ಶನಿವಾರ, ಜುಲೈ 24, 2021
20 °C

ಮತ್ತೆ ಪೋಲ್ ಡ್ಯಾನ್ಸಿಂಗ್‌ಗೆ ಮರಳಿದ ನಟಿ ಕೃತಿ ಕರಬಂದ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

Kriti Kharbanda Instagram

ಬೆಂಗಳೂರು: ಚಿತ್ರರಂಗದ ಪ್ರಮುಖ ನಟಿಯರಲ್ಲಿ ಒಬ್ಬರಾದ ಕೃತಿ ಕರಬಂದ ಫೋಸ್ಟ್ ಒಂದು ಇನ್‌ಸ್ಟಾಗ್ರಾಂನಲ್ಲಿ ವೈರಲ್ ಆಗಿದೆ.

ಕೃತಿ ಕರಬಂದ ಅವರಿಗೆ ಪೋಲ್ ಡ್ಯಾನ್ಸಿಂಗ್ ಎಂದರೆ ತುಂಬ ಇಷ್ಟವಂತೆ.. ಪೋಲ್ ಡ್ಯಾನ್ಸ್‌ನಲ್ಲಿ ಹೆಚ್ಚು ಸಂತೋಷವಿದೆ ಮತ್ತು ಅದರಿಂದ ತೃಪ್ತಿ ದೊರೆಯುತ್ತದೆ ಎಂದು ಕೃತಿ ಹೇಳಿಕೊಂಡಿದ್ದಾರೆ.

ಕಪ್ಪು ಬಣ್ಣದ ಉಡುಗೆ ತೊಟ್ಟಿರುವ ಕೃತಿ, ಹಳೆಯ ವಿಡಿಯೊ ಒಂದನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದು, ಮನೆಯಲ್ಲಿ ಕೂಡ ಪೋಲ್ ಒಂದನ್ನು ಅಳವಡಿಸಿಕೊಳ್ಳಬೇಕಿತ್ತು. ಪೋಲ್ ಡ್ಯಾನ್ಸ್ ಇಲ್ಲದಿರುವುದಕ್ಕೆ ವಿಷಾದವಾಗುತ್ತಿದೆ ಎಂದಿದ್ದಾರೆ.

ಲಾಕ್‌ಡೌನ್ ಬಳಿಕ ಖಂಡಿತವಾಗಿಯೂ ಮತ್ತೆ ಪೋಲ್ ಡ್ಯಾನ್ಸ್ ಮಾಡುತ್ತೇನೆ, ನಾನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ, ನೀವೇನು ಮಿಸ್ ಮಾಡಿಕೊಳ್ಳುತ್ತಿರುವಿರಿ ಎಂದು ಅಭಿಮಾನಿಗಳನ್ನು ಕೃತಿ ಪ್ರಶ್ನಿಸಿದ್ದಾರೆ.

ಫಿಟ್ನೆಸ್ ಮತ್ತು ವರ್ಕೌಟ್ ಕುರಿತು ಕೃತಿ ತುಂಬಾ ಎಚ್ಚರ ವಹಿಸುತ್ತಿದ್ದು, ಜಿಮ್‌ನಲ್ಲಿರುವ ಫೋಟೊ, ವಿಡಿಯೊ ಕೂಡ ಆಗಾಗ ಹಂಚಿಕೊಳ್ಳುತ್ತಿರುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು