ಮಂಗಳವಾರ, ಏಪ್ರಿಲ್ 13, 2021
31 °C

‘ತಡಪ್‌’ ಮೂಲಕ ಬಾಲಿವುಡ್ ಪ್ರವೇಶಿಸಿದ ಸುನೀಲ್ ಶೆಟ್ಟಿ ಪುತ್ರ ಅಹಾನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಲಿವುಡ್‌ನ ಖ್ಯಾತ ನಟ ಸುನೀಲ್ ಶೆಟ್ಟಿ ಪುತ್ರ ಅಹಾನ್‌ ಶೆಟ್ಟಿ ಬಾಲಿವುಡ್‌ ಪ್ರವೇಶಕ್ಕೆ ಸಿದ್ಧರಾಗಿದ್ದಾರೆ. ಮಿಲನ್ ಲೂಥ್ರಿಯಾ ನಿರ್ದೇಶನದ ‘ತಡಪ್‌’ ಸಿನಿಮಾದ ಮೂಲಕ ಸಿನಿರಂಗಕ್ಕೆ ಕಾಲಿರಿಸುತ್ತಿದ್ದಾರೆ ಅಹಾನ್‌. ಅದ್ಭುತ ಪ್ರೇಮಕಥೆ ಹೊಂದಿರುವ ಈ ಚಿತ್ರದಲ್ಲಿ ಅಹಾನ್‌ಗೆ ಜೋಡಿಯಾಗಿ ತಾರಾ ಸುತಾರಿಯಾ ನಟಿಸುತ್ತಿದ್ದಾರೆ. ಸುನೀಲ್‌ ಶೆಟ್ಟಿ ಅವರ ಆತ್ಮೀಯ ಗೆಳೆಯನಾಗಿರುವ ಅಕ್ಷಯ್ ಕುಮಾರ್ ಇಂದು ಸಿನಿಮಾದ ಪೋಸ್ಟರ್ ಅನ್ನು ಬಿಡುಗಡೆ ಮಾಡಿದ್ದಾರೆ.

ಪೋಸ್ಟರ್‌ನಲ್ಲಿ ಮೈತುಂಬಾ ಗಾಯಗೊಂಡಿರುವ ಅಹಾನ್‌ ನಾಯಕಿಯನ್ನು ತಬ್ಬಿಕೊಂಡಿರುವ ದೃಶ್ಯವಿದೆ. ಇದರಲ್ಲಿ ಅವರ ಮುಖವನ್ನು ತೋರಿಸಿಲ್ಲ.

ಪೋಸ್ಟರ್ ಅನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಅಕ್ಷಯ್ ಕುಮಾರ್‌ ‘ಅಹಾನ್‌ ನಿನಗಿಂದು ಮಹತ್ವದ ದಿನ. ನಿನ್ನ ತಂದೆ ಸುನೀಲ್ ಶೆಟ್ಟಿ ಅವರ ಮೊದಲ ಸಿನಿಮಾದ ಪೋಸ್ಟರ್ ಅನ್ನು ನೋಡಿದ್ದು ನನಗಿನ್ನೂ ನೆನಪಿದೆ. ಇವತ್ತು ನಾನು ನಿನ್ನ ಸಿನಿಮಾ ಪೋಸ್ಟರ್ ಬಿಡುಗಡೆ ಮಾಡುತ್ತಿದ್ದೇನೆ. ನನಗೆ ತುಂಬಾನೇ ಖುಷಿ ಎನ್ನಿಸುತ್ತಿದೆ. ಈ ಸಿನಿಮಾವು ಸೆಪ್ಟೆಂಬರ್ 24ಕ್ಕೆ ಬಿಡುಗಡೆಯಾಗಲಿದೆ’ ಎಂದು ಬರೆದುಕೊಂಡಿದ್ದಾರೆ.

ಸಿನಿಮಾ ಪೋಸ್ಟರ್ ಬಗ್ಗೆ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ ನಟ ಅಜಯ್ ದೇವಗನ್‌. ‘ಇದು ನಿಜಕ್ಕೂ ಭಾವನಾತ್ಮಕವಾದದ್ದು. ಅಹಾನ್ ತುಂಬಾ ಬೇಗ ಬೆಳೆದು ನಿಂತಿದ್ದಾನೆ. ಮಗನ ಮೊದಲ ಸಿನಿಮಾಕ್ಕೆ ಸುನೀಲ್ ಶೆಟ್ಟಿ ಅವರಿಗೆ ಶುಭಾಶಯಗಳು. ಸಾಜಿದ್‌ ನಾದಿಯಾವಾಲ ಹಾಗೂ ಮಿಲನ್ ಲೂಥ್ರಿಯಾ ಎಂಬ ಅದ್ಭುತಗಳ ಕೈಯಲ್ಲಿ ಅಹಾನ್ ಇದ್ದಾನೆ. ಸೆಪ್ಟೆಂಬರ್ 24ಕ್ಕೆ ಸಿನಿಮಾ ನೋಡಿ ಹರಸಿ’ ಎಂದು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

ನಟ ಅಭಿಷೇಕ್‌ ಕೂಡ ಅಹಾನ್ ಜೊತೆಗಿನ ಬಾಲ್ಯದ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಅಲ್ಲದೇ ಸಿನಿಮಾಕ್ಕೆ ಗುಡ್‌ಲಕ್‌ ಹೇಳಿದ್ದಾರೆ.

 

ತಡಪ್‌ ಸಿನಿಮಾವೂ ತೆಲುಗಿನ ಆರ್‌ಎಕ್ಸ್100 ಸಿನಿಮಾದ ರಿಮೇಕ್ ಆಗಿದೆ. ಕಾರ್ತಿಕೇಯ ಗುಮ್ಮಕೊಂಡ ಹಾಗೂ ಪಾಯಲ್ ರಜಪೂತ್ ತೆಲುಗಿನಲ್ಲಿ ನಾಯಕ ನಾಯಕಿಯಾಗಿ ನಟಿಸಿದ್ದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು