದಲ್ಲಿ ಮಿಚೆಲ್ ಕೆ ವಿಲಿಯಮ್ಸ್ ಮಿಂಚಿದ್ದರು. ಅದರಲ್ಲಿ ಅವರು ನಿರ್ವಹಿಸಿದ್ದ ಡ್ರಗ್ ಡೀಲರ್ ಪಾತ್ರ ಅವರಿಗೆ ಖ್ಯಾತಿ ತಂದು ಕೊಟ್ಟಿತ್ತು. ಇದೀಗ ಡ್ರಗ್ ವ್ಯಸನದಿಂದಲೇ ಅವರು ಪ್ರಾಣ ಕಳೆದುಕೊಂಡಿದ್ದಾರೆ ಎನ್ನಲಾಗಿದೆ.
ಕಳೆದ ಎರಡು ದಶಕಗಳಿಂದ ಅಮೆರಿಕದ ಟೆಲಿವಿಷನ್ ಲೋಕದಲ್ಲಿ ಮಿಂಚಿದ್ದ ಮಿಚೆಲ್, 12ಇಯರ್ಸ್ ಸ್ಲೇವ್, ಅಸ್ಸಾಸಿಯೇಷನ್ಸ್ ಕ್ರೀಡ್‌ನಂತಹ ಬಾಲಿವುಡ್ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.