ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆರೆಗೆ ಬರಲು ಸಿದ್ಧರಾದ ಅದ್ವಿತಿ ಶೆಟ್ಟಿ ನಟನೆಯ ‘ರಾಜರಾಣಿ’ 

Published 28 ಮಾರ್ಚ್ 2024, 23:01 IST
Last Updated 28 ಮಾರ್ಚ್ 2024, 23:01 IST
ಅಕ್ಷರ ಗಾತ್ರ

ಬಹುತೇಕ ಹೊಸಬರಿಂದಲೇ ಕೂಡಿರುವ ‘ರಾಜರಾಣಿ’ ಚಿತ್ರದ ಟ್ರೇಲರ್‌ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ಬಳ್ಳಾರಿಯ ರಣಧೀರ್ ಈ ಚಿತ್ರದ ನಾಯಕ ಮತ್ತು ನಿರ್ದೇಶಕ. ವಿಜಯ್‌ ಬಳ್ಳಾರಿ ಹಾಗೂ ನೇತ್ರಾವತಿ ಮಲ್ಲೇಶ್ ನಿರ್ಮಾಪಕರು.

‘ಪುದಿಯವರುಗಳ್’ ಎಂಬ ತಮಿಳು ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದೆ. ಕನ್ನಡದಲ್ಲಿ ಮೂರು ಚಿತ್ರಗಳಲ್ಲಿ ಅಭಿನಯಿಸಿದೆ. ಇದರ ಅನುಭವದಿಂದಲೇ ಈ ಸಿನಿಮಾಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿ, ನಾಯಕನಾಗಿ ಕಾಣಿಸಿಕೊಂಡಿದ್ದೇನೆ. ಅನಾಥನಾಗಿದ್ದ ನನಗೆ ಬದುಕಿನಲ್ಲಿ ರಾಣಿ ಸಿಗುವುದೇ ಚಿತ್ರದ ಕಥೆ’ ಎಂದರು ರಣಧೀರ್.

ಮಂಡ್ಯ ಮೂಲದ ರಿತನ್ಯಾ ಶೆಟ್ಟಿ ನಾಯಕಿ. ಗಿರಿಜಾ ಲೋಕೇಶ್, ಶೋಭರಾಜ್, ಬಿರಾದಾರ್, ಕಿಲ್ಲರ್‌ ವೆಂಕಟೇಶ್, ಮುಂತಾದವರು ನಟಿಸಿದ್ದಾರೆ. ಒಟ್ಟು ನಾಲ್ಕು ಗೀತೆಗಳಿದ್ದು, ಸುಧನ್‌ ಪ್ರಕಾಶ್ ಸಂಗೀತ ನೀಡಿದ್ದಾರೆ.

ಮಧು-ಶರತ್ ಛಾಯಾಚಿತ್ರಗ್ರಹಣ, ನಿಶಿತ್‌ ಪೂಜಾರಿ ಸಂಕಲನ ಚಿತ್ರಕ್ಕಿದೆ. ಬೆಂಗಳೂರು, ಮಂಗಳೂರು, ಮಾಲೂರು, ಕೋಲಾರ, ಚಿಕ್ಕಮಗಳೂರು, ದೊಡ್ಡಬಳ್ಳಾಪುರಗಳಲ್ಲಿ ಚಿತ್ರೀಕರಣಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT