ಭಾನುವಾರ, ನವೆಂಬರ್ 27, 2022
26 °C

ಪತ್ರಕರ್ತೆಗೆ ನಿಂದನೆ: ಮಲಯಾಳ ಚಿತ್ರನಟ ಶ್ರೀನಾಥ್‌ ಭಾಸಿ ಬಂಧನ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕೊಚ್ಚಿ(ಕೇರಳ): ಸಂದರ್ಶನದ ವೇಳೆ ಪತ್ರಕರ್ತೆಗೆ ನಿಂದಿಸಿದ ಆರೋಪದಲ್ಲಿ ಮಲಯಾಳ ಚಿತ್ರನಟ ಶ್ರೀನಾಥ್‌ ಭಾಸಿ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಶ್ರೀನಾಥ್‌ ವಿರುದ್ಧ ಆನ್‌ಲೈನ್‌ ಮಾಧ್ಯಮವೊಂದರ ಪತ್ರಕರ್ತೆ ಮಾರಾಡು ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.

‘ಚಟ್ಟಂಬಿ’ ಸಿನಿಮಾದ ಪ್ರಚಾರದ ಅಂಗವಾಗಿ ಸೆಪ್ಟೆಂಬರ್ 21ರಂದು ಹಮ್ಮಿಕೊಂಡಿದ್ದ ಸಂದರ್ಶನದ ವೇಳೆ ಶ್ರೀನಾಥ್‌ ಅವರು ಪತ್ರಕರ್ತೆಯ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದರು. ಈ ದೃಶ್ಯವಿದ್ದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು