ಮಂಗಳವಾರ, 6 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಯಸ್ಕರು ಮಹಿಳೆಯರಿಗೆ ಆಂಟಿ ಎನ್ನಬಾರದು, ಮಕ್ಕಳಿಗಷ್ಟೇ ಅದು ಚಂದ: ನಟಿ ಕಸ್ತೂರಿ

Last Updated 28 ಫೆಬ್ರವರಿ 2023, 14:20 IST
ಅಕ್ಷರ ಗಾತ್ರ

ಬೆಂಗಳೂರು: ತೆಲುಗು ಚಿತ್ರರಂಗದ ನಟಿ ಹಾಗೂ ಟೆಲಿವಿಷನ್ ನಿರೂಪಕಿ ಅನುಸೂಯಾ ಭಾರಧ್ವಾಜ ಅವರ ಬಗೆಗಿನ ‘ಆಂಟಿ’ ಎಂಬ ಟ್ರೋಲ್ ಭರಾಟೆ ಇನ್ನೂ ನಿಲ್ಲುತ್ತಿಲ್ಲ.

ಈಗ ಇದೇ ವಿಚಾರ ಮತ್ತೆ ಸದ್ದು ಮಾಡಿದೆ. ಮಹಿಳೆಯರಿಗೆ ಆಂಟಿ ಎಂದು ಸಂಬೋಧಿಸುವುದು ಅವರಿಗೆ ಮಾಡುವ ಅವಮಾನವೇ ಸರಿ ಎಂದು ತಮಿಳಿನ ಬಹುಭಾಷಾ ನಟಿ ಕಸ್ತೂರಿ ಶಂಕರ್ ಹೇಳಿದ್ದಾರೆ.

ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ತಮ್ಮ ಗೆಳತಿ ಅನುಸೂಯಾ ಬಗ್ಗೆ ಮಾತನಾಡಿರುವ ಅವರು, ಅನುಸೂಯಾ ಭಾರಧ್ವಾಜ ಅವರನ್ನು ಆಂಟಿ ಎಂದು ಟ್ರೋಲ್ ಮಾಡುತ್ತಿರುವುವರ ವಿರುದ್ಧ ಕಿಡಿಕಾರಿದ್ದಾರೆ.

ಯಾವುದೇ ಮಹಿಳೆಯರನ್ನು ಪುರುಷರು ಅಥವಾ ವಯಸ್ಕರರು ಆಂಟಿ ಎಂದು ಕರೆಯಬಾರದು. ಇದು ಒಂದು ರೀತಿ ಅಶ್ಲೀಲ ಪದವಾಗಿದೆ. ಈ ರೀತಿ ಮಹಿಳೆಯರಿಗೆ ಹೇಳುವುದನ್ನು ನಿಲ್ಲಿಸಬೇಕು. ಆಂಟಿ ಎಂದು ಹೇಳುವುದಿದ್ದರೆ ಅದು ಮಕ್ಕಳಿಗೆ ಮಾತ್ರ ಸೂಕ್ತ. ವಯಸ್ಕರರು ಆ ರೀತಿ ಕರೆಯಬಾರದು ಎಂದು ಹೇಳಿದ್ದಾರೆ.

ಅರ್ಜುನ್ ರೆಡ್ಡಿ ಸಿನಿಮಾದಲ್ಲಿನ ಆಂಟಿ ಡೈಲಾಗ್‌ನಿಂದ ಉಂಟಾದ ವಿವಾದದ ಬಗ್ಗೆ ಅನುಸೂಯಾ ಭಾರಧ್ವಾಜ ಕಿಡಿಕಾರಿದ್ದರು. ಆ ನಂತರ ಅವರನ್ನು ಕೆಲವರು ಆಂಟಿ ಅನುಸೂಯಾ ಎಂದು ಸಂಬೋಧಿಸಿ ಟ್ರೋಲ್ ಮಾಡುವುದು ವ್ಯಾಪಕವಾಗಿದೆ.

ಇತ್ತೀಚೆಗೆ ಸಲಿಂಗ ಕಾಮದ ಬಗ್ಗೆ ಅನುಸೂಯಾ ಭಾರಧ್ವಾಜ ಅವರು ಹೇಳಿಕೆ ನೀಡಿದಾಗಲೂ ಅವರನ್ನು ಆಂಟಿ ಎಂದು ಹಲವರು ಕರೆದಿದ್ದರು.

ಇನ್ನು ಕಸ್ತೂರಿ ಶಂಕರ್, ಕನ್ನಡದ ‘ಜಾಣ’, ‘ಇಬ್ಬರ ನಡುವೆ ಮುದ್ದಿನ ಆಟ’, ‘ತುತ್ತಾ–ಮುತ್ತಾ’ ಸಿನಿಮಾಗಳು ಸೇರಿದಂತೆ ತೆಲುಗು ತಮಿಳು, ಮಲಯಾಳಂ ಸೇರಿದಂತೆ ದಕ್ಷಿಣ ಭಾರತದ ಅನೇಕ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT