ಭಾನುವಾರ, ಆಗಸ್ಟ್ 1, 2021
26 °C

ವೆಬ್‌ ಸರಣಿಯಲ್ಲಿ ಸೂರ್ಯ ನಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವೆಬ್‌ ಸರಣಿಗಳತ್ತ ನಟ, ನಟಿಯರು ಇತ್ತೀಚೆಗೆ ಮುಖ ಮಾಡುತ್ತಿರುವುದು ಸರ್ವೇ ಸಾಮಾನ್ಯ. ಖ್ಯಾತ ನಿರ್ದೇಶಕರು ಕೂಡ ವೆಬ್ ಸರಣಿಗಳಿಗೆ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಕಾಲಿವುಡ್‌ನಲ್ಲಿ ಇತ್ತೀಚೆಗೆ ಒಂಬತ್ತು ನಿರ್ದೇಶಕರು ವೆಬ್‌ ಸರಣಿ ನಿರ್ದೇಶಿಸುವುದಾಗಿ ಘೋಷಿಸಿದ್ದಾರೆ. ಒಂಬತ್ತು ಎಪಿಸೋಡ್‌ಗಳಿಗೆ ತಲಾ ಒಬ್ಬ ನಿರ್ದೇಶಕ ಆ್ಯಕ್ಷನ್‌ ಕಟ್‌ ಹೇಳಲಿದ್ದಾರಂತೆ. ಈ ಪಟ್ಟಿಯಲ್ಲಿ ಮಣಿರತ್ನಂ ಕೂಡ ಇರುವುದು ವಿಶೇಷ.

ಮಣಿರತ್ನಂ ನಿರ್ದೇಶಿಸಲಿರುವ ಎಪಿಸೋಡ್‌ನಲ್ಲಿ ನಟ ಸೂರ್ಯ ಅಭಿನಯಿಸಿದ್ದಾರೆ ಎಂಬ ಹೊಸ ಸುದ್ದಿ ಕಾಲಿವುಡ್‌ ಪಡಸಾಲೆಯಿಂದ ಹೊರಬಿದ್ದಿದೆ. ಅಂದಹಾಗೆ ಇದು ಸೂರ್ಯ ಅವರ ಮೊದಲ ವೆಬ್‌ ಸರಣಿ ಕೂಡ ಹೌದು. ಹಾಗಾಗಿ, ಅವರ ಅಭಿಮಾನಿಗಳಿಗೂ ಖುಷಿ ತಂದಿದೆಯಂತೆ.

ಆದರೆ, ಯಾವ ವಿಷಯ ಆಧರಿಸಿ ಈ ಸರಣಿ ನಿರ್ಮಾಣಗೊಳ್ಳಲಿದೆ ಎಂಬ ಸುದ್ದಿ ಇನ್ನೂ ಅಧಿಕೃತವಾಗಿ ಬಹಿರಂಗಗೊಂಡಿಲ್ಲ. ಅರವಿಂದ ಸ್ವಾಮಿ, ಸಿದ್ಧಾರ್ಥ ಸೇರಿದಂತೆ ತಮಿಳಿನ ಹಲವು ನಟರು ಈ ಸರಣಿಯ ಭಾಗವಾಗಲಿದ್ದಾರಂತೆ.

ಪ್ರಸ್ತುತ ಸೂರ್ಯ ‘ಸೂರರೈ ಪೊಟ್ಟರು’ ಚಿತ್ರದ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ. ಜಿ.ಆರ್. ಗೋಪಿನಾಥ್ ಅವರ ಏರ್ ಡೆಕ್ಕನ್ ಸಂಸ್ಥೆಯ ಸಂಸ್ಥಾಪನಾ ಅವಧಿಯಲ್ಲಿ ನಡೆದ ಘಟನೆಗಳೇ ಈ ಸಿನಿಮಾಕ್ಕೆ ಪ್ರೇರಣೆ. ಇದಕ್ಕೆ ಸುಧಾ ಕೊಂಗಾರ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಕನ್ನಡದಲ್ಲಿಯೂ ಈ ಸಿನಿಮಾ ಡಬ್‌ ಆಗಿ ಬಿಡುಗಡೆಯಾಗಲಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು