ಬುಧವಾರ, 31 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಟ ರಕ್ಷಿತ್‌ ಶೆಟ್ಟಿ ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರೀಕರಣ ಪೂರ್ಣ

Last Updated 20 ಮಾರ್ಚ್ 2023, 5:41 IST
ಅಕ್ಷರ ಗಾತ್ರ

‘ಚಾರ್ಲಿ 777’ಚಿತ್ರ ಬಿಡುಗಡೆ ಬಳಿಕ ನಟ ರಕ್ಷಿತ್‌ ಶೆಟ್ಟಿ ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದಲ್ಲಿ ಸಂಪೂರ್ಣವಾಗಿ ಮಗ್ನರಾಗಿದ್ದರು. ಇದೀಗ ಚಿತ್ರದ ಕುರಿತು ನಟ ರಕ್ಷಿತ್‌ ಶೆಟ್ಟಿ ಅಭಿಮಾನಿಗಳಿಗೆ ಮಹತ್ವದ ಅಪ್‌ಡೇಟ್‌ ನೀಡಿದ್ದಾರೆ. ‘137 ಸೊಗಸಾದ ದಿನಗಳ ಚಿತ್ರೀಕರಣಕ್ಕೆ ಪೂರ್ಣವಿರಾಮ..’ ಎಂದು ‘ಸಪ್ತ ಸಾಗರದಾಚೆ’ ಚಿತ್ರೀಕರಣ ಮುಕ್ತಾಯಗೊಂಡಿರುವ ಸುದ್ದಿಯನ್ನು ತಮ್ಮ ಸಾಮಾಜಿಕ ಮಾಧ್ಯಮ ತಾಣದಲ್ಲಿ ಹಂಚಿಕೊಂಡಿದ್ದಾರೆ. ಜತೆಗೆ ಚಿತ್ರೀಕರಣ ಮುಗಿಸಿ ಕುಂಬಳಕಾಯಿ ಒಡೆಯುವ ವಿಡಿಯೊ ಶೇರ್‌ ಮಾಡಿದ್ದಾರೆ.

ಚಿತ್ರಮಂದಿರದಲ್ಲಿ ಸಪ್ತ ಸಾಗರದ ಅಲೆ ಪ್ರಾರಂಭವಾದಾಗ ನೀವು ನಿಮ್ಮ ಪಾತ್ರರೊಂದಿಗೆ ಚಿತ್ರ ವೀಕ್ಷಿಸುವಿರಿ ಎಂಬ ಭರವಸೆ ಇದೆ ಎಂದು ರಕ್ಷಿತ್‌ ಶೆಟ್ಟಿ ಬರೆದುಕೊಂಡಿದ್ದಾರೆ.'ಗೋಧಿಬಣ್ಣ ಸಾಧಾರಣ ಮೈಕಟ್ಟು' ನಂತರ ನಟ ರಕ್ಷಿತ್‌ ಶೆಟ್ಟಿ, ನಿರ್ದೇಶಕ ಹೇಮಂತ್‌ ರಾವ್‌, ಸಂಗೀತ ನಿರ್ದೇಶಕ ಚರಣ್ ರಾಜ್‌ ಮತ್ತೆ ‘ಸಪ್ತ ಸಾಗರ’ದಲ್ಲಿ ಒಂದಾಗಿದ್ದಾರೆ.


ಚಿತ್ರದ ಮೊದಲ ಟೀಸರ್‌ ಅಭಿಮಾನಿಗಳ ಗಮನ ಸೆಳೆದಿತ್ತು. ಚಿತ್ರಕ್ಕೆ ನಾಯಕಿಯಾಗಿ ರುಕ್ಮಿಣಿ ವಸಂತ ನಟಿಸುತ್ತಿದ್ದು, ಅವರ ಗೆಟಪ್‌ನಿಂದ ಇದೊಂದು ಸುಂದರ ಪ್ರೇಮ ಕಥೆ ಇರುವ ಚಿತ್ರವೆಂಬುದು ಮೇಲ್ನೋಟಕ್ಕೆ ತಿಳಿಯುತ್ತಿದೆ. ‘ಚಾರ್ಲಿ’ ಬಳಿಕ ರಕ್ಷಿತ್‌ ಶೆಟ್ಟಿ ಅತ್ಯಂತ ಭರವಸೆ ಇಟ್ಟುಕೊಂಡಿರುವ ಚಿತ್ರವಿದು. ಈ ಬಗ್ಗೆ ಅವರು ಸಾಕಷ್ಟು ಸಲ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದ್ದಾರೆ.


ರಕ್ಷಿತ್‌ ಶೆಟ್ಟಿ ತಮ್ಮದೇ ‘ಪರಂವ’ ನಿರ್ಮಾಣ ಸಂಸ್ಥೆಯಡಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಕಥೆಯಲ್ಲಿ ಹಲವು ಶೇಡ್‌ಗಳಿವೆ. ಒಂದು ಶೇಡ್‌ನಲ್ಲಿ ರಕ್ಷಿತ್‌ ಕೈದಿಯಾಗಿರುತ್ತಾರೆ ಎಂದು ನಿರ್ದೇಶಕ ಹೇಮಂತ್‌ರಾವ್‌ ಈ ಹಿಂದೆ ಹೇಳಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT