ಚೆನ್ನೈ: ನಟ ಹಾಗೂ ತಮಿಳಗ ವೆಟ್ರಿ ಕಳಗಂ ಪಕ್ಷದ ಮುಖ್ಯಸ್ಥ ವಿಜಯ್ ನಟಿಸುತ್ತಿರುವ ‘ಜನ ನಾಯಕ’ ಚಿತ್ರದ ಪೋಸ್ಟರ್ ಭಾನುವಾರ ಅನಾವರಣಗೊಂಡಿದೆ.

ವಿಕ್ರವಾಂಡಿಯಲ್ಲಿ ವಿಜಯ್ ತಮ್ಮ ಮುಂಬರುವ ಚಿತ್ರದ ಶೀರ್ಷಿಕೆಯನ್ನು ಪೋಸ್ಟರ್ ರೂಪದಲ್ಲಿ ಬಹಿರಂಗಪಡಿಸಿದ್ದಾರೆ. ವೇದಿಕೆ ಮೇಲೆ ನಿಂತು ತಮ್ಮ ಹಿಂದೆ ನಿಂತ ನೂರಾರು ಜನರೊಂದಿಗೆ ಸೆಲ್ಫಿ ತೆಗೆದುಕೊಳ್ಳುತ್ತಿರುವ ಪೋಸ್ಟರ್ನೊಂದಿಗೆ ಚಿತ್ರದ ಹೆಸರನ್ನು ಅನಾವರಣಗೊಳಿಸಿದ್ದಾರೆ.

ಚಿತ್ರವನ್ನು ಎಚ್.ವಿನೋದ್ ನಿರ್ದೇಶನ ಮಾಡಿದ್ದು, ಕೆವಿಎನ್ ಪ್ರೊಡಕ್ಷನ್ ನಿರ್ಮಾಣ ಮಾಡುತ್ತಿದೆ. ಇದು ವಿಜಯ್ ನಟಿಸುತ್ತಿರುವ 69ನೇ ಚಿತ್ರವಾಗಿದೆ, ಹೀಗಾಗಿ ಆರಂಭದಲ್ಲಿ #ದಳಪತಿ69 ಎಂದು ಚಿತ್ರಕ್ಕೆ ಹೆಸರಿಡಲಾಗಿತ್ತು.

ವಿಜಯ್ ಬೆಂಬಲಿಗರ ಪ್ರಕಾರ, ಜನ ನಾಯಕ ಅವರ ಕೊನೆಯ ಚಿತ್ರವಾಗಿರಲಿದ್ದು, ಬಳಿಕ ಅವರು ಸಂಪೂರ್ಣವಾಗಿ ಸಾಮಾಜಿಕ ಜೀವನದಲ್ಲಿ ತೊಡಗಿಸಿಕೊಳ್ಳಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.