ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಾರಿಗೋಲ್ಡ್‌’ನೊಂದಿಗೆ ಬಂದ ಸಂಗೀತಾ

Published 11 ಫೆಬ್ರುವರಿ 2024, 23:59 IST
Last Updated 11 ಫೆಬ್ರುವರಿ 2024, 23:59 IST
ಅಕ್ಷರ ಗಾತ್ರ

ಇತ್ತೀಚೆಗಷ್ಟೇ ‘ಬಿಗ್‌ಬಾಸ್‌’ ಶೋ ಮುಗಿಸಿ ಹೊರಬಂದ ನಟಿ ಸಂಗೀತಾ ಶೃಂಗೇರಿ ಸದ್ಯಕ್ಕೆ ‘ಮಾರಿಗೋಲ್ಡ್‌’ ಹಿಡಿದಿದ್ದಾರೆ. ದಿಗಂತ್‌ ಮತ್ತು ಸಂಗೀತಾ ಶೃಂಗೇರಿ ಜೋಡಿಯಾಗಿ ನಟಿಸಿರುವ ಈ ಚಿತ್ರದ ಟೀಸರ್‌ ಬಿಡುಗಡೆಗೊಂಡಿದೆ.

ರಾಘವೇಂದ್ರ ಎಂ. ನಾಯ್ಕ ಆ್ಯಕ್ಷನ್‌–ಕಟ್‌ ಹೇಳಿರುವ ಚಿತ್ರವನ್ನು ಆ‌ರ್.ವಿ ಕ್ರಿಯೇಷನ್ಸ್ ಬ್ಯಾನರ್‌ನಡಿ ರಘುವರ್ಧನ್‌ ನಿರ್ಮಾಣ ಮಾಡಿದ್ದಾರೆ. ‘ಮಾರಿಗೋಲ್ಡ್ ಚಿನ್ನದ ಬಿಸ್ಕತ್ತು ಮಾರಲು ಹೋದ ನಾಲ್ಕು ಹುಡುಗರ ಕಥೆ. ಚಿತ್ರದುರ್ಗ, ಬೆಂಗಳೂರು, ಸಕಲೇಶಪುರ ಮತ್ತಿತರ ಕಡೆ ಚಿತ್ರೀ ಕರಣ ಮಾಡಲಾಗಿದೆ. ಕೋವಿಡ್‌ ನಂತರದ ಬೆಳವಣಿಗೆಗಳು ಚಿತ್ರ ವಿಳಂಬಕ್ಕೆ ಕಾರಣವಾಯಿತು. ಮಾರ್ಚ್‌ನಲ್ಲಿ ತೆರೆಗೆ ಬರುತ್ತೇವೆ’ ಎಂದರು ನಿರ್ದೇಶಕರು. 

‘ನಟ ದಿಗಂತ್ ನನ್ನ ಬಾಲ್ಯದ ಕ್ರಷ್. ಅದನ್ನು ಅವರಿಗೂ ಹೇಳಿದ್ದೇನೆ. ಈ ಚಿತ್ರದಿಂದ ನನ್ನ ಸುಮಾರು‌ ವರ್ಷದ ಕನಸು ನನಸಾಗಿದೆ’ ಎಂದರು ಸಂಗೀತಾ.

ವೀರ್ ಸಮರ್ಥ್ ಸಂಗೀತ, ಕೆ.ಎಸ್.ಚಂದ್ರಶೇಖರ್ ಛಾಯಾಚಿತ್ರಗ್ರಹಣವಿದೆ. ಸಂಪತ್ ಮೈತ್ರೇಯ, ಯಶ್ ಶೆಟ್ಟಿ , ಕಾಕ್ರೋಚ್ ಸುಧೀ, ವಜ್ರಾಂಗ್ ಶೆಟ್ಟಿ, ಬಲ ರಾಜವಾಡಿ ಮತ್ತಿತರರು ಚಿತ್ರದ ತಾರಾಬಳಗದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT