ನಟ ರಕ್ಷಿತ್ ಶೆಟ್ಟಿ ನಾಯಕರಾಗಿ ನಟಿಸಿದ್ದ ‘ವಾಸ್ತು ಪ್ರಕಾರ’ ಸಿನಿಮಾ ಮೂಲಕ ಚಂದನವನಕ್ಕೆ ಕಾಲಿಟ್ಟ ನಟಿ ಐಶಾನಿ ಶೆಟ್ಟಿ ತಮ್ಮ ನಿರ್ದೇಶನದ ಮೊದಲ ಸಿನಿಮಾವನ್ನು ತೆರೆಗೆ ತರಲು ಸಜ್ಜಾಗುತ್ತಿದ್ದಾರೆ.

‘ಗಣಿ ಬಿ.ಕಾಂ ಪಾಸ್’, ‘ಹೊಂದಿಸಿ ಬರೆಯಿರಿ’, ‘ಧರಣಿ ಮಂಡಲ ಮಧ್ಯದೊಳಗೆ’ ಹೀಗೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಐಶಾನಿ ಸದ್ಯ ಸ್ಯಾಂಡಲ್ವುಡ್ನಲ್ಲಿ ‘ಶಾಕುಂತಲೆ’ಯಾಗಿ ಗುರುತಿಸಿಕೊಂಡಿದ್ದಾರೆ. ಇದಕ್ಕೆ ‘ನಡುವೆ ಅಂತರವಿರಲಿ’ ಸಿನಿಮಾದ ‘ಶಾಕುಂತಲೆ ಸಿಕ್ಕಳು..’ ಹಾಡು ಕಾರಣ. ಈ ಹೆಸರಿನಿಂದಲೇ ಇದೀಗ ಐಶಾನಿ ಹೊಸ ಹೆಜ್ಜೆ ಇಟ್ಟಿದ್ದಾರೆ. ‘ಶಾಕುಂತಲೆ ಸಿನಿಮಾಸ್’ ಎಂಬ ನಿರ್ಮಾಣ ಸಂಸ್ಥೆಯನ್ನು ಅವರು ಆರಂಭಿಸಿದ್ದಾರೆ. ತನ್ನ ನಿರ್ದೇಶನದ ಸಿನಿಮಾವನ್ನು ಇದೇ ನಿರ್ಮಾಣ ಸಂಸ್ಥೆಯಿಂದ ತೆರೆಗೆ ತರುತ್ತಿದ್ದಾರೆ.

ನಿರ್ದೇಶನ ಐಶಾನಿಗೆ ಹೊಸದಲ್ಲ. ಅವರು ಸ್ನಾತಕೋತ್ತರ ಪದವಿ ಪಡೆಯುತ್ತಿರುವ ಸಂದರ್ಭದಲ್ಲಿ ಸಿಂದಗಿ ಸಮೀಪಕ್ಕೆ ಶೈಕ್ಷಣಿಕ ಪ್ರವಾಸಕ್ಕೆಂದು ಹೋದ ಸಂದರ್ಭದಲ್ಲಿ ನೋಡಿದ, ಅನುಭವಿಸಿದ ಘಟನೆಗಳನ್ನು ಇಟ್ಟುಕೊಂಡು ಕಥೆ ಮಾಡಿದ್ದರು. ಅದನ್ನೇ ‘ಕಾಜಿ’ ಎಂಬ ಕಿರುಚಿತ್ರದ ಮೂಲಕ ಜನರ ಎದುರಿಗೆ ಇಟ್ಟಿದ್ದರು. ಹಲವು ಅಂತರರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡಿದ್ದ ಈ ಕಿರುಚಿತ್ರದಲ್ಲಿ ಹಿತಾ ಚಂದ್ರಶೇಖರ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದರು.

‘ಖುಷಿ, ಭಯ ಎರಡೂ ಇದೆ’

ನಿರ್ಮಾಣ ಸಂಸ್ಥೆ ಆರಂಭಿಸಿರುವುದರ ಕುರಿತು ಮಾತನಾಡಿದ ಐಶಾನಿ, ‘ಖುಷಿ ಮತ್ತು ಸ್ವಲ್ಪ ಭಯ ಇದೆ. ಹೊಸ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದೇನೆ. ನನ್ನ ಜೀವನದಲ್ಲಿ ಸಿನಿಮಾ ವಿಶೇಷವಾದ ಜಾಗ ಪಡೆದಿದೆ. ಕಥೆ ಹೇಳುವುದು ನನ್ನ ಇಷ್ಟದ ಕೆಲಸ. ನಾನೀಗ ಸಿನಿಮಾವೊಂದನ್ನು ನಿರ್ದೇಶನ ಮಾಡುವ ದೊಡ್ಡ ಜವಾಬ್ದಾರಿ ಹೊತ್ತಿದ್ದೇನೆ. ಈ ಕಥೆಯ ಜೊತೆ ಕೆಲಸ ಮಾಡುತ್ತಾ ನನಗೆ ತಿಳಿಯದೇ ಹೊಸ ಪ್ರಪಂಚಕ್ಕೆ ಪ್ರಯಾಣ ಮಾಡಿದೆ. ನನಗೆ ಈ ಕಥೆಯನ್ನ ನಾನೇ ನಿರ್ಮಾಣ ಮಾಡುವ ಆಲೋಚನೆ ಬಂತು. ಈ ಚಿತ್ರವನ್ನು ಸ್ವಂತ ಸಂಸ್ಥೆಯಲ್ಲಿ ಮಾಡಲು ನಿರ್ಧರಿಸಿದೆ. ‘ಶಾಕುಂತಲೆ’ ನನಗೆ ಜನರೇ ಕೊಟ್ಟ ಹೆಸರು. ನಾನು ಎಲ್ಲೆ ಹೋದರೂ ನನ್ನನ್ನು ಪ್ರೀತಿಯಿಂದ ಶಾಕುಂತಲೆ ಎಂದು ಕರೆಯುತ್ತಾರೆ. ಇದು ಸಂತೋಷದ ವಿಷಯ. ಜನರು ನೀಡಿದ ಗೌರವಕ್ಕೆ ಪ್ರತಿಯಾಗಿ ನಿರ್ಮಾಣ ಸಂಸ್ಥೆಗೂ ಅದೇ ಹೆಸರಿಟ್ಟೆ. ಈ ಹೊಸ ಪಯಣದಲ್ಲಿ ಗಟ್ಟಿಯಾಗಿ ನಿಂತು ಜವಾಬ್ದಾರಿ ನಿರ್ವಹಿಸುವುದಕ್ಕೆ ಪಣ ತೊಟ್ಟಿದ್ದೇನೆ’ ಎನ್ನುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.