‘ನ್ಯಾಷನಲ್ ಕ್ರಶ್’ ಎಂದೇ ಖ್ಯಾತಿ ಪಡೆದುಕೊಂಡಿರುವ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅವರು ನಟ ವಿಜಯ್ ದೇವರಕೊಂಡ ಅವರನ್ನೇ ಮದುವೆಯಾಗುವುದಾಗಿ ಎಲ್ಲರ ಮುಂದೆ ಅಧಿಕೃತವಾಗಿ ಒಪ್ಪಿಕೊಂಡಿದ್ದಾರೆ.
.ರಶ್ಮಿಕಾ ನಟನೆಯ ‘ದಿ ಗರ್ಲ್ಫ್ರೆಂಡ್’ ಸೇರಿದಂತೆ 7 ಸಿನಿಮಾಗಳು ಇಂದು ತೆರೆಗೆ.ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ನಿಶ್ಚಿತಾರ್ಥ: ಫೆಬ್ರುವರಿಯಲ್ಲಿ ಮದುವೆ?.
ಇತ್ತೀಚೆಗೆ ‘ಹಾನೆಸ್ಟ್ ಟೌನ್ ಹಾಲ್’ ಕ್ಯಾಂಪಸ್ನೊಂದಿಗೆ ಮಾತನಾಡಿದ ರಶ್ಮಿಕಾ ಮಂದಣ್ಣ ಅವರು ಅಧಿಕೃತವಾಗಿ ವಿಜಯ್ನನ್ನೇ ಮದುವೆ ಆಗುತ್ತೇನೆ ಎಂದಿದ್ದಾರೆ. ಹಾನೆಸ್ಟ್ ಟೌನ್ ಹಾಲ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ನಟಿ ರಶ್ಮಿಕಾ ಮಂದಣ್ಣಗೆ ಕೆಲವೊಂದು ಪ್ರಶ್ನೆಗಳನ್ನು ಕೇಳಲಾಗಿದೆ. ಅದರಲ್ಲಿ ‘ಇಲ್ಲಿಯವರೆಗೆ ಕೆಲಸ ಮಾಡಿದ ನಟರಲ್ಲಿ ನೀವು ಯಾರನ್ನು ಸಾಯಿಸುತ್ತೀರಿ?, ಯಾರ ಜೊತೆ ಡೇಟಿಂಗ್ ಮಾಡುತ್ತೀರಿ? ಯಾರನ್ನು ಮದುವೆಯಾಗುತ್ತೀರಿ? ಎಂದು ಕೇಳಿದ್ದಾರೆ.

ಅದಕ್ಕೆ ಉತ್ತರಿಸಿದ ರಶ್ಮಿಕಾ, ನರುಟೊ (ಅನಿಮೇಷನ್ ಪಾತ್ರ) ಜೊತೆ ಡೇಟಿಂಗ್ ಮಾಡುತ್ತೇನೆ ಎಂದಿದ್ದಾರೆ. ಇದಾದ ಬಳಿಕ ವಿಜಯ್ ದೇವರಕೊಂಡ ಅವರನ್ನು ಮದುವೆಯಾಗುತ್ತೇನೆ ಎಂದು ಹೇಳಿದ್ದಾರೆ. ವಿಜಯ್ ಅಂತ ಹೇಳುತ್ತಿದ್ದಂತೆ ಕಾರ್ಯಕ್ರಮದಲ್ಲಿ ನೆರೆದಿದ್ದ ಎಲ್ಲರೂ ಜೋರಾಗಿ ಕೂಗಿದ್ದಾರೆ.

ಇನ್ನು, ವಿಜಯ್ ದೇವರಕೊಂಡ ಅವರೊಂದಿಗೆ ವಿವಾಹದ ವದಂತಿಗಳು ಹರಿದಾಡುತ್ತಿರುವ ಹೊತ್ತಲ್ಲೇ ನಟಿ ರಶ್ಮಿಕಾ ಮಂದಣ್ಣ ಹೇಳಿಕೆ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. 2026ರ ಫೆಬ್ರವರಿಯಲ್ಲಿ ರಶ್ಮಿಕಾ ಹಾಗೂ ವಿಜಯ್ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡುವ ಸಾಧ್ಯತೆ ಇದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಆದರೆ ಈ ಬಗ್ಗೆ ರಶ್ಮಿಕಾ ಅಥವಾ ವಿಜಯ್ ದೇವರಕೊಂಡ ಈ ಕುರಿತು ಅಧಿಕೃತ ಮಾಹಿತಿ ನೀಡಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.