ಸೋಮವಾರ, ಜೂನ್ 21, 2021
20 °C

ಪ್ರೀತಿ ಮಾಡಲು ಸಮಯವಿಲ್ಲ ಎಂದ ‘ದರ್ಬಾರ್‌’ ಬೆಡಗಿ ನಿವೇತಾ ಥಾಮಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಟಿ ನಿವೇತಾ ಥಾಮಸ್‌ ಬೆಳ್ಳಿತೆರೆ ಪ್ರವೇಶಿಸಿದ್ದು ಬಾಲನಟಿಯಾಗಿ. ಮಲಯಾಳ, ತೆಲುಗು ಹಾಗೂ ತಮಿಳಿನ ಹಲವು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ‘ಸೂಪರ್‌ ಸ್ಟಾರ್‌’ ರಜನಿಕಾಂತ್‌ ನಟನೆಯ ‘ದರ್ಬಾರ್‌‘ ಚಿತ್ರದಲ್ಲಿನ ಮನೋಜ್ಞ ನಟನೆಯ ಮೂಲಕ ನಿವೇತಾ ನೂರಾರು ಪ್ರೇಕ್ಷಕರ ಮನದಲ್ಲಿ ಗಟ್ಟಿಯಾದ ಸ್ಥಾನ ‍ಪಡೆದಿದ್ದಾರೆ. ಈ ಚಿತ್ರದಲ್ಲಿ ಅವರು ತಲೈವನ ಪುತ್ರಿ ಪಾತ್ರದಲ್ಲಿ ನಟಿಸಿದ್ದರು.

ಸಾಮಾಜಿಕ ಜಾಲತಾಣದಲ್ಲಿ ಆಕೆ ಆಗಾಗ್ಗೆ ಅಭಿಮಾನಿಗಳ ಜೊತೆಗೆ ಸಂವಾದ ನಡೆಸುವುದು ಉಂಟು. ಇತ್ತೀಚೆಗೆ ಆಕೆ ಮಾಧ್ಯಮ ಸಂವಾದದಲ್ಲಿ ಪಾಲ್ಗೊಂಡಿದ್ದರು. ಆ ವೇಳೆ ತನ್ನ ಮದುವೆ ಮತ್ತು ವೈಯಕ್ತಿಕ ಬದುಕಿನ ಬಗ್ಗೆ ಆಕೆ ಹೇಳಿದ ಸಂಗತಿ ಆಸಕ್ತಿದಾಯಕವಾಗಿದೆ.

‘ನೀವು ಯಾವುದಾದರು ವ್ಯಕ್ತಿಯ ಪ್ರೀತಿಯ ಬಲೆಯಲ್ಲಿ ಬಿದ್ದಿರುವಿರಾ. ನೀವು ವೈವಾಹಿಕ ಜೀವನಕ್ಕೆ ಅಡಿ ಇಡುವುದು ಯಾವಾಗ?’ ಎಂದು ಪತ್ರಕರ್ತರು ಕೇಳಿದ್ದಾರೆ‌. ‘ಪ್ರೀತಿ ಮಾಡಲು ನನಗೆ ಸಮಯವೇ ಇಲ್ಲ’ ಎಂದು ಪ್ರಶ್ನೆ ತೂರಿಬಂದ ವೇಗದಲ್ಲಿಯೇ ನಿವೇತಾ ಉತ್ತರಿಸಿದರಂತೆ.

‘ಸದ್ಯಕ್ಕೆ ನಾನು ಮದುವೆಯಾಗುವ ಯೋಜನೆ ಹೊಂದಿಲ್ಲ. ಅಂತಹ ಆಲೋಚನೆಯಲ್ಲಿಯೂ ಇಲ್ಲ. ಅಂತಹ ಸಮಯ ಬಂದಾಗ ಖಂಡಿತವಾಗಿಯೂ ಮದುವೆಯಾಗುತ್ತೇನೆ’ ಎಂದಿದ್ದಾರೆ.

ತಾನು ಮದುವೆಯಾಗುವ ಹುಡುಗನ ಗುಣಲಕ್ಷಣಗಳ ಬಗ್ಗೆಯೂ ಅವರು ಹೇಳಿಕೊಂಡಿದ್ದಾರೆ . ‘ಆತ ಪ್ರಾಮಾಣಿಕ ಹಾಗೂ ಜವಾಬ್ದಾರಿಯುತ ವ್ಯಕ್ತಿಯಾಗಿರಬೇಕು. ಅಂತಹ ವ್ಯಕ್ತಿಯ ಕೈಹಿಡಿಯಲು ನಾನು ಸಿದ್ಧ’ ಎಂದು ಹೇಳಿದ್ದಾರೆ.

ನಟನೆಯಲ್ಲಿಯೇ ತೊಡಗಿಸಿಕೊಂಡಿದ್ದ ಆಕೆ ಈಗ ಮೊದಲ ಬಾರಿಗೆ ನಿರ್ದೇಶನದತ್ತ ಚಿತ್ತ ಹರಿಸಿದ್ದಾರೆ. ಸಿನಿಮಾವೊಂದಕ್ಕೆ ಶೀಘ್ರವೇ ಅವರು ಆ್ಯಕ್ಷನ್‌ ಕಟ್ ಹೇಳಲಿದ್ದಾರಂತೆ. ನಟ ನಾನಿ ನಟನೆಯ ‘ವಿ’ ಚಿತ್ರದಲ್ಲಿ ಅವರು ನಟಿಸಿದ್ದು, ಇದರ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು