ಶುಕ್ರವಾರ, ಡಿಸೆಂಬರ್ 4, 2020
23 °C

ಸಿನಿಮಾ ಸೆಟ್‌ನಲ್ಲೇ ಅದಿತಿ ಪ್ರಭುದೇವ ದೀಪಾವಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಓಲ್ಡ್‌ ಮಾಂಕ್‌ ಚಿತ್ರನ ನಾಯಕಿ ಅದಿತಿ ಪ್ರಭುದೇವ ಅವರು ಈ ಬಾರಿ ಸಿನಿಮಾ ಸೆಟ್‌ನಲ್ಲೇ ದೀಪಾವಳಿ ಆಚರಿಸಿದರು. 

ಶೂಟಿಂಗ್‌ನಲ್ಲಿ ಬ್ಯುಸಿ ಆಗಿರುವ ಅವರು ಚಿತ್ರತಂಡದೊಂದಿಗೇ ದೀಪಾವಳಿ ಸಂಭ್ರಮದ ಕಾಲ ಕಳೆದರು. 

‘ಕೆಲಸವೂ ಇಲ್ಲದೆ ಹಲವಾರು ತಿಂಗಳು ಕಳೆದಿದ್ದೇವೆ. ಇನ್ನಾದರೂ ಎಲ್ಲರ ಬದುಕಲ್ಲೂ ಬೆಳಕು ಮೂಡಲಿ. ಈ ಹಬ್ಬದ ವೇಳೆಗೆ ಎಲ್ಲವೂ ಸಹಜ ಸ್ಥಿತಿಗೆ ಬರಲಿ ಎಂದು ಆಶಿಸಿದ್ದಾರೆ. 

ಲಾಕ್‌ಡೌನ್‌ ದಿನಗಳನ್ನು ನೆನಪಿಸಿರುವ ಅದಿತಿ, ‘ಕೆಲವು ತಿಂಗಳ ಹಿಂದೆ ವಿಲಕ್ಷಣ ವಲಯದಲ್ಲಿದ್ದಂತಿದ್ದೆ. ಮನೆಯಲ್ಲೇ ಉಳಿಯುವುದು ಸ್ವಲ್ಪ ಬೋರ್‌ ಅನಿಸಿತು. ಮನೆಯ ಕೆಲಸಗಳನ್ನು ಮುಗಿಸಿದ ನಂತರವೂ ನನಗೆ ತುಂಬಾ ಬಿಡುವಿನ ವೇಳೆ ಉಳಿದಿತ್ತು. ಒಬ್ಬರು ಎಷ್ಟು ಪುಸ್ತಕಗಳನ್ನು ಓದಬಹುದು ಅಥವಾ ಎಷ್ಟು ಚಲನಚಿತ್ರಗಳನ್ನು ವೀಕ್ಷಿಸಬಹುದು ಅಲ್ವಾ. ಈಗ ಸಹಜ ಸ್ಥಿತಿಗೆ ಬಂದಿರುವುದು ತುಂಬಾ ಖುಷಿಯಾಗಿದೆʼ ಎಂದಿದ್ದಾರೆ.

ನಾವು ಸುರಕ್ಷಿತವಾಗಿದ್ದೇವೆ. ಸೆಟ್‌ನಲ್ಲಿ ಸಾಂಕ್ರಾಮಿಕದ ಭಯವಂತೂ ಇಲ್ಲ. ಈಗ ತ್ರಿಬಲ್‌ ರೈಡಿಂಗ್‌ ಚಿತ್ರದ ಶೂಟಿಂಗ್‌ ಚಿಕ್ಕಮಗಳೂರಿನಲ್ಲಿ ಶೂಟಿಂಗ್‌ ನಡೆದಿದೆ. ಲವಲವಿಕೆಯಿಂದ ತೊಡಗಿದ್ದೇವೆ ಎಂದು ಅದಿತಿ ಖುಷಿ ಹಂಚಿಕೊಂಡರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು