ತೆಲುಗಿನ ಚಿರಂಜೀವಿ ತಮ್ಮನ ಪುತ್ರಿ ನಿಹಾರಿಕ ಬಂಧನ: ಮಗಳ ಬಗ್ಗೆ ಅಪ್ಪ ಹೇಳಿದ್ದೇನು?

ಹೈದರಾಬಾದ್: ಪಾರ್ಟಿ ಮಾಡುತ್ತಿದ್ದ ಆರೋಪದ ಮೇರೆಗೆ ಟಾಲಿವುಡ್ ಸ್ಟಾರ್ ನಟ ಚಿರಂಜೀವಿ ತಮ್ಮ ನಾಗ ಬಾಬು ಪುತ್ರಿ ಹಾಗೂ ನಟಿ ನಿಹಾರಿಕ ಕೊನಿಡೇಲಾರನ್ನು ಪೊಲೀಸರು ವಶಕ್ಕೆ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಹಾರಿಕ ಯಾವುದೇ ತಪ್ಪು ಮಾಡಿಲ್ಲ ಎಂದು ನಾಗ ಬಾಬು ಹೇಳಿದ್ದಾರೆ.
ಹೈದರಾಬಾದ್‌ನಲ್ಲಿ ನಿಗದಿತ ಸಮಯವನ್ನು ಮೀರಿ ಪಬ್‌ನಲ್ಲಿ ಪಾರ್ಟಿ ಮಾಡುತ್ತಿದ್ದ ಆರೋಪದ ಮೇರೆಗೆ ನಿಹಾರಿಕಾ ಹಾಗೂ ಗಾಯಕ ರಾಹುಲ್ ಸಿಪ್ಲಿಗುಂಜ್ ಸೇರಿದಂತೆ 144 ಜನರನ್ನು ಪೊಲೀಸರು ಬಂಧಿಸಿದ್ದರು.
'ಪಾರ್ಟಿಯಲ್ಲಿ ಹಾಜರಿದ್ದ ನಿಹಾರಿಕ ಯಾವುದೇ ತಪ್ಪು ಮಾಡಿಲ್ಲ, ಸ್ನೇಹಿತರ ಜತೆ ಸೇರಿದ್ದರು ಅಷ್ಟೇ. ಮಗಳು ತಪ್ಪು ಮಾಡಿಲ್ಲ ಎಂದು ನಮ್ಮ ಮನಸಾಕ್ಷಿಗೆ ಗೊತ್ತಿದೆ. ನಿಹಾರಿಕ ಯಾವುದೇ ತಪ್ಪು ಮಾಡಿಲ್ಲ ಎಂದು ಪೊಲೀಸರು ಕೂಡ ಸ್ಪಷ್ಟಪಡಿಸಿದ್ದಾರೆ. ಅಭಿಮಾನಿಗಳು ಸಾಮಾಜಿಕ ಮಾಧ್ಯಮಗಳ ಗಾಳಿ ಮಾತುಗಳನ್ನು ನಂಬಬಾರದು‘ ಎಂದು ನಾಗ ಬಾಬು ವಿಡಿಯೊ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈಗಾಗಲೇ ಪೊಲೀಸರು ಪಾರ್ಟಿಯಲ್ಲಿದ್ದವರನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸುತ್ತಿದ್ದಾರೆ. ಪಾರ್ಟಿ ಮಾಡುತ್ತಿದ್ದವರ ಹಿನ್ನಲೆ, ಅವರಿಗೆ ಡ್ರಗ್ಸ್ ದೊರೆತಿರುವ ಆಯಾಮಗಳಲ್ಲಿ ಪೊಲೀಸರು ವಿಶೇಷ ತಂಡಗಳನ್ನು ರಚಿಸಿ ತನಿಖೆ ಮಾಡುತ್ತಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನಿಹಾರಿಕ ಅವರನ್ನು ವಿಚಾರಣೆ ನಡೆಸಿದ ಬಳಿಕ ಪೊಲೀಸರು ಬಿಡುಗಡೆ ಮಾಡಿದ್ದಾರೆ. ಬಿಡುಗಡೆ ಬಳಿಕ ನಿಹಾರಿಕ ಮಾಧ್ಯಮಗಳೊಂದಿಗೆ ಮಾತನಾಡಲು ನಿರಾಕರಿಸಿದ್ದಾರೆ ಎಂದು ತೆಲುಗು ಮಾಧ್ಯಮಗಳು ವರದಿ ಮಾಡಿವೆ.
ಓದಿ: ತೆಲುಗು ನಟನ ಪುತ್ರಿ ಮತ್ತು ನಟಿ ಸೇರಿ ಪಾರ್ಟಿ ಮಾಡುತ್ತಿದ್ದ 144 ಜನರ ಬಂಧನ
ಐಷಾರಾಮಿ ಬಂಜಾರಾ ಹಿಲ್ಸ್‌ನಲ್ಲಿರುವ ರಾಡಿಸನ್ ಬ್ಲು ಹೋಟೆಲ್‌ನ ಪಬ್ ಮೇಲೆ ಮುಂಜಾನೆ 3 ಗಂಟೆ ಸುಮಾರಿಗೆ ಹೈದರಾಬಾದ್ ಸಿಟಿ ಪೊಲೀಸ್‌ನ ಟಾಸ್ಕ್ ಫೋರ್ಸ್ ಸಿಬ್ಬಂದಿ ದಾಳಿ ನಡೆಸಿದ್ದಾರೆ. ಹೋಟೆಲ್ ಆವರಣದಲ್ಲಿ ಕೊಕೇನ್ ಸೇರಿ ಇತರೆ ನಿಷೇಧಿತ ವಸ್ತುಗಳು ಪತ್ತೆಯಾಗಿವೆ. ಪಾರ್ಟಿ ಮಾಡುತ್ತಿದ್ದವರಲ್ಲಿ ಆಂಧ್ರಪ್ರದೇಶ ಪೊಲೀಸ್‌ನ ಮಾಜಿ ಮಹಾನಿರ್ದೇಶಕರ ಪುತ್ರಿ ಮತ್ತು ತೆಲುಗು ದೇಶಂ ಪಕ್ಷಕ್ಕೆ ಸೇರಿದ ಸಂಸದರ ಪುತ್ರ ಹಾಗೂ ಇತರೆ ಪ್ರಸಿದ್ಧ ವ್ಯಕ್ತಿಗಳ ಮಕ್ಕಳು ಸೇರಿದ್ದಾರೆ.
#NiharikaKonidela Released from police custody
Banjara Hills CI Siva Chandran Suspended#TollywoodDrugs #Drugs pic.twitter.com/eXK8GAxi7s
— TFI Movie Buzz (@TFIMovieBuzz) April 3, 2022
ಓದಿ: 'ವಿಂಡ್ಸ್ ಆಫ್ ಸಂಸಾರ' ಖ್ಯಾತಿಯ ರಿಕಿ ಕೇಜ್ಗೆ ಮತ್ತೊಂದು ಗ್ರ್ಯಾಮಿ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.