ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದುವೆಗೆ ಒಂದು ದಿನ ಮುಂಚೆ ಕತ್ರೀನಾಗೆ ಪ್ರಪೋಸ್‌ ಮಾಡಿದ್ದೆ ಎಂದ ನಟ ವಿಕ್ಕಿ ಕೌಶಲ್

Published 7 ಡಿಸೆಂಬರ್ 2023, 11:02 IST
Last Updated 7 ಡಿಸೆಂಬರ್ 2023, 11:02 IST
ಅಕ್ಷರ ಗಾತ್ರ

ಮುಂಬೈ: ಮದುವೆಗೆ ಒಂದು ದಿನ ಬಾಕಿ ಇರುವಾಗ ತಮ್ಮ ಪತ್ನಿ ಹಾಗೂ ನಟಿ ಕತ್ರೀನಾ ಕೈಫ್ ಅವರಿಗೆ ಪ್ರಪೋಸ್‌ ಮಾಡಿದ್ದೆ ಎಂದು ಬಾಲಿವುಡ್‌ ನಟ ವಿಕ್ಕಿ ಕೌಶಲ್ ಹೇಳಿದ್ದಾರೆ.

ಇತ್ತೀಚಿಗೆ ಕಾಫಿ ವಿತ್‌ ಕರಣ್ ಆವೃತ್ತಿ– 8 ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಬಾಲಿವುಡ್ ನಟ ವಿಕ್ಕಿ ಕೌಶಲ್, ತನ್ನ ಪತ್ನಿ ಕತ್ರೀನಾ ಅವರಿಗೆ ತಮ್ಮ ‍ಪ್ರೀತಿಯನ್ನು ವ್ಯಕ್ತಪಡಿಸಿದ ಬಗ್ಗೆ ಸಾರ್ವಜನಿಕವಾಗಿ ಮುಕ್ತ ಮನಸ್ಸಿನಿಂದ ಮಾತನಾಡಿದ್ದಾರೆ.

ನಟಿ ಕಿಯಾರಾ ಅಡ್ವಾಣಿ ಅವರೊಂದಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು ಇದೇ ಮೊದಲ ಬಾರಿಗೆ ತಮ್ಮ ವೈಯಕ್ತಿಕ ವಿಚಾರವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

ಮದುವೆಯ ಒಂದು ದಿನದ ಮುಂಚೆ ಭೋಜನ ಕೂಟ ಏರ್ಪಡಿಸಲಾಗಿತ್ತು. ಆ ವೇಳೆ ಸ್ನೇಹಿತರು ಹಾಗೂ ಕುಟುಂಬದವರು ಆಗಮಿಸುವ ಮುಂಚೆಯೇ ಕತ್ರೀನಾ ಕೈಫ್‌ಗೆ ಮಂಡಿಯೂರಿ ಆಕೆಯ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದೆ. ಕೆಲಸದ ಮಧ್ಯೆ ಒಂದು ವೇಳೆ ಪ್ರಪೋಸ್‌ ಮಾಡುವುದನ್ನು ಮರೆತು ಹೋಗಿದ್ದರೆ, ಜೀವನ ಪೂರ್ತಿ ಅವರಿಂದ (ಕೈಫ್) ಮಾತು ಕೇಳಬೇಕಾಗುತ್ತದೆ ಎಂದು ಸ್ನೇಹಿತರು ಮೊದಲೇ ಎಚ್ಚರಿಕೆ ನೀಡಿದ್ದರು ಎಂದು ವಿಕ್ಕಿ ಹೇಳಿದ್ದಾರೆ.

ಕತ್ರೀನಾ ಕೈಫ್ ಮತ್ತು ವಿಕ್ಕಿ ಕೌಶಲ್‌ ಅವರು 2021ರ ಡಿಸೆಂಬರ್‌ 9ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

ಇತ್ತೀಚೆಗೆ ತೆರೆಕಂಡ ಸಲ್ಮಾನ್‌ ಖಾನ್‌ ಅಭಿನಯದ ‘ಟೈಗರ್‌–3‘ ಚಿತ್ರದಲ್ಲಿ ಕತ್ರೀನಾ ಕೈಫ್ ಮಿಂಚಿದ್ದರು. ವಿಕ್ಕಿ ಕೌಶಲ್‌ ನಟನೆಯ ‘ಸ್ಯಾಮ್ ಬಹದ್ದೂರ್‌‘ ಚಿತ್ರ ಯಶಸ್ವಿ ಪ್ರದರ್ಶನ ಕಾಣುತ್ತಿದೆ.

ವಿಕ್ಕಿ ಕೌಶಲ್ - ಕತ್ರೀನಾ

ವಿಕ್ಕಿ ಕೌಶಲ್ - ಕತ್ರೀನಾ 

ಇನ್‌ಸ್ಟಾಗ್ರಾಮ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT