ಬೆಂಗಳೂರು: ನಟಿ ಸಮಂತಾ ತಮ್ಮ ಬೋಲ್ಡ್ ಲುಕ್‌ನಿಂದ ಅಷ್ಟೇ ಅಲ್ಲದೇ ತಮ್ಮ ನಟನೆಯ ಮೂಲಕ, ಫಿಟ್‌ನೆಸ್‌ನಿಂದ ಕೋಟ್ಯಂತರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.
ಸದ್ಯ ಸಮಂತಾ ಹಂಚಿಕೊಂಡಿರುವ ಇನ್‌ಸ್ಟಾಗ್ರಾಂ ಪೋಸ್ಟ್ ಒಂದು ಅವರ ಅಭಿಮಾನಿಗಳಲ್ಲಿ ಆತಂಕಕ್ಕೆ ಕಾರಣವಾಗಿತ್ತು. ಆದರೆ, ಇತ್ತೀಚಿನ ವರದಿಗಳ ಪ್ರಕಾರ ಸಮಂತಾ ಅವರು ‘ಸಿಟಡೆಲ್: ಇಂಡಿಯಾ ವೆಬ್ ಸಿರೀಸ್’ ಚಿತ್ರೀಕರಣದಲ್ಲಿ ಗಾಯಗೊಂಡಿದ್ದಾರೆ.
ಅವರ ಕೈಗಳಿಗೆ ತರುಚಿದಂತೆ ಗಾಯಗಳಾಗಿದ್ದು, ಅಲ್ಲಲ್ಲಿ ರಕ್ತಸಿಕ್ತ ಕಲೆಗಳು ಕಂಡು ಬಂದಿವೆ. ಈ ಚಿತ್ರವನ್ನು ಹಂಚಿಕೊಂಡು ಅವರು ‘ಕೆಲಸದ ನಂಬಿಕೆಗಳು ಇದೇ ನೋಡಿ’ ಎಂದು ಒಕ್ಕಣಿಕೆ ಬರೆದುಕೊಂಡಿದ್ದಾರೆ.
ವರದಿಗಳ ಪ್ರಕಾರ ಕಾಶ್ಮೀರದಲ್ಲಿ ಚಿತ್ರೀಕರಣದ ವೇಳೆ ನಡೆದ ಗಾಯಕ್ಕೆ ಸೂಕ್ತ ಚಿಕಿತ್ಸೆ ಪಡೆದುಕೊಂಡಿರುವ ಸಮಂತಾ ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ. ನಟ ವರುಣ್ ದವನ್ ಜೊತೆ ಸಮಂತಾ ‘ಸಿಟಡೆಲ್: ಇಂಡಿಯಾ ವರ್ಷನ್‘ ವೆಬ್ ಸಿರೀಸ್‌ನಲ್ಲಿ ಅಭಿನಯಿಸುತ್ತಿದ್ದಾರೆ.
ಸದ್ಯ ಸಮಂತಾ ‘ಶಾಕುಂತಲಂ’ ಚಿತ್ರದ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಜತೆಗೆ ಚಿತ್ರ ‘ಸಿಟಡೆಲ್’ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ತೆಲುಗಿನ ಪುಷ್ಪಾ ಸಿನಿಮಾದ "ಊ ಅಂಟಾವ" ಹಾಡಿನ ಸಮಂತಾ ನೃತ್ಯಕ್ಕೆ ಅಭಿಮಾನಿಗಳು ಖುಷಿ ಆಗಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.